ಸುರಂಗ ಮಾರ್ಗದಲ್ಲಿ ಬಿದ್ದಿತ್ತು ಕಸ, ಉದ್ಘಾಟನೆ ಬೆನ್ನಲ್ಲೇ ಕಸ ಹೆಕ್ಕಿದ ಪ್ರಧಾನಿ ಮೋದಿ!

Published : Jun 19, 2022, 07:09 PM IST
ಸುರಂಗ ಮಾರ್ಗದಲ್ಲಿ ಬಿದ್ದಿತ್ತು ಕಸ, ಉದ್ಘಾಟನೆ ಬೆನ್ನಲ್ಲೇ ಕಸ ಹೆಕ್ಕಿದ ಪ್ರಧಾನಿ ಮೋದಿ!

ಸಾರಾಂಶ

ಪ್ರಗತಿ ಮೈದಾನ್ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಉದ್ಘಾಟನೆ ದೆಹಲಿಯಲ್ಲಿನ ಈ ಯೋಜನೆಯಲ್ಲಿ ಅಂಡರ್ ಪಾಸ್ ಸುರಂಗ ಉದ್ಘಾಟನೆ ಉದ್ಘಾಟನೆ ಬಳಿಕ ಅಂಡರ್ ಪಾಸ್ ವೀಕ್ಷಿಸುವ ವೇಳೆ ಕಾಣಿಸಿತು ಕಸ

ನವದೆಹಲಿ(ಜೂ.19): ಪ್ರಧಾನಿ ನರೇಂದ್ರ ಮೋದಿ ಸ್ವಚ್ಚ ಭಾರತಕ್ಕೆ ವಿಶೇಷ ಅದ್ಯತೆ ನೀಡಿದ್ದಾರೆ. ಸ್ವಚ್ಚ ಭಾರತ ಅನ್ನೋ ಅಭಿಯಾನದ ಮೂಲಕ ಭಾರತವನ್ನು ಸ್ವಚ್ಚವಾಗಿಡಲು ಸಂಕಲ್ಪ ಮಾಡಿದ್ದಾರೆ. ಹೀಗಿರುವಾಗಿ ತಾನು ಉದ್ಘಾಟಿಸಿದ ಯೋಜನೆ ಸ್ಥಳದಲ್ಲೇ ಕಸ ಇದ್ದರೆ ಮೋದಿಗೆ ಸುಮ್ಮನಿರಲು ಸಾಧ್ಯವೇ? ದೆಹಲಿಯ ಐಟಿಪಿಒ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಗೆ ಬಿದ್ದಿದ್ದ ಕಸ ಕಣ್ಣಿಗೆ ಬಿದ್ದಿದೆ. ತಕ್ಷಣವೇ ತಾವೇ ಖುದ್ದಾಗಿ ಕಸ ಹೆಕ್ಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ದೆಹಲಿಯ ಪ್ರಗತಿ ಮೈದಾನದ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಇದರ ಭಾಗವಾಗಿ ಪ್ರಗತಿ ಮೈದಾನದ ಇಂಟಿಗ್ರೆಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯಲ್ಲಿ ಅಂಡರ್ ಪಾಸ್ ಹಾಗೂ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದ್ದಾರೆ. ಈ ಉದ್ಘಾಟನೆ ಬಳಿಕ ಮೋದಿ, ಸುರಂಗ ಹಾಗೂ ಅಂಡರ್ ಪಾಸ್ ಮೂಲಕ ನಡೆದುಕೊಂಡು ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಕಸ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಮೋದಿ ಬಿದ್ದಿರುವ ಕಸಗಳನ್ನು ಹೆಕ್ಕಿದ್ದಾರೆ.

ಮೋದಿ ತಾಯಿಗೆ 100ನೇ ಹುಟ್ಟುಹಬ್ಬ, ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದ ಪಿಎಂ!

