ಸ್ವಚ್ಛ ಸರ್ವೇಕ್ಷಣ 2020: ಈ ಬಾರಿ ಮೈಸೂರು Rank ಕುಸಿತ

By Suvarna News  |  First Published Aug 20, 2020, 3:20 PM IST

ರಾಷ್ಟ್ರೀಯ ವಾರ್ಷಿಕ ಸ್ವಚ್ಛತೆ ಸರ್ವೆಯ 5ನೇ ಎಡಿಷನ್ ಸ್ವಚ್ಛ ಸರ್ವೇಕ್ಷಣ್ 2020 ಬಿಡುಗಡೆಯಾಗಿದೆ. ಮಧ್ಯ ಪ್ರದೇಶದ ಇಂದೋರ್ ಮತ್ತೊಮ್ಮೆ ಭಾರತದ ಅತ್ಯಂತ ಸ್ವಚ್ಛ ನಗರ ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಆದರೆ ಮೈಸೂರು ಈ ಬಾರಿ 2 ಸ್ಥಾನ ಕೆಳಕ್ಕೆ ಕುಸಿದಿದೆ


ರಾಷ್ಟ್ರೀಯ ವಾರ್ಷಿಕ ಸ್ವಚ್ಛತೆ ಸರ್ವೆಯ 5ನೇ ಎಡಿಷನ್ ಸ್ವಚ್ಛ ಸರ್ವೇಕ್ಷಣ್ 2020 ಬಿಡುಗಡೆಯಾಗಿದೆ. ಮಧ್ಯ ಪ್ರದೇಶದ ಇಂದೋರ್ ಮತ್ತೊಮ್ಮೆ ಭಾರತದ ಅತ್ಯಂತ ಸ್ವಚ್ಛ ನಗರ ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಆದರೆ ಮೈಸೂರು ಈ ಬಾರಿ 2 ಸ್ಥಾನ ಕೆಳಕ್ಕೆ ಕುಸಿದಿದೆ

ಸತತ ನಾಲ್ಕನೇ ಬಾರಿ ಇಂದೋರ್ ಭಾರತದ ಸ್ವಚ್ಛ ನಗರವಾಗಿ ಗುರುತಿಸಲ್ಪಟ್ಟಿದೆ. ಗುಜರಾತ್‌ನ ಸೂರತ್ ಭಾರತದ ಎರಡನೇ  ಸ್ವಚ್ಛ ನಗರವಾಗಿ ಮೂಡಿ ಬಂದಿದೆ. ನವಿ ಮುಂಬೈ ಮೂರನೇ ಸ್ಥಾನದಲ್ಲಿದೆ.

Tap to resize

Latest Videos

ಮೋದಿ ಮಹತ್ವಾಕಾಂಕ್ಷಿ ಯೋಜನೆ : ಶೀಘ್ರ ನಿವೇಶನ ಭಾಗ್ಯ

ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಇದನ್ನು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಗಂಗಾ ನದಿ ತೀರದಲ್ಲಿರುವ ವಾರಣಾಸಿ ಸ್ವಚ್ಛ ನಗರವಾಗಿ ಗುರುತಿಸಲ್ಪಟ್ಟಿದೆ. ಬೆಸ್ಟ್‌ ಪರ್ಫೋರ್ಮಿಂಗ್ ರಾಜ್ಯದ ಲಿಸ್ಟ್‌ನಲ್ಲಿ ಝಾರ್‌ಖಂಡ್ ಮೊದಲ ಸ್ಥಾನದಲ್ಲಿದ್ದು, ಬೆಸ್ಟ್ ಪರ್ಫೋರ್ಮಿಂಗ್ ಅವಾರ್ಡ್‌ ಪಡೆದಿದೆ.

