ರಂಗೋಲಿಯಲ್ಲಿ ಐ ಲವ್‌ಮೊಹಮ್ಮದ್‌ : ಮಹಾಗ್ರಾಮ ಉದ್ವಿಗ್ನ ಸ್ಥಿತಿ - ಆರೋಪಿ ವಶಕ್ಕೆ

Kannadaprabha News   | Kannada Prabha
Published : Sep 30, 2025, 03:39 AM IST
I Love Muhammad

ಸಾರಾಂಶ

ಐ ಲವ್‌ ಮೊಹಮ್ಮದ್‌ ’ ವಿವಾದ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಶಾಂತಿಗೆ ಕಾರಣವಾಗಿರುವ ನಡುವೆಯೇ, ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್‌ ರಜ್ವಿ ಬರೇಲ್ವಿ, ‘ಪ್ರವಾದಿ ಮೇಲಿನ ಪ್ರೀತಿ ಹೃದಯದಲ್ಲಿರಬೇಕೇ ಹೊರತು, ಬೀದಿಯಲ್ಲಲ್ಲ. ಶಾಂತಿ ಕಾಪಾಡಬೇಕು’ ಎಂದು ಕರೆ ನೀಡಿದ್ದಾರೆ.

ಮುಂಬೈ: ಐ ಲವ್‌ ಮೊಹಮ್ಮದ್‌ ವಿವಾದ ದಿನೇ ದಿನೇ ಐ ಲವ್‌ ಮೊಹಮ್ಮದ್‌ ವಿವಾದ ವ್ಯಾಪಕವಾಗುತ್ತಿದ್ದು, ಇದೀಗ ಮಹಾರಾಷ್ಟ್ರದ ಅಹಲ್ಯಾನಗರದ ಮಿಲಿವಾಡಾದಲ್ಲಿ ಗುಂಪೊಂದು ರಂಗೋಲಿಯಲ್ಲಿ ಐ ಲವ್‌ ಮೊಹಮ್ಮದ್‌ ಎಂದು ಬರೆದಿದೆ. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ರಂಗೋಲಿ ಬಿಡಿಸಿದವನನ್ನು ಪೊಲೀಸರು ಬಂಧಿಸಿದರಾದರೂ ಕ್ರೋಧ ತಣಿಯದೆ, ಮುಸ್ಲಿಂ ಯುವಕರು ಹೆದ್ದಾರಿ ತಡೆದು, ಕಲ್ಲುತೂರಾಟ ನಡೆಸಿದ್ದಾರೆ.

ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು, 30 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ‘ಕೋಮುಸಾಮರಸ್ಯ ಹಾಳುಗೆಡಹುವ ಉದ್ದೇಶದಿಂದಲೇ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸುವ ಅಗತ್ಯವಿದೆ’ ಎಂದು ಹೇಳಿದ್ದಾರೆ.ಪ್ರವಾದಿ ಮೇಲಿನ ಪ್ರೀತಿ

ಹೃದಯದಲ್ಲಿರಲಿ, ಬೀದಿ

ಮೇಲಲ್ಲ: ಮೌಲ್ವಿ ಕರೆ

ಬರೇಲಿ: ‘ಐ ಲವ್‌ ಮೊಹಮ್ಮದ್‌ ’ ವಿವಾದ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಶಾಂತಿಗೆ ಕಾರಣವಾಗಿರುವ ನಡುವೆಯೇ, ಆಲ್‌ ಇಂಡಿಯಾ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್‌ ರಜ್ವಿ ಬರೇಲ್ವಿ, ‘ಪ್ರವಾದಿ ಮೇಲಿನ ಪ್ರೀತಿ ಹೃದಯದಲ್ಲಿರಬೇಕೇ ಹೊರತು, ಬೀದಿಯಲ್ಲಲ್ಲ.  

ಎಲ್ಲರೂ ಶಾಂತಿ ಕಾಪಾಡಬೇಕು’ ಎಂದು ಕರೆ ನೀಡಿದ್ದಾರೆ.ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ‘ಪ್ರವಾದಿಯವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಬಳಸುವ ವಿಧಾನಗಳು ಸೂಕ್ತವಲ್ಲ. ಈ ಕ್ರಮಗಳು ‘ಮೊಹಮ್ಮದ್’ ಹೆಸರಿನ ಪೋಸ್ಟರ್‌ಗಳನ್ನು ಹರಿದು, ಬೀಳಿಸಿ, ಅಪವಿತ್ರಗೊಳಿಸುತ್ತವೆ. ಇತರ ಧರ್ಮಗಳ ಹಬ್ಬಗಳ ಸಮಯದಲ್ಲಿ ಪ್ರದರ್ಶನಗಳು, ಮೆರವಣಿಗೆಗಳು ಅಥವಾ ಆಂದೋಲನಗಳನ್ನು ನಡೆಸದಂತೆ ನಾನು ಸಲಹೆ ನೀಡುತ್ತೇನೆ. ಪ್ರವಾದಿಯವರ ಮೇಲಿನ ಪ್ರೀತಿ ಬೀದಿಗಳ ಮೇಲಲ್ಲ, ಹೃದಯಗಳಲ್ಲಿರಬೇಕು’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೀದಿನಾಯಿ ಇಷ್ಟ ಆದ್ರೆ ಮನೇಲಿ ಸಾಕಿ: ಸುಪ್ರೀಂ
India Latest News Live: ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್!