ಮಾಜಿ ಸಿಎಂ ಅಳಿಯ ಸೇರಿ ಐವರು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

By Suvarna News  |  First Published Aug 20, 2020, 3:13 PM IST

ಮಾಜಿ ಮುಖ್ಯಮಂತ್ರಿ ಅಳಿಯ ಸೇರಿದಂತೆ ಐವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೆರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರಿದ್ದಾರೆ.


 ಮಣಿಪುರ (ಆ.20): ಐವರು ಮಾಜಿ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಇತ್ತೀಚೆಗಷ್ಟೇ ಐವರು ಶಾಸಕರು ತಮ್ಮ ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು ಇದೀಗ ಅಧಿಕೃತವಾಗಿ  ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ನೇತೃತ್ವದಲ್ಲಿ  ಬಿಜೆಪಿ ಸೇರ್ಪಡೆಯಾಗಿದ್ದಾರೆ.

Tap to resize

Latest Videos

ಮಣಿಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್ ಐವರನ್ನು ಪಕ್ಷಕ್ಕೆ ಸ್ವಾಗತಿಸಿದ್ದು, ಇವರ ಸೇರ್ಪಡೆಯಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯಾದ ಸಮಸ್ಯೆ ಎದುರಾಗದು ಎಂದಿದ್ದಾರೆ. 

ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾಗಲಿ: ಪ್ರಿಯಾಂಕ ಗಾಂಧಿ...

ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಇವರ ಸೇರ್ಪಡೆಯಿಂದ ಬಲ ಬಂದಿದೆ ಎಂದು ರಾಮ್ ಮಾದವ್ ಹೇಳಿದರು.

ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಸರ್ಕಾರ ಸಿದ್ಧವೆಂದ ಸಚಿವ ಈಶ್ವರಪ್ಪ...

ಮಾಜಿಮುಖ್ಯಮಂತ್ರಿ ಇಬೋಬಿ ಸಿಂಗ್ ಅಳಿಯ ಹೆನ್ರಿ ಒಕ್ರಮ್,.ಪನೋನಮ್ ,ಲುಕೋಯ್ ಸಿಂಗ್, ಗಮ್ತಂಗ್ ಹೋಕಿಪ್, ಗಿನ್ಸುನ್ ಝೌ  ಪಕ್ಷ ಸೇರ್ಪಡೆಯಾಗಿದ್ದಾರೆ.

ಒಟ್ಟಿನಲ್ಲಿ ದೇಶದಲ್ಲಿಕೊರೋನಾ ಮಹಾಮಾರಿ ಕಾಟವಿದ್ದರೂ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಲೇ ಇದ್ದು, ಹಲವು ಪಕ್ಷಗಳ  ಮುಖಂಡರ ಪಕ್ಷಾಂತರವೂ ಮುಂದುವರಿದಿದೆ.

click me!