Heartiest congratulations!
Indore is India’s cleanest city 4th year in a row. The city & its people have shown exemplary dedication towards cleanliness. Congratulations to MP CM people, political leadership & Municipal Corporation for this superlative performance. pic.twitter.com/cg3DH6PnHM

— Hardeep Singh Puri (@HardeepSPuri)

ಸಚ್ಛ ಸರ್ವೇಕ್ಷಣದಲ್ಲಿ 1.87 ಕೋಟಿ ಜನ ಭಾಗವಹಿಸಿದ್ದು, 4242 ನಗರಗಳು ಭಾಗಿಯಾಗಿದೆ. 28 ದಿನದಲ್ಲಿ ಸ್ವಚ್ಛ ಸರ್ವೇಕ್ಷಣ 2020 ಮುಗಿದಿದ್ದು, 1.7 ಕೋಟಿ ಜನರು ಸ್ವಚ್ಛತಾ ಎಪ್ಲಿಕೇಷನ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 11 ಕೋಟಿ ರಿಯಾಕ್ಷನ್ ಪಡೆದಿದೆ.

2014-15 ಮತ್ತು 2015-16ರಲ್ಲಿ ದೇಶದಲ್ಲಿಯೇ ನಂಬರ್ ಒನ್ ಸ್ವಚ್ಛ ನಗರ ಗರಿಮೆ ಪಡೆದಿದ್ದ ಮೈಸೂರು 2016-17 ನೇ ಸಾಲಿನಲ್ಲಿ 5ನೇ ಸ್ಥಾನ, 2017-18ರಲ್ಲಿ 8ನೇ ಸ್ಥಾನ, 2018-19ರಲ್ಲಿ ಮೂರನೇ ಸ್ಥಾನ ಪಡೆದಿತ್ತು.

ಟಾಪ್ 25 ನಗರ ಸ್ಥಳೀಯ ಸಂಸ್ಥೆಗಳು(1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ)

ರ‍್ಯಾಂಕ್ ರಾಜ್ಯ ನಗರ ಅಂಕ
1 ಮಧ್ಯ ಪ್ರದೇಶ ಇಂದೋರ್ 5647.56
2 ಗುಜರಾತ್ ಸೂರತ್ 5519.59
3 ಮಹಾರಾಷ್ಟ್ರ ನವಿ ಮುಂಬೈ 5467.89
4 ಛತ್ತೀಸ್‌ಗಡ ಅಂಬಿಕಾಪುರ 5428.30
5 ಕರ್ನಾಟಕ ಮೈಸೂರು 5298.61
6 ಆಂದ್ರಪ್ರದೇಶ ವಿಜಯವಾಡ 5270.32
7 ಗುಜರಾತ್ ಅಹಮದಾಬಾದ್ 5207.13
8 ದೆಹಲಿ ನವದೆಹಲಿ 5193.27
9 ಮಹಾರಾಷ್ಟ್ರ ಚಂದ್ರಪುರ 5178.93
10 ಮಧ್ಯ ಪ್ರದೇಶ ಖರ್ಗೋನ್ 5158.36
11 ಗುಜರಾತ್ ರಾಜ್‌ಕೋಟ್ 5157.36
12 ಆಂಧ್ರ ಪ್ರದೇಶ ತಿರುಪತಿ 5142.76
13 ಝಾರ್ಕಂಡ್ ಜಮ್‌ಶೆಡ್ಜ್‌ಪುರ 5133.20
14 ಮಧ್ಯ ಪ್ರದೇಶ ಭೋಪಾಲ್ 5066.31
15 ಗುಜರಾತ್ ಗಾಂಧೀನಗರ 5056.72
16 ಚಂಡೀಗಡ ಚಂಡೀಗಡ 4970.07
17 ಮಹಾರಾಷ್ಟ್ರ ಧುಲೆ 4896.99
18 ಛತ್ತೀಸ್‌ಗಡ ರಾಜ್‌ನಂದಗಾನ್ 4887.50
19 ಛತ್ತೀಸ್‌ಗಡ ಬಿಲಾಸ್‌ಪುರ್ 4875.74
20 ಮಧ್ಯಪ್ರದೇಶ ಉಜ್ಜೈನಿ 4826.53
21 ಛತ್ತೀಸ್‌ಗಡ ರಾಯ್‌ಘರ್ 4808.37
22 ಮಧ್ಯಪ್ರದೇಶ ಬುರ್ಹಾನ್‌ಪುರ 4791.18
23 ಮಹಾರಾಷ್ಟ್ರ ನಾಸಿಕ್ 4729.46
24 ಉತ್ತರ ಪ್ರದೇಶ ಲಕ್ನೋ 4728.28
25 ಮಧ್ಯಪ್ರದೇಶ ಸಿಂಗ್ರೌಲಿ 4703.93

 

click me!