ಕೀವ್(ಮಾ.7): ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಜನ ಜೀವನ ಸಂಪೂರ್ಣ ನರಕವಾಗಿದೆ. ಅದಾಗ್ಯೂ ಉಕ್ರೇನಿಗರ ಜೀವನೋತ್ಸಾಹಕ್ಕೆ ಮಾತ್ರ ಯಾವುದೇ ಭಂಗವಾಗಿಲ್ಲ. ಕೊನೆ ಉಸಿರಿರುವವರೆಗೂ ಹೋರಾಡಲು ನಿರ್ಧರಿಸಿರುವ ಉಕ್ರೇನಿಗರ ಧೈರ್ಯ ಸಾಹಸದ ಹಲವು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಈಗ ಉಕ್ರೇನ್ ಸೇನಾ ಜೋಡಿಯೊಂದು ಯುದ್ಧದ ಮಧ್ಯೆಯೇ ಸೈನಿಕರ ಮುಂದೆ ಸೈನ್ಯದ ಸಮವಸ್ತ್ರದಲ್ಲೇ ವಿವಾಹವಾಗಿದೆ. ಇವರ ವಿವಾಹಕ್ಕೆ ಸೈನಿಕರು ಹಾಡು ಹಾಡುವ ಮೂಲಕ ಪ್ರೋತ್ಸಾಹಿಸಿದರು. ಈ ವೇಳೆ ಒಬ್ಬ ಯೋಧ ತನ್ನ ಹೆಲ್ಮೆಟ್‌ನ್ನೇ ವಧುವಿಗೆ ಕಿರೀಟದಂತೆ ತೊಡಿಸಿದ್ದಾನೆ. (ಪಾಶ್ಚಾತ್ಯ ಸಂಸ್ಕೃತಿಯ ವಿವಾಹದಲ್ಲಿ ಮದುವೆಯಂದು ವಧುವಿಗೆ ಕಿರೀಟ ತೊಡಿಸುವ ಸಂಪ್ರದಾಯವಿದೆ)
22 ವರ್ಷಗಳಿಂದ ಒಟ್ಟಿಗೆ ಇರುವ ಈ ಜೋಡಿ 18 ವರ್ಷದ ಮಗಳನ್ನು ಹೊಂದಿದ್ದು, ಭಾನುವಾರ ಕೈವ್‌ನಲ್ಲಿ(Kyiv) ಮದುವೆಯಾಗುವ ಮೂಲಕ ತಮ್ಮ ಜೀವನಕ್ಕೆ ಹೊಸ ಅರ್ಥ ನೀಡಲು ನಿರ್ಧರಿಸಿದರು. ಕಳೆದ ತಿಂಗಳು ರಷ್ಯಾದೊಂದಿಗೆ ಯುದ್ಧ ಪ್ರಾರಂಭವಾದಾಗ ವಧು ಲೆಸಿಯಾ ಇವಾಶ್ಚೆಂಕೊ (Lesia Ivashchenko) ತನ್ನ ಕೆಲಸವನ್ನು ತೊರೆದು ಮತ್ತು ಕೈವ್‌ನ ಹೊರವಲಯದಲ್ಲಿರುವ ತನ್ನ ಜಿಲ್ಲೆಯನ್ನು ರಕ್ಷಿಸಲು ಪ್ರಾದೇಶಿಕ ರಕ್ಷಣಾ ಪಡೆಗೆ ಸೇರಿಕೊಂಡಿದ್ದರು. ರಷ್ಯಾದ ಆಕ್ರಮಣದ ಆರಂಭವಾದಗಿನಿಂದ ಭಾನುವಾರ ಅವರ ವಿವಾಹ ನಡೆಯುವವರೆಗೂ ವಧು ಲೆಸಿಯಾ ತನ್ನ ವರ ವ್ಯಾಲೆರಿ ಫೈಲಿಮೊನೊವ್ (Valerii Fylymonov) ಅವರನ್ನು ನೋಡಿರಲಿಲ್ಲ.
