ದೇವಸ್ಥಾನದ ಚಿನ್ನದ ಬದಲು ಕಾಂಗ್ರೆಸ್ ನಾಯಕರ ಖಾತೆಯಿಂದ ತೆಗೆಯಿರಿ; ಚೌವ್ಹಾಣ್ ಐಡಿಯಾಗೆ ಸ್ವಾಮಿಜಿ ತಿರುಗೇಟು!

By Suvarna News  |  First Published May 14, 2020, 9:30 PM IST

ದೇಶದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ತುರ್ತು ಪರಿಸ್ಥಿತಿಗೆ ದೇವಸ್ಥಾನದಲ್ಲಿರುವ ಚಿನ್ನವನ್ನು ಬಳಕೆ ಮಾಡಿ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದರು. ಇದಕ್ಕೆ ಸ್ವಾಮಿ ಪರಮಂಹಸ ತಪಸ್ವಿ ಚಾನ್ವಿ ಸಾಮೀಜಿ ತಕ್ಕ ತಿರುಗೇಟು ನೀಡಿದ್ದಾರೆ.
 


ಮುಂಬೈ(ಮೇ.14): ಕಾಂಗ್ರೆಸ್ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್ ನೀಡಿರುವ ಐಡಿಯಾಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ. ಹೀಗಾಗಿ ದೇವಸ್ಥಾನದಲ್ಲಿ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ಚಿನ್ನವಿದೆ. ಇದನ್ನು ಈ ಸಂದರ್ಭದಲ್ಲಿ ಸರ್ಕಾರ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ಚವ್ಹಾಣ್ ಐಡಿಯಾಗೆ  ಇದೀಗ ಪರಮಂಹಸ ತಪಸ್ವಿ ಚಾನ್ವಿ ಸಾಮೀಜಿ ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ ದೇವೇಗೌಡ!

Tap to resize

Latest Videos

ದೇಶದ ಆರ್ಥಿಕತೆ ಸುಧಾರಿಸಲು ದೇವಸ್ಥಾನದ ಚಿನ್ನ ಬಳಕೆ ಮಾಡುವ ಬದಲು ಕಾಂಗ್ರೆಸ್ ನಾಯಕ ಖಾತೆಯಿಂದ ಹಣ ಪಡೆಯಬಹುದು. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಮುಖಂಡರು ಸಾಕಷ್ಟು ದೋಚಿದ್ದಾರೆ. ಅದರಲ್ಲಿ 1 ಪಾಲು ನೀಡಿದರೆ ವಿಶ್ವದ ಆರ್ಥಿಕತೆಯನ್ನೇ ಭಾರತ ಹಿಂದಿಕ್ಕಿಲಿದೆ ಎಂದು ಪರಮಂಹಸ ತಪಸ್ವಿ ಚಾನ್ವಿ ಸಾಮೀಜಿ ಹೇಳಿದ್ದಾರೆ.

ಮೇ.13ರಂದು ಪೃಥ್ವಿರಾಜ್ ಚೌವ್ಹಾಣ್ ಟ್ಟೀಟ್ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ದೇವಸ್ತಾನದಲ್ಲಿ ಬಿದ್ದಿರುವ ಸುಮಾರು 1 ಟ್ರಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ಚಿನ್ನವನ್ನು ಕೇಂದ್ರ ಸರ್ಕಾರ ಈ ತುರ್ತು ಪರಿಸ್ಥಿಗೆ ಬಳಕೆ ಮಾಡಿಕೊಳ್ಳಬೇಕು. ಅತೀ ಕಡಿಮೆ ಬಡ್ಡಿದರದಲ್ಲಿ ಗೋಲ್ಡ್ ಬಾಂಡ್ ಮೂಲಕ ದೇವಸ್ಥಾನದಿಂದ ಚಿನ್ನ ಪಡೆದು ತುರ್ತು ಸಂದರ್ಭಕ್ಕೆ ಬಳಸಿಕೊಳ್ಳಬೇಕು ಎಂದಿದ್ದರು.

 

. Govt. must immediately appropriate all the gold lying with all the Religious Trusts in the country, worth at least $1 trillion, according to the . The gold can be borrowed through gold bonds at a low interest rate. This is an emergency.PC

— Prithviraj Chavan (@prithvrj)

ಇದಕ್ಕೆ ಸಾರ್ವಜನಿಕರಿಂದಲೂ ಆಕ್ರೋಷ ವ್ಯಕ್ತವಾಗಿತ್ತು. ಹಿಂದೂ ದೇವಾಲಯದ ಮೇಲೇಕೆ ಕಣ್ಣು, ಇತರ ಧರ್ಮಗಳ ಬಗ್ಗೆ ಚಕಾರವೆತ್ತದ ಕಾಂಗ್ರೆಸ್ ನಾಯಕರಿಗೆ ಹಿಂದೂ ದೇವಾಲಯದ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಸ್ವಾತಂತ್ರ ಪೂರ್ವದಲ್ಲಿ ಮಹಮ್ಮದ್ ಘಜ್ನಿ ಸೇರಿದಂತೆ ಮೊಘಲರು, ಬ್ರಿಟೀಷರು ಹಿಂದೂ ದೇವಲಾಯದ ಚಿನ್ನ ದೋಚಿದರು. ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಆಡಳಿತ ಮಾಡಿ ಇಡೀ ದೇಶವನ್ನೇ ಲೂಟಿ ಮಾಡಿತು. ಇದೀಗ ಉಳಿದಿರುವ ದೇವಾಲಯದ ಮೇಲೆ ಕಣ್ಣು ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ್ಯ ವ್ಯಕ್ತವಾಗಿತ್ತು.
 

click me!