PM Modi visit ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ, ವರ್ಷಗಳಿಂದ ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬರ್!

By Suvarna News  |  First Published Jun 19, 2022, 4:39 PM IST
  • ಬೆಂಗಳೂರು, ಮೈಸೂರಿಗೆ ಭೇಟಿ ನೀಡಲಿದ್ದಾರೆ ಮೋದಿ
  • ಜೂನ್ 20 ಹಾಗೂ ಜೂನ್ 21ಕ್ಕೆ ರಾಜ್ಯಕ್ಕೆ ಮೋದಿ ಭೇಟಿ
  • ಹಲವು ವರ್ಷಗಳಿಂದ ಗುಂಡಿಬಿದ್ದ ರಸ್ತೆಗಳಿಗೆ ಡಾಂಬರು
     

ಬೆಂಗಳೂರು(ಜೂ.19): ಪ್ರಧಾನಿ ನರೇಂದ್ರ ಮೋದಿ ಹಲವು ಕಾರ್ಯಕ್ರಮಗಳ ನಿಮಿತ್ತ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಜೂನ್ 20 ಹಾಗೂ 21 ರಂದು ಬೆಂಗಳೂರು ಹಾಗೂ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಮೋದಿ ಆಗಮನದ ಹಿನ್ನಲೆಯಲ್ಲಿ ಬೆಂಗಳೂರು, ಮೈಸೂರಿನ ಹಲವು ರಸ್ತೆಗಳು ಹೊಸ ಡಾಂಬರು ಕಂಡಿದೆ. 

ಕಳೆದ ಹಲವು ವರ್ಷಗಳಿಂದ ಗುಂಡಿ ಬಿದ್ದು ಹಾಳಿಗಿದ್ದ ರಸ್ತೆಯನ್ನು ಸರಿ ಮಾಡಲು ಹಲವು ದೂರು, ಮನವಿ ನೀಡಿದ್ದರೂ ಇದುವರೆಗೂ ಸೊಪ್ಪು ಹಾಕಿರಲಿಲ್ಲ. ಆದರೆ ಮೋದಿ ಆಗಮನದಿಂದ ಇದೀಗ ರಸ್ತೆಗಳು ನಳನಳಿಸುತ್ತಿದೆ.ಕೊಮ್ಮಘಟ್ಟ ಹಾಗೂ ಕೆಂಗೇರಿ ಸಂಪರ್ಕಿಸುವ ಹಲವು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ.

Tap to resize

Latest Videos

ಮೈಸೂರಿಗೆ ಮೋದಿ ಆಗಮನ: ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ!

ಮೆಜೆಸ್ಟಿಕ್ ಸುತ್ತಮುತ್ತ, ಯಲಹಂಕಾ ರಸ್ತೆ, ಯಲಹಂಕಾ ಸಂಪರ್ಕಿಸುವ ಹಲವು ರಸ್ತೆಗಳು ಇದೀಗ ಡಾಂಬರೀಕರಣ ಮಾಡಲಾಗಿದೆ. ಕೊಮ್ಮಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿವಕುಮಾರ ಸ್ವಾಮಿ ರಸ್ತೆ ಮೂಲಕ ಮೋದಿ ಕೊಮ್ಮಘಟ್ಟ ತಲುಪಲಿದ್ದಾರೆ. ಹೀಗಾಗಿ ಈ ರಸ್ತೆಗಳು ಡಾಂಬರೀಕರಣ ಮಾಡಲಾಗಿದೆ.

ಕಳೆದ 3 ವರ್ಷಗಳಿಂದ ಇಲ್ಲಿನ ರಸ್ತೆಗಳು ಹಾಳಾಗಿದೆ. ಅಧಿಕಾರಿಗಳು ಕಾಮಾಕಾರಿ ಮಾಡುತ್ತಲೇ ಇದ್ದಾರೆ. ಆದರೂ ರಸ್ತೆ ಮಾತ್ರ ಹಾಗೇ ಉಳಿದುಕೊಂಡಿತ್ತು. ಇದೀಗ ಮೋದಿ ಆಗಮನದಿಂದ ರಾತ್ರೋರಾತ್ರಿ ಅಧಿಕಾರಿಗಳು ರಸ್ತೆ ಡಾಂಬೀಕರಣ ಮಾಡಿದ್ದಾರೆ ಎಂದು ಕೊಮ್ಮಘಟ್ಟ ಸ್ಥಳೀಯರು ಹೇಳಿದ್ದಾರೆ. ಇಷ್ಟೇ ಅಲ್ಲ ಮೋದಿಗೆ ಧನ್ಯವಾದ ಹೇಳಿದ್ದಾರೆ.

