ಇಡ್ಲಿ ವಿರೋಧಿಗೆ ಟಾಂಗ್‌ ಕೊಟ್ಟ ತರೂರ್‌ಗೆ ಸ್ವಿಗ್ಗಿ ಇಡ್ಲಿ ಬಾಕ್ಸ್‌ ಉಡುಗೊರೆ

Sujatha NR   | Kannada Prabha
Published : Sep 30, 2025, 03:49 AM IST
Shashi taroor

ಸಾರಾಂಶ

ಇಡ್ಲಿ ಬಗ್ಗೆ ವ್ಯಂಗ್ಯವಾಡಿದ್ದ ವ್ಯಕ್ತಿಯೊಬ್ಬರಿಗೆ ತಾವೇ ಇಡ್ಲಿ ತಯಾರಿಸುತ್ತಿರುವ ಎಐ ಚಿತ್ರ ಹಂಚಿಕೊಂಡು ತಿರುಗೇಟು ನೀಡಿದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರಿಗೆ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಇಡ್ಲಿ ಕೊಟ್ಟು ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದೆ.

ತಿರುವಂತಪುರಂ: ಇಡ್ಲಿ ಬಗ್ಗೆ ವ್ಯಂಗ್ಯವಾಡಿದ್ದ ವ್ಯಕ್ತಿಯೊಬ್ಬರಿಗೆ ತಾವೇ ಇಡ್ಲಿ ತಯಾರಿಸುತ್ತಿರುವ ಎಐ ಚಿತ್ರ ಹಂಚಿಕೊಂಡು ತಿರುಗೇಟು ನೀಡಿದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರಿಗೆ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಇಡ್ಲಿ ಕೊಟ್ಟು ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದೆ. ಸ್ವಿಗ್ಗಿ ತಂಡದ ಯುವಕರು ತರೂರ್ ಮನೆಗೆ ತೆರಳಿ ಬಿಸಿ ಬಿಸಿ ಇಡ್ಲಿ ನೀಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸ್ವಿಗ್ಗಿ, ‘ತರೂರ್ ಜಿ ಅವರಿಗೆ ಈ ಪ್ರದೇಶದ ಅತ್ಯುತ್ತಮ ಇಡ್ಲಿಯನ್ನು ನೀಡುವ ಅವಕಾಶ ಸಿಕ್ಕಿದ್ದು ನಮಗೆ ಅತ್ಯಂತ ಸಂತೋಷದ ವಿಷಯ. ನಮ್ಮ ತಂಡವು ಅವರ ನಾಲಿಗೆಯನ್ನು ತೃಪ್ತಿಪಡಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಪಾಕಶಾಲೆಯ ಈ ಅಪ್ರತಿಮ ಅದ್ಭುತಗಳು ಅವರನ್ನು ಪರಮಾನಂದದ ಸ್ಥಿತಿಗೆ ತಂದಿವೆ ಎಂದು ನಾವು ಭಾವಿಸುತ್ತೇವೆ’ ಎಂದಿದೆ.

40 ದಿನದಲ್ಲಿ ಸಿಸಿಟೀವಿ ಇಲ್ಲದ 13 ಹೋಟೆಲಲ್ಲಿ ತಂಗಿದ್ದ ಕಾಮಿಸ್ವಾಮಿ

ನವದೆಹಲಿ: ದೆಹಲಿಯ ಕಾಲೇಜಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಚೈತನ್ಯಾನಂದ, ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ 40 ದಿನದಲ್ಲಿ 13 ಹೋಟೆಲ್‌ ಬದಲಾಯಿಸಿದ್ದ ಎಂದು ತಿಳಿದುಬಂದಿದೆ. ಆಗಸ್ಟ್‌ನಲ್ಲಿ ವಿದೇಶದಿಂದ ಮರಳಿದ್ದ ಈತ, ತನ್ನ ವಿರುದ್ಧ ಕೇಸು ದಾಖಲಾಗಿದ್ದು ತಿಳಿಯುತ್ತಲೇ ದೆಹಲಿಯಿಂದ ಕಾಲ್ಕಿತ್ತಿದ್ದ. ಬಳಿಕ ಸಿಸಿಟೀವಿ ಇಲ್ಲದ ಹೋಟೆಲ್‌ಗಳನ್ನೇ ಗುರುತಿಸಿ ಅಲ್ಲಿ ಉಳಿದುಕೊಳ್ಳುತ್ತಿದ್ದ. ತನ್ನ ಬಳಿ ಇದ್ದ 3 ಫೋನ್‌, 1 ಐಪ್ಯಾಡ್‌ ಯಾವುದನ್ನು ಬಳಸದೆ, ತನ್ನ ಸಹಚರನ ಫೋನ್‌ ಮೂಲಕ ಹೋಟೆಲ್‌ ಬುಕ್‌ ಮಾಡುತ್ತಿ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಎಲ್ರು ಅಮ್ಮನು ಸಾಯ್ತಾರೆ; ರಜೆ ಕೇಳಿದ ಕಿರಿಯಗೆ ಬ್ಯಾಂಕ್‌ ಅಧಿಕಾರಿ ತರಾಟೆ

