ಪೆಟ್ರೋಲ್‌ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತಿದ್ದ ಅಣ್ಣತಂಗಿಗೆ ಸ್ವಿಗ್ಗಿ ಬಾಯ್‌ ಸಹಾಯ

By Suvarna NewsFirst Published Mar 7, 2022, 1:30 PM IST
Highlights
  • ತನ್ನ ವಾಹನದ ಪೆಟ್ರೋಲ್‌ ನೀಡಿ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಬಾಯ್‌
  • ಪೆಟ್ರೋಲ್‌ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತಿದ್ದ ಅಣ್ಣತಂಗಿ
  • ಇನ್ಸ್ಟಾಗ್ರಾಮ್‌ನಲ್ಲಿ ಸ್ವಿಗಿ ಬಾಯ್‌ಗೆ ಶ್ಲಾಘನೆ

ಮಧ್ಯರಾತ್ರಿ ನಡುರಸ್ತೆಯಲ್ಲಿ ಪೆಟ್ರೋಲ್‌ ಖಾಲಿಯಾಗಿ ಸಂಕಷ್ಟದಲ್ಲಿದ್ದ ಅಣ್ಣ ತಂಗಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬರು ಸಹಾಯ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ. ತಮ್ಮದೇ ವಾಹನದಿಂದ ಪೆಟ್ರೋಲ್‌ ತೆಗೆದು ಈ ಅಣ್ಣ ತಂಗಿಗೆ ನೀಡುವ ಮೂಲಕ ಸಹಾಯ ಮಾಡಿದ್ದು, ಇವರ ಸಹಾಯವನ್ನು ಸಹೋದರಿ ಸಾಮಾಜಿಕ ಜಾಲತಾಣವಾದ ಲಿಂಕ್ಡಿನ್‌ನಲ್ಲಿ ಬರೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಪೋಸ್ಟ್‌ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಅಲ್ಲದೇ ಡೆಲಿವರಿ ಬಾಯ್‌ ಸಹಾಯಕ್ಕೆ ಇನ್ಸ್ಟಾಗ್ರಾಮ್‌ ಬಳಕೆದಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  

ಮುಂಬೈ ಮೂಲದ ಅಕ್ಷಿತಾ ಚಂಗನ್‌ (Akshita Changan) ಹಾಗೂ ಅವರ ಸಹೋದರ ಸ್ವಿಗ್ಗಿ ಡೆಲಿವರಿ ಬಾಯ್‌ನಿಂದ ಸಹಾಯ ಪಡೆದವರಾಗಿದ್ದು, ಅವರು ತಮಗೆ ಸಹಾಯ ಮಾಡಿದ ಯುವಕನ ಮಾನವೀಯ ಕಾರ್ಯವನ್ನು ಶ್ಲಾಘಿಸುವ ಸಲುವಾಗಿ ಲಿಂಕ್ಡಿನ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಒಂದು ತಿಂಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಡೆಲಿವರಿ ಬಾಯ್ ರೋಷನ್ ದಾಲ್ವಿ (Roshan Dalvi) ತಮಗೆ ಹೇಗೆ ಸಹಾಯ ಮಾಡಿದ ಎಂಬುದನ್ನು ಅಕ್ಷಿತಾ ಬರೆದುಕೊಂಡಿದ್ದಾರೆ. 

Latest Videos

IT Probe On Food Delivery Apps: ಡಿಸ್ಕೌಂಟ್ ನೀಡಿ ತಗಲಾಕಿಕೊಂಡ ಜೊಮ್ಯಾಟೋ, ಸ್ವಿಗ್ಗಿ; ಆದಾಯ ತೆರಿಗೆ ಇಲಾಖೆಯಿಂದ ತನಿಖೆ!
 

