ಭಾರತೀಯ ಮಾಧ್ಯಮಕ್ಕೆ ಚೀನಾ ಎಚ್ಚರಿಕೆ, GET LOST ಎಂದ ತೈವಾನ್!

By Suvarna News  |  First Published Oct 8, 2020, 8:23 PM IST

ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದರ ನಡುವೆ ಚೀನಾ ಮತ್ತೊಂದು ವಿವಾದ ಸೃಷ್ಟಿಸುವ ಪ್ರಯತ್ನ ಮಾಡಿದೆ. ಆದರೆ ಚೀನಾ ಪ್ರಯತ್ನಕ್ಕೆ ತೈವಾನ್ ವಿದೇಶಾಂಗ ಸಚಿವ ಸರಿಯಾಗಿ ತಿರುಗೇಟು ನೀಡಿದ್ದಾರೆ.


ನವದೆಹಲಿ(ಅ.08): ತೈವಾನ್ ಪ್ರತ್ಯೇಕ ದೇಶವಲ್ಲ. ಇದು ಚೀನಾದ ಭಾಗ. ಭಾರತೀಯ ಮಾಧ್ಯಮಗಳು ತಪ್ಪು ಸಂದೇಶ ರವಾನಿಸಬಾರದು ಎಂದು ದೆಹಲಯಲ್ಲಿರುವ ಚೀನಾ ರಾಯಭಾರ ಕಚೇರಿ ಭಾರತೀಯ ಮಾಧ್ಯಮಗಳಿಗೆ ಸೂಚನೆ ನೀಡಿದೆ. ಚೀನಾ ಸೂಚನೆ ಬೆನ್ನಲ್ಲೇ ತೈವಾನ್ ವಿದೇಶಾಂಗ ಸಚಿವ ತಿರುಗೇಟು ನೀಡಿದ್ದಾರೆ.  

ಚೀನಾ ಸಭ್ಯತೆ ಇಲ್ಲದ ಒರಟು ಕೋಂಡಗಿ; ಡ್ರ್ಯಾಗನ್ ರಾಷ್ಟ್ರದ ಮೇಲೆ ಹರಿಹಾಯ್ದ ಜೆಕ್ ಗಣರಾಜ್ಯ!

Tap to resize

Latest Videos

undefined

ತೈವಾನ್ ರಾಷ್ಟೀಯ ದಿನ ಪ್ರಯುಕ್ತ ಭಾರತೀಯ ಪ್ರಮುಖ ಮಾಧ್ಯಮಗಳಲ್ಲಿ ತೈವಾನ್ ಜಾಹೀರಾತು ಪ್ರಕಟಗೊಂಡಿದೆ. ತೈವಾನ್ ಸರ್ಕಾರ, ಭಾರತದ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಿತ್ತು. ತೈವಾನ್ ಪ್ರಧಾನಿ ಫೋಟೋ ಇರುವ ಈ ಜಾಹೀರಾತಿನಲ್ಲಿ ಪ್ರಭಾಪ್ರಭುತ್ವ ರಾಷ್ಟ್ರವಾದ ತೈವಾನ್‌ಗೆ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಜೊತೆಗಾರ ಎಂದು ಪ್ರಕಟವಾಗಿದೆ.  

ತೈವಾನ್ ಅಧ್ಯಕ್ಷರ ಪ್ರಮಾಣ ವಚನದಲ್ಲಿ ಬಿಜೆಪಿ ಎಂಪಿ ಭಾಗಿ, ಚೀನಾಗೆ ಮತ್ತೊಂದು ಹೊಡೆತ ನೀಡಿದ ಮೋದಿ!.

ತೈವಾನ್ ಜಾಹೀರಾತಿಗೆ ಚೀನಾ ಕೆರಳಿ ಕೆಂಡಾಮಂಡಲವಾಗಿದೆ.  ನವದೆಹಲಿಯಲ್ಲಿರುವ ಭಾರತೀಯ ಮಾಧ್ಯಮಗಳಿಗೆ ಚೀನಾ ಸೂಚನೆ ನೀಡಿದೆ. ಭಾರತೀಯ ಮಾಧ್ಯಮ ಸ್ನೇಹಿತರಿಗೆ ಜಗತ್ತಿನಲ್ಲಿ ಒಂದೇ ಚೀನಾ ಮಾತ್ರ ಇದೆ ಎಂಬುದನ್ನು ನೆನಪಿಸಲು ಬಯಸುತ್ತದೆ. ಸಂಪೂರ್ಣ ಚೀನಾದಲಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಪ್ರತಿನಿಧಿಸುವ ಏಕೈಕ ಕಾನೂನುಬದ್ಧ ಸರ್ಕಾರವಾಗಿದೆ ಎಂದು ಸೂಚನೆಯಲ್ಲಿ ಹೇಳಿದೆ.

ಭಾರತೀಯ ಮಾಧ್ಯಮ ನಿಯಮ ಉಲ್ಲಂಘಿಸಿಬಾರದು. ಜನರಿಗೆ ತಪ್ಪು ಸಂದೇಶ ರವಾನಿಸಬಾರದು. ಪ್ರಮುಖವಾಗಿ ತೈವಾನ್ ಒಂದು ದೇಶವಲ್ಲ. ರಿಪಬ್ಲಿಕ್ ಆಫ್ ಚೀನಾದ ಭಾಗ ಎಂದು ಸೂಚನಯಲ್ಲಿ ಹೇಳಿದೆ. ಚೀನಾ ಸೂಚನೆ ಬೆನ್ನಲ್ಲೇ,  ತೈವಾನ್ ವಿದೇಶಾಂಗ ಸಚಿವ ಜೊಸೆಫ್ ವು, ತಕ್ಕ ತಿರುಗೇಟು ನೀಡಿದ್ದಾರೆ. ಚೀನಾ ಸೂಚನೆಗೆ ನಮ್ಮ ಮಿತ್ರರಾದ ಭಾರತೀಯರ ಉತ್ತರ ತೊಲಗು( Get lost) ಎಂದಿದ್ದಾರೆ.

ವಿಶ್ವದಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಭಾರತದಲ್ಲಿ ಮಾಧ್ಯಮಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ಕಮ್ಯೂನಿಸ್ಟ್ ರಾಷ್ಟ್ರ ಚೀನಾ, ಇದೀಗ ಏಷ್ಯಾ ಉಪಖಂಡ ರಾಷ್ಟ್ರದ ಮೇಲೆ ನೀತಿ ಸಂಹಿತಿ ಜಾರಿ ಮಾಡುವ ಪ್ರಯತ್ನ ಮಾಡುತ್ತಿದೆ. ಚೀನಾದ ಈ ಪ್ರಯತ್ನಕ್ಕೆ ತೈವಾನ್ ಮಿತ್ರ ಭಾರತೀಯರ ಉತ್ತರ ಗೆಟ್ ಲಾಸ್ಟ್ ಎಂದು ಜೊಸೆಫ್ ವು ಹೇಳಿದ್ದಾರೆ.

click me!