ಕಸ ಹಾಗೂ ಬಾಟಲಿ ಹೆಕ್ಕಿದ ಮೋದಿ ಬಳಿಕ ಅಂಡರ್ ಪಾಸ್ ಹಾಗೂ ಸುರಂಗ ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಉದ್ಘಾಟನೆ ಮಾಡಿದ ಬಳಿಕ ಅಲ್ಲಿ ಬಿದ್ದಿರುವ ಕಸ ಹೆಕ್ಕಿ ಶುಚಿತ್ವಕ್ಕೆ ಮೊದಲ ಆದ್ಯತೆ ಅನ್ನೋದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ಇಷ್ಟೇ ಅಲ್ಲ ತಾನು ಪ್ರಧಾನಿಯಾದರೂ ಸಾಮಾನ್ಯ ಹಾಗೂ ಸರಳ ವ್ಯಕ್ತಿ ಅನ್ನೋದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.

ಪ್ರಗತಿ ಮೈದಾನ ಕಾರಿಡಾರ್‌ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ಬರೋಬ್ಬರಿ 920 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಗತಿ ಮೈದಾನ ಅಭಿವೃದ್ಧಿ ಮಾಡಲಾಗುತ್ತಿದೆ. ಇನ್ನು ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವೇ ನೀಡಿದೆ. 

"

ಪ್ರಗತಿ ಮೈದಾನ ಅಭಿವೃದ್ಧಿ ಯೋಜನೆ ಉದ್ಘಾಟಿಸಿದ ಬಳಿಕ ಮಾತನಾಡಿದ ಮೋದಿ, ಕಾಂಗ್ರೆಸ್ ಸರ್ಕಾರ ಪ್ರಗತಿ ಮೈದಾನ ಅಭಿವೃದ್ಧಿಗೆ ಹಿಂದೇಟು ಹಾಕಿದೆ. ದಾಖಲೆ ಪತ್ರಗಳಲ್ಲಿ ಕಾಂಗ್ರೆಸ್ ಹಲವು ಭಾರಿ ಹಣ ಮಂಜೂರು ಮಾಡಿದೆ. ಆದರೆ ಅಭಿವೃದ್ಧಿ ಕಾರ್ಯ ನಡೆದಿಲ್ಲ. 

ಪ್ರಧಾನಿ ಮೋದಿ ಭೇಟಿ: ಬೆಂಗಳೂರಿನಲ್ಲಿ ಪೂರ್ವ ಸಿದ್ಧತೆ ಪರಿಶೀಲಿಸಿದ ಸಚಿವರು

ದಿಲ್ಲಿಯಲ್ಲಿ ತೀವ್ರತರದ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗುತ್ತಿದೆ. ರಾಜಧಾನಿಯ ಚಹರೆಯನ್ನೇ ಈ ಮೂಲಕ ಬದಲಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಭಾನುವಾರ ಪ್ರಗತಿ ಮೈದಾನದಲ್ಲಿ 1.6 ಕಿ.ಮೀ. ರಸ್ತೆ ಸುರಂಗ ಹಾಗೂ 5 ಅಂಡರ್‌ಪಾಸ್‌ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಸೇರಿ ಅನೇಕ ಮೂಲಸೌಕರ್ಯ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದರು.

ಮೋದಿ ಉದ್ಘಾಟಿಸಿದ ಸುರಂಗವು ದಿಲ್ಲಿಯ ಮೊದಲ ರಸ್ತೆ ಸುರಂಗವಾಗಿದೆ. ‘ಈ ಸುರಂಗವು ಪೂರ್ವ ದಿಲ್ಲಿಯಿಂದ ಇಂಡಿಯಾ ಗೇಟ್‌ ಹಾಗೂ ಕೇಂದ್ರ ದಿಲ್ಲಿಯನ್ನು ಸಂಪರ್ಕಿಸುತ್ತದೆ. ಟ್ರಾಫಿಕ್‌ ಜಾಮ್‌ಗೆ ಖ್ಯಾತಿ ಪಡೆದ ಐಟಿಒ ಸಿಗ್ನಲ್‌ ಸೇರಿ ಕೆಲವು ಸಿಗ್ನಲ್‌ಗಳ ಮೂಲಕ ಸಂಚರಿಸುವ ಬದಲು ಈ ಸುರಂಗದಲ್ಲಿ ತಡೆರಹಿತವಾಗಿ ಸಂಚರಿಸಬಹುದಾಗಿದೆ. ಇದರಿಂದ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ. ಸಮಯವು ಹಣ ಇದ್ದಂತೆ’ ಎಂದು ಮೋದಿ ನುಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?