ಕೆಂಗೇರಿಯ ಕಾವೇರಿ 5ನೇ ಹಂತದಲ್ಲಿನ ಪೈಪ್ ಲೈನ್ ಕಾಮಾಕಾರಿ ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಇದರ ಜೊತೆಗೆ ಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲದ ಕಾರಣ ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಉದ್ಭವಿಸಿತ್ತು. ಆದರೆ ಮೋದಿ ಆಗಮನದಿಂದ ಒಂದೇ ದಿನದಲ್ಲಿ ಈ ಎಲ್ಲಾ ಸಮಸ್ಯೆಗಳು ಪೂರ್ಣಗೊಂಡಿದೆ. ಹೀಗಾಗಿ ಪದೇ ಪದೇ ಮೋದಿ ರಾಜ್ಯಕ್ಕೆ ಆಗಮಿಸುತ್ತಿರಲಿ ಎಂದು ಕೆಂಗೇರಿ ಸ್ಥಳೀಯರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೋದಿ ಕಾರ‍್ಯಕ್ರಮ ಯಶಸ್ಸಿಗೆ ಸಿದ್ಧತೆ: ಸಿಎಂ ಬೊಮ್ಮಾಯಿ

ಪ್ರಧಾನಿ ಭದ್ರತೆಗಾಗಿ ಆಯ್ದ ಮಾರ್ಗಗಳ ಕಾಲೇಜಿಗೆ ರಜೆ
ಬೆಂಗಳೂರು ನಗರಕ್ಕೆ ಸೋಮವಾರ ಆಗಮಿಸಲಿರುವ ಪ್ರಧಾನಿ ನರೆಂದ್ರ ಮೋದಿ ಅವರು ಸಂಚರಿಸಲಿರುವ ಮಾರ್ಗದಲ್ಲಿ ಬಿಗಿ ಭದ್ರತೆ ಕಲ್ಪಿಸಿರುವ ಹಿನ್ನೆಲೆಯಲ್ಲಿ ಆಯ್ದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಸೋಮವಾರ (ಜೂ.20) ಹಲವು ಕಾರ್ಯಕ್ರಮದಲ್ಲಿ ಪ್ರಧಾನಿಗಳು ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಿರಲು ರಜೆ ಘೋಷಣೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಡಾ ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಪ್ರಧಾನಿ ಹಾದು ಹೋಗಲಿರುವ ಐಐಎಸ್‌ಸಿ, ಗೊರಗುಂಟೆಪಾಳ್ಯ, ಸಿಎಂಟಿಐ, ವರ್ತುಲ ರಸ್ತೆ, ಡಾ ರಾಜಕುಮಾರ್‌ ಸ್ಮಾರಕ ಮೇಲ್ಸೇತುವೆ, ಲಗ್ಗೆರೆ ಸೇತುವೆ, ನಾಯಂಡಹಳ್ಳಿ, ಮೈಸೂರು ರಸ್ತೆ, ಆರ್‌.ವಿ.ಕಾಲೇಜು, ನಾಗರಬಾವಿ, ಸುಮನಹಳ್ಳಿ ಮೇಲ್ಸೇತುವೆ, ಎಂಇಇ ಜಂಕ್ಷನ್‌, ಗೋವರ್ಧನ್‌ ಚಿತ್ರಮಂದಿರ, ಯಶವಂತಪುರ ಮತ್ತು ಜಕ್ಕೂರು ವಿಮಾನ ನಿಲ್ದಾಣ ಮಾರ್ಗಗಳ ಸುತ್ತಮುತ್ತಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಮೋದಿ ಭೇಟಿ ಹಿನ್ನೆಲೆ: ನಾಳೆ ಬೆಂ. ವಿವಿಗೆ ರಜೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಜೂ.20ರಂದು ಸೋಮವಾರ ರಜೆ ಘೋಷಣೆ ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಡಾ ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯ ಉದ್ಘಾಟನೆಗೆ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಞಾನಭಾರತಿ ಆವರಣದಲ್ಲಿರುವ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಜೂ.20ರಂದು ಸ್ಥಳೀಯ ರಜೆ ಘೋಷಿಸಲಾಗಿದೆ ವಿಶ್ವವಿದ್ಯಾಲಯದ ಕುಲಸಚಿವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
 

click me!