
ನವದೆಹಲಿ(ಏ.08): ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಹೇರಲಾಗಿದೆ. ಹೀಗಿದ್ದರೂ ಕೊರೋನಾ ಅಟ್ಟಹಾಸ ಮಾತ್ರ ಕುಗ್ಗಿಲ್ಲ. ಬದಲಾಗಿ ಈವರೆಗೂ ಕೊರೋನಾ ಪೀಡಿತರ ಸಂಖ್ಯೆ ಐದು ಸಾವಿರ ದಾಟಿದ್ದು, ಸಾವಿನ ಸಂಖ್ಯೆಯೂ ಹೆಚ್ಚಿದೆ. ಹೀಗಿರುವಾಗ ಕಳೆದೆರಡು ವಾರದಿಂದ ಮನೆಯಲ್ಲೇ ಕೈದಿಗಳಂತಿರುವ ಜನರ ಮನಸ್ಸಿನಲ್ಲಿ ಏಪ್ರಿಲ್ 14ರಂದು ಲಾಕ್‌ಡೌನ್ ತೆರವಾಗುತ್ತಾ? ಅಥವಾ ಮುಂfದುವರೆಯುತ್ತಾ ಎಂಬ ಪ್ರಶ್ನೆ ಸಹಜವಾಗೇ ಮನೆ ಮಾಡಿದೆ. ಸದ್ಯ ಇಂದು ಪಿಎಂ ಮೋದಿ ನೇತೃತ್ವದಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಈ ಸಂಬಂಧ ಸುಳಿವು ಲಭ್ಯವಾಗಿದೆ.
ವಾಹನವಿಲ್ಲ, ಕುಟುಂಬಸ್ಥರು ಬರುತ್ತಿಲ್ಲ: ಹಿಂದೂ ಮಹಿಳೆಯ ಶವ ಹೊತ್ತೊಯ್ದ ಮುಸ್ಲಿಂ ಯುವಕರು!
ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸರ್ವ ಪಕ್ಷಗಳ ಸಭೆ ನಡೆಸಿದ್ದು, ಈ ವೇಳೆ ಲಾಖ್‌ಡೌನ್ ಏಪ್ರಿಲ್ 14ರಂದು ತೆರವುಗೊಳಿಸುವುದು ಅಸಾಧ್ಯ ಎಂಬ ಸುಳಿವು ನೀಡಿದ್ದಾರೆ. ಲಾಕ್‌ಡೌನ್ ಮಾಡಿದ್ದರೂ ಕೊರೋನಾ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮುಂದುವರೆಸುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸೋಂಕಿತರ ಸಂಖ್ಸಯೆ ಐದು ಸಾವಿರ ಗಡಿ ದಾಟಿದ್ದ್ಯದು, ಹೀಗಿರುವಾಗ ಇಂತಹ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಮುಂದುವರೆಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