ಚೆನ್ನೈ: ತಾಯಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಜೆ ಕೋರಿದ್ದ ಉದ್ಯೋಗಿಯೊಬ್ಬರಿಗೆ ಯುಕೋ ಬ್ಯಾಂಕ್‌ನ ಮೇಲಧಿಕಾರಿ, ‘ಎಲ್ಲರೂ ತಾಯಂದಿರೂ ಸಾಯುತ್ತಾರೆ. ನಾಟಕ ಮಾಡಬೇಡಿ. ತಕ್ಷಣ ಕೆಲಸಕ್ಕೆ ಬನ್ನಿ’ ಎಂದು ಎಚ್ಚರಿಸಿದ ಅಮಾನವೀಯ ಘಟನೆ ಚೆನ್ನೈನಲ್ಲಿ ನಡೆದಿದೆ. ಉದ್ಯೋಗಿಯೊಬ್ಬರು ತಾಯಿ ಸಾವಿನ ಹಿನ್ನೆಲೆಯಲ್ಲಿ ರಜೆ ಕೋರಿ ಚೆನ್ನೈ ವಿಭಾಗ ಮುಖ್ಯಸ್ಥ ಆರ್.ಎಸ್‌. ಅಜಿತ್‌ಗೆ ಇಮೇಲ್‌ ಮಾಡಿದ್ದರು. ಇದಕ್ಕೆ ಅಜಿತ್‌, ‘ಎಲ್ಲರ ತಾಯಂದಿರೂ ಸಾಯುತ್ತಾರೆ. ನಾಟಕೀಯವಾಗಿ ವರ್ತಿಸಬೇಡಿ, ಪ್ರಾಯೋಗಿಕವಾಗಿರಿ. ತಕ್ಷಣ ಕೆಲಸಕ್ಕೆ ಬನ್ನಿ, ಇಲ್ಲದಿದ್ದರೆ ವೇತನ ರಹಿತ ರಜೆ ಎಂದು ಗುರುತಿಸಬೇಕಾಗುತ್ತದೆ’ ಎಂದು ಅಮಾನವೀಯವಾಗಿ ಪ್ರತಿಕ್ರಿಯಿಸಿದ್ದಾರೆ.

ಭೂತಾನ್‌ಗೆ 4000 ಕೋಟಿ ವೆಚ್ಚದಲ್ಲಿ ರೈಲ್ವೆ ಸಂಪರ್ಕ  

ನವದೆಹಲಿ:  ಭೂತಾನ್‌ಗೆ ಹೊಸ ರೈಲು ಮಾರ್ಗ ನಿರ್ಮಿಸುವುದಾಗಿ ಭಾರತ ಸರ್ಕಾರ ಪ್ರಕಟಿಸಿದೆ. ಪಶ್ಚಿಮ ಬಂಗಾಳದ ಬನರ್ಹಟ್‌ನಿಂದ ಭೂತಾನ್‌ನ ಸಂಟ್ಸೆ ಮತ್ತು ಅಸ್ಸಾಂ ಕೊಕ್ರಾಜ್‌ಹರ್‌ನಿಂದ ಗೆಲೆಫು ನಡುವೆ ಒಟ್ಟು 89 ಕಿ.ಮೀ ರೈಲು ಮಾರ್ಗವನ್ನು 4033 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲಾಗುವುದು. ಯೋಜನೆಯ ಪೂರ್ಣ ವೆಚ್ಚವನ್ನು ಭಾರತ ಭರಿಸಲಿದೆ. ಬನರ್ಹಟ್‌ ಮತ್ತು ಸಂಟ್ಸೆ ನಡುವಿನ 20 ಕಿ.ಮೀ ಮಾರ್ಗದಲ್ಲಿ 2.39 ಕಿ.ಮೀ ಭೂತಾನ್‌ ವ್ಯಾಪ್ತಿಯಲ್ಲಿ ಇರಲಿದೆ. ಕೊಕ್ರಾಜ್‌ಹರ್‌ನಿಂದ ಗೆಲೆಫು ಮಧ್ಯೆ 69 ಕಿ.ಮೀ ಮಾರ್ಗ ನಿರ್ಮಾಣವಾಗಲಿದೆ. ಎರಡೂ ಪ್ರದೇಶಗಳ ನಡುವೆ 6 ನಿಲ್ದಾಣಗಳಿರಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಅಂತರ್ಜಲ ಕುಸಿತ ಭೀತಿ: ಭತ್ತ ಕೃಷಿಗೆ ತಾತ್ಕಾಲಿಕ ನಿಷೇಧ! ಮೆಕ್ಕೆಜೋಳ ಬೆಳೆಯಲು ಶಿಫಾರಸ್ಸು
ಜ.20ಕ್ಕೆ ನಿತಿನ್‌ ಬಿಜೆಪಿ ಅಧ್ಯಕ್ಷ?