ಮೂತ್ರದ ಬಾಟಲ್‌ ಎಸೆದು ತಬ್ಲೀಘಿ ಸದಸ್ಯರ ವಿಕೃತಿ!

By Kannadaprabha NewsFirst Published Apr 9, 2020, 8:49 AM IST
Highlights

ಮೂತ್ರದ ಬಾಟಲ್‌ ಎಸೆದು ತಬ್ಲೀಘಿ ಜಮಾತ್‌ಗಳ ವಿಕೃತಿ| ದೆಹಲಿ ಕ್ವಾರಂಟೈನ್‌ ಹೋಮ್‌ನಲ್ಲಿ ಕೀಳುಕೃತ್ಯ

ನವದೆಹಲಿ(ಏ.09): ಕೊರೋನಾ ಸೋಂಕು ತಗುಲಿರಬಹುದಾದ ಶಂಕೆ ಮೇಲೆ ಇಲ್ಲಿನ ಕ್ವಾರಂಟೈನ್‌ ಹೋಮ್‌ಗಳಲ್ಲಿ ಇಡಲಾಗಿರುವ ತಬ್ಲೀಘಿ ಜಮಾತ್‌ ಕಾರ್ಯಕರ್ತರು ತಮ್ಮ ಕೀಳು ಕೃತ್ಯಗಳನ್ನು ಮುಂದುವರೆಸಿದ್ದು, ಇದೀಗ ಸ್ವಚ್ಛತಾ ಸಿಬ್ಬಂದಿ ಮೇಲೆ ಮೂತ್ರ ತುಂಬಿದ ಬಾಟಲ್‌ಗಳನ್ನು ಎಸೆದಿದ್ದಾರೆ.

ದೆಹಲಿಯ ದ್ವಾರಕಾದಲ್ಲಿರುವ ದೆಹಲಿ ನಗರ ಗÜೃಹ ಅಭಿವೃದ್ಧಿ ಮಂಡಳಿಯ ಫ್ಯ್ಲಾಟ್‌ಗಳಲ್ಲಿ ಸ್ವಚ್ಛತಾ ಸಿಬ್ಬಂದಿ ಮಂಗಳವಾರ ಬೆಳಗ್ಗೆ ತೆರಳಿದ್ದ ವೇಳೆ ಈ ಕೃತ್ಯ ನಡೆದಿದೆ. ಈ ಕುರಿತು ಗೃಹ ಮಂಡಳಿ ಸಿಬ್ಬಂದಿ ನೀಡಿದ ದೂರು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

'ಘಟಾನುಘಟಿಗಳು, ಮುತ್ಸದ್ಧಿಗಳು, ಇಸ್ಲಾಂ ಅಪಾಯ ಅಂದಾಜಿಸುವಲ್ಲಿ ವಿಫಲರಾದರೇ?' ಹೆಗಡೆ ಪ್ರಶ್ನೆ ಒಳಾರ್ಥ!

ಇನ್ನು ಪೊಲೀಸರು ತನಿಖೆಗೆ ತೆರಳಿದ್ದ ವೇಳೆ ಸ್ಥಳದಲ್ಲಿ ಎರಡು ಮೂತ್ರ ತುಂಬಿದ್ದ ಬಾಟಲ್‌ಗಳು ಕೂಡಾ ಪತ್ತೆಯಾಗಿವೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಒಂದು ವೇಳೆ ತಮಗೆ ಕೊರೋನಾ ಸೋಂಕು ತಗುಲಿದೆ ಎಂದಾದಲ್ಲಿ ಇದು ಇತರರಿಗೂ ಹಬ್ಬಲಿ ಎಂಬ ಕೀಳು ಮನೋಭಾವದಿಂದ ತಬ್ಲೀಘಿಗಳು ಇಂಥ ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿದೆ.

"

ತಬ್ಲೀಘಿಗಳನ್ನು ದೆಹಲಿಯ ನಿಜಾಮುದ್ದೀನ್‌ ಮಸೀದಿಯಿಂದ ತೆರವುಗೊಳಿಸಿ ಕ್ವಾರಂಟೈನ್‌ ಹೋಮ್‌ಗೆ ಹಾಕಿದ ಬಳಿಕ ಒಂದಲ್ಲಾ ಒಂದು ರೀತಿಯ ಕೃತ್ಯಗಳನ್ನು ಎಸಗುತ್ತಲೇ ಇದ್ದಾರೆ. ಮೊದಲಿಗೆ ಕ್ವಾರಂಟೈನ್‌ ಹೋಮ್‌ಗಳಲ್ಲಿ ಊಟ ಸರಿ ಇಲ್ಲ ಎಂದು ಕ್ಯಾತೆ ತೆಗೆದಿದ್ದರು. ಬಳಿಕ ವೈದ್ಯಕೀಯ ಸಿಬ್ಬಂದಿ ಎದುರೇ ನಗ್ನವಾಗಿ ತಿರುಗಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದರು. ಬಳಿಕ ಕ್ವಾರಂಟೈನ್‌ ಹೋಮ್‌ನಲ್ಲಿ ಎಲ್ಲೆಂದರಲ್ಲಿ ತಿರುಗಾಡದಂತೆ ಸೂಚಿಸಿದ್ದರೂ ಮನಬಂದಂತೆ ತಿರುಗಾಡುತ್ತಿದ್ದರು. ವೈದ್ಯರು ಸೂಚಿಸಿದ್ದ ಔಷಧಿ ಸ್ವೀಕರಿಸಲು ನಿರಾಕರಿಸಿದ್ದರು. ಕೊಠಡಿಯ ಹೊರಗೇ ಮಲ ವಿಸರ್ಜನೆಯಂಥ ಅತ್ಯಂತ ಕೀಳು ಕೃತ್ಯವನ್ನೂ ಮಾಡಿದ್ದರು.

ಕ್ವಾರಂಟೈನ್‌ ಸ್ಥಳ​ದಲ್ಲಿ ಮಲ ವಿಸರ್ಜನೆ: ತಬ್ಲೀಘಿಗಳಿಂದ ಮತ್ತೆ ದುರ್ವರ್ತನೆ!

"

click me!