ಮದುವೆಯ ನಂತರ ಮಾತನಾಡಿದ ವಧು ಲೆಸಿಯಾ ಇವಾಶ್ಚೆಂಕೊ, ಖಂಡಿತ, ನಾನು ಸಂತೋಷವಾಗಿದ್ದೇನೆ. ಮೊದಲನೆಯದಾಗಿ, ನಾವು ಜೀವಂತವಾಗಿದ್ದೇವೆ, ಈ ದಿನ ಪ್ರಾರಂಭವಾಯಿತು, ನನ್ನ ಪತಿ ಜೀವಂತವಾಗಿದ್ದಾರೆ ಮತ್ತು ಅವನು ನನ್ನೊಂದಿಗೆ ಇದ್ದಾನೆ ಎಂದು ನನಗೆ ಸಂತೋಷವಾಗಿದೆ. ನಾಳೆ ಏನಾಗುತ್ತದೆ ಎಂದು ಯಾರಿಗೆ ತಿಳಿದಿದೆ ನಾವು ರಾಜ್ಯದ ಮುಂದೆ, ದೇವರ ಮುಂದೆ ಮದುವೆಯಾಗಬೇಕು ಎಂದು ನಾವು ನಿರ್ಧರಿಸಿದ್ದೆವು ಮತ್ತು ನಮಗೆ ಓರ್ವ ವಯಸ್ಕ ಮಗಳಿದ್ದಾಳೆ ಮತ್ತು ನಾವು ಅಂತಿಮವಾಗಿ ವಿವಾಹವಾಗಿದ್ದಕ್ಕೆ ಆಕೆ ಸಂತೋಷಪಟ್ಟಿದ್ದಾಳೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಒಂದೇ ವಾರದಲ್ಲಿ 16500 ಜನರ ರಕ್ಷಿಸಿದ ‘ಆಪರೇಷನ್ ಗಂಗಾ’- ಕೊನೆಯ ಹಂತಕ್ಕೆ ಏರ್‌ಲಿಫ್ಟ್
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಬಹಳ ದುಃಖಕರ ವಿಚಾರವಾಗಿದೆ. ನಮ್ಮ ಕುಟುಂಬ ಒಟ್ಟಿಗೆ ಇರಲು ಸಾಧ್ಯವಿಲ್ಲ. ಯುದ್ಧ ಪ್ರಾರಂಭವಾದ ನಂತರ ನಾನು ನನ್ನ ಪತಿಯನ್ನು ನೋಡಿದು ಇದೇ ಮೊದಲ ಬಾರಿಗೆ, ನಾವು ಬೇರೆ ಬೇರೆ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ನಾವು ಗೆಲ್ಲುತ್ತೇವೆ ಎಂದು ನನಗೆ ತಿಳಿದಿದೆ. ಆದರೆ ನನಗೆ ಗೊತ್ತಿಲ್ಲ. ನಾವು ಗೆಲ್ಲುತ್ತೇವೆ ಎಂದು ನಂಬಿದ್ದೇನೆ ಅಷ್ಟೇ ಎಂದು ಲೆಸಿಯಾ ಹೇಳಿದರು.
BILD ಗಾಗಿ ಕೆಲಸ ಮಾಡುವ ಮತ್ತು ಕೈವ್‌ನಿಂದ ರಷ್ಯಾ ಉಕ್ರೇನ್ ಸಂಘರ್ಷವನ್ನು ಕವರ್ ಮಾಡುವ ಜರ್ಮನ್ ಯುದ್ಧ ವರದಿಗಾರ ಪಾಲ್ ರೋನ್‌ಝೈಮರ್ (Paul Ronzheimer) ಅವರು ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಈ ನವ ದಂಪತಿಗಳು ತಮ್ಮ ಒಡನಾಡಿಗಳಿಂದ ಸುತ್ತುವರೆದಿರುವುದನ್ನು ತೋರಿಸುತ್ತದೆ. ಅವರು ಈ ನವಜೋಡಿಗೆ ಉಕ್ರೇನಿಯನ್ ಹಾಡನ್ನು ಹಾಡುತ್ತಿದ್ದಾರೆ. ಪ್ರಾದೇಶಿಕ ರಕ್ಷಣಾ ಪಡೆಯಲ್ಲಿ ಸ್ವಯಂಸೇವಕರಾಗಿರುವ ಪ್ರಸಿದ್ಧ ಉಕ್ರೇನಿಯನ್ ಕಲಾವಿದ ತಾರಸ್ ಕೊಂಪನಿಚೆಂಕೊ (Taras Kompanichenko) ಅವರು ಮದುವೆಯಲ್ಲಿ ಬಂಡೂರ (Bandura) ನುಡಿಸುವುದನ್ನು ಮತ್ತು ಹಾಡುವುದನ್ನು ಕಾಣಬಹುದು.
Russia Ukraine War ಚರ್ನೋಬಿಲ್‌ನಲ್ಲಿ ಉಕ್ರೇನ್‌ನಿಂದ ಡರ್ಟಿ ಬಾಂಬ್!
ಮದುವೆಗೆ ವಧು ಮತ್ತು ವರರು ತಮ್ಮ ಮಿಲಿಟರಿ ಸಮವಸ್ತ್ರವನ್ನು ಧರಿಸಿದ್ದರು ಮತ್ತು ಓರ್ವ ಸೈನಿಕನ ವಧುವಿನ ಮೇಲೆ ಹೆಲ್ಮೆಟ್ ಅನ್ನು ಮದುವೆಯ ಕಿರೀಟವಾಗಿ ಹಿಡಿದಿದ್ದ. ಈ ವಿಡಿಯೋ ವೈರಲ್ ಆಗಿದ್ದು, 1.6 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