'ಕೈಗೆ ಬಂದಿದ್ದ ಪ್ರಧಾನಿ ಪಟ್ಟ ಬೇಡವೆಂದಿದ್ದ ರಾಹುಲ್ ಗಾಂಧಿ'

By Suvarna NewsFirst Published Aug 20, 2020, 3:08 PM IST
Highlights

ಕಾಂಗ್ರೆಸ್ ಮತ್ತು  ಗಾಂಧಿ ಕುಟುಂಬ/ ಪ್ರಧಾನಿ ಪಟ್ಟ ಬೇಡವೆಂದಿದ್ದ ರಾಹುಲ್/ ಇತಿಹಾಸದ ಘಟನೆ ಉಲ್ಲೇಖಿಸಿದ ಕೈ ಮುಖಂಡ/ ಆರೋಗ್ಯದ ಕಾರಣ ಸ್ಥಾನ ತ್ಯಜಿಸಲು ಮುಂದಾಗಿದ್ದ ಸಿಂಗ್

ನವದೆಹಲಿ(ಆ. 20) ಒಂದು ಕಡೆ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.  ಇದರ ಮಧ್ಯೆ ಕಾಂಗ್ರೆಸ್ ನಾಯಕರೊಬ್ಬರು ಇತಿಹಾಸದ ಘಟನೆಗಳನ್ನು ಉಲ್ಲೇಖ ಮಾಡಿದ್ದಾರೆ.

ಗಾಂಧಿ ಕುಟುಂಬ ಅಧಿಕಾರಕ್ಕಾಗಿ ಯಾವಾಗಲೂ ಅಂಟಿಕೊಂಡು ಇರಲಿಲ್ಲ ಎಂದು  ಹೇಳುತ್ತ ಹಿಂದೊಮ್ಮೆ ಆರೋಗ್ಯದ ಕಾರಣಕ್ಕೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರಾಹುಲ್  ಗಾಂಧಿಯವರಿಗೆ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೇಳಿದ್ದರು  ಎಂಬ ಅಂಶವನ್ನು ಹೇಳಿದ್ದಾರೆ.

ಸಿದ್ದರಾಮಯ್ಯ ಸಿಎಂ ಪಟ್ಟದ ಬಗ್ಗೆ ಭವಿಷ್ಯ ನುಡಿದ ಮುಖಂಡ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಯುಪಿಎ-2ನೇ ಅವಧಿಯಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ರಾಹುಲ್ ಗಾಂಧಿಯವರು ಪ್ರಧಾನಿಯಾಗುವಂತೆ ಒತ್ತಾಯಿಸಿದ್ದರು ಆದರೆ ಆಗ ರಾಹುಲ್ ಗಾಂಧಿಯವರೇ ಬೇಡ, ನೀವೇ 5 ವರ್ಷ ಪೂರ್ಣಾವಧಿ ಪೂರೈಸಿ ಎಂದು ತಿರಸ್ಕರಿಸಿದ್ದರು ಎಂಬ ಅಂಶವನ್ನು ಕಾಂಗ್ರೆಸ್ ನಾಯಕ ಶಕ್ತಿಸಿಂಗ್ ಗೋಯಲ್ ಹೇಳಿದ್ದಾರೆ.

ಗಾಂಧಿ ಕುಟುಂಬ ಅಧಿಕಾರದ ಹಿಂದೆ ನಹೋಗಿಲ್ಲ. ಹಿಂದೆ ಸೋನಿಯಾ ಗಾಂಧಿ ಸಹ ಎರಡು ಸಾರಿ ಪ್ರಧಾನಿ ಆಗುವ ಅವಕಾಶ ಇದ್ದರೂ ಹಿಂದೆ ಸರಿದಿದ್ದರು. 

ಕಾಂಗ್ರೆಸ್ ಜನರಲ್ ಸಕ್ರೆಟರಿ  ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್‌ಗೆ ಗಾಂಧಿಯೇತರ ವ್ಯಕ್ತಿ ಅಧ್ಯಕ್ಷರಾಗಬೇಕು ಎಂದು ನೀಡಿದ್ದ ಹೇಳಿಕೆ ನಂತರ ಒಂದೊಂದೆ ಬೆಳವಣಿಗೆ ಆಗುತ್ತಿದೆ.  ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ ಸಂದರ್ಭವೊಂದರಲ್ಲಿ ಪ್ರಧಾನಿ ಹುದ್ದೆ ನನಗೆ ಬಯಸದೇ ಸಿಕ್ಕ ಭಾಗ್ಯ ಎಂದು ಹೇಳಿದ್ದರು.

2019  ರ ಲೋಕಸಭಾ ಚುನಾವಣೆ ಸೋಲಿನ ನಂತರ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ತಮ್ಮ ಸ್ಥಾನ ತ್ಯಜಿಸಿದ್ದದರು. ನಂತರದ ಬೆಳವಣಿಗೆಯಲ್ಲಿ ಸೋನಿಯಾ ಗಾಂಧಿ ಅವರೆ ಮತ್ತೆ ಅಧ್ಯಕ್ಷರಾದರು. 

click me!