ಆ ಸಮಯದಲ್ಲಿ 17 ಡಿಗ್ರಿ ತಾಪಮಾನವಿತ್ತು. ಗಡಿಯಾರದಲ್ಲಿ ಸಮಯ ರಾತ್ರಿ  12.15 ಗಂಟೆ ತೋರಿಸುತ್ತಿತ್ತು. ಇಂಧನ ಇಲ್ಲದ ಕಾರಣ ನನ್ನ ಬೈಕ್ ಇದ್ದಕ್ಕಿದ್ದಂತೆ ಮನೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ನಿಂತಿತು. ಯಾವುದೇ ಪ್ರಯಾಣಿಕರು ಕಾಣಿಸದ ನಿಶ್ಯಬ್ದ ರಾತ್ರಿ, ನಾನು ಮತ್ತು ನನ್ನ ಸಹೋದರ ರಸ್ತೆಬದಿಯಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದೆವು. ಈ ವೇಳೆ ಡೆಲಿವರಿ ಮಾಡುವ ವ್ಯಕ್ತಿ ತನ್ನ ಮೊಬೈಲ್ ಫೋನ್‌ನಲ್ಲಿ ವಿಳಾಸವನ್ನು ಪರಿಶೀಲಿಸುತ್ತಿರುವುದನ್ನು ನಾವು ನೋಡಿದೆವು. ಬಳಿಕ ನನ್ನ ಸಹೋದರ ಸಹಾಯಕ್ಕಾಗಿ ಆತನಲ್ಲಿ ಕೇಳಿದನು. ಅಲ್ಲದೇ ನಮ್ಮ ಬೈಕನ್ನು ಎಳೆಯುವಂತೆ ಆತನಲ್ಲಿ ಕೇಳಿದನು, ಆದರೆ ಬೈಕ್‌ ಎಳೆಯುವುದಕ್ಕೆ ನಿರಾಕರಿಸಿದ ಆತ ತಾನು ಬೇರೆ ದಾರಿಯಲ್ಲಿ ಹೋಗುತ್ತಿದ್ದೇನೆ ಹಾಗೂ ಆಹಾರ ಡೆಲಿವರಿ ಮಾಡುವುದು ತಡವಾಗುವಂತಿಲ್ಲ ಎಂದು ಹೇಳಿದನು.

ಅಸ್ವಸ್ಥನ ಆಸ್ಪತ್ರೆಗೆ ಸೇರಿಸಲು ನೆರವಾಗಿ ಮಾನವೀಯತೆ ಮೆರೆದ Swiggy Delivery Boy
 

ನಂತರ ಆತ ನಮ್ಮಲ್ಲಿ ನೀರಿನ ಬಾಟಲಿ ಇದೆಯೇ ಎಂದು ಕೇಳಿದನು. ಆದರೆ ಆದರೆ ದುರದೃಷ್ಟವಶಾತ್, ನಮ್ಮಲ್ಲಿ ಯಾವುದೂ ಇರಲಿಲ್ಲ, ಆದ್ದರಿಂದ ಆತ ತನ್ನ ಡೆಲಿವರಿ ಬ್ಯಾಗ್ ಅನ್ನು ತೆಗೆದು, ಆತನ ಸ್ವಂತ ನೀರಿನ ಬಾಟಲ್‌ ತೆಗೆದು ಅದರಲ್ಲಿದ್ದ ನೀರನ್ನು ಚೆಲ್ಲಿ ಬಳಿಕ ಆತನ ಗಾಡಿಯಿಂದ ಪೆಟ್ರೋಲ್‌ನ್ನು ತೆಗೆದು  ಹತ್ತಿರದ ಪೆಟ್ರೋಲ್‌ ಪಂಪ್‌ಗೆ ತೆರಳಲು ಬೇಕಾಗುವಷ್ಟು ಪೆಟ್ರೋಲ್‌ ಅನ್ನು ತೆಗೆದು ಕೊಟ್ಟನು. ಆತನ ಗುಣವನ್ನು ನೋಡಿ ನಾನು ಬೆರಗಾದೆ. ನಮ್ಮ ಪಾಲಿಗೆ ಆತ ಆ ಕ್ಷಣದಲ್ಲಿ ಬಂದ ದೇವರಾಗಿದ್ದ. ನಮಗೆ ಪೆಟ್ರೋಲ್ ನೀಡಿದ ನಂತರ ಆತ ತನ್ನ ಕೆಲಸಕ್ಕಾಗಿ ಹೊರಟು ಹೋದ. ಆತ ನಮ್ಮ ಮೇಲೆ ಕರುಣೆ ತೋರಿದ ಎಂದು ಅಕ್ಷಿತಾ ಅವರು ತಮ್ಮ ಲಿಂಕ್ಡ್ಇನ್‌ ಅಲ್ಲಿ ಬರೆದುಕೊಂಡಿದ್ದಾರೆ. 

ಕಳೆದ ತಿಂಗಳು ಸ್ವಿಗ್ಗಿ ಡೆಲಿವರಿ ಬಾಯ್‌ ಒಬ್ಬರು ಟ್ರಾಫಿಕ್‌ ಮಧ್ಯೆ ಸಿಲುಕಿದ್ದ ಅಸ್ವಸ್ಥರೊಬ್ಬರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದರು. ಸ್ವಿಗ್ಗಿ ಸಂಸ್ಥೆಯಲ್ಲಿ ಡೆಲಿವರಿ ಕೆಲಸ ಮಾಡುವ ಮೃಣಾಲ್ ಕಿರ್ದತ್‌ (Mrunal Kirdat) ಅವರೇ ಅಂದು ನಿವೃತ್ತ ಕರ್ನಲ್ ಮನ್ ಮೋಹನ್ ಮಲಿಕ್ ಎಂಬುವವರಿಗೆ ಸಹಾಯ ಮಾಡಿದ ಡೆಲಿವರಿ ಬಾಯ್‌

click me!