
ನವದೆಹಲಿ (ಫೆ.4): ಪ್ರತಿಭಟನೆ ಮಾಡೋ ಹಕ್ಕು ಎಲ್ಲರಿಗೂ ಇದೆ. ಆದ್ರೆ ಕೆಲವು ಪ್ರತಿಭಟನೆಗಳು ಸ್ವಲ್ಪ ವಿಭಿನ್ನವಾಗಿರುತ್ತೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಇಂಥದ್ದೊಂದು ಪ್ರತಿಭಟನೆ ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರು ಝಾನ್ಸಿ ಪೊಲೀಸ್ ಸೂಪರಿಂಟೆಂಡೆಂಟ್ ಆಫೀಸ್ ಮುಂದೆ ವಿಚಿತ್ರ ಪ್ರತಿಭಟನೆ ಮಾಡುವ ಮೂಲಕ ವೈರಲ್ ಆಗಿದ್ದಾರೆ.ಸಬ್ ಇನ್ಸ್ಪೆಕ್ಟರ್ ಮೋಹಿತ್ ಯಾದವ್ ಅವರನ್ನ ಸಸ್ಪೆಂಡ್ ಮಾಡಿದ್ದಕ್ಕೆ ಅವರು ಈ ರೀತಿ ಪ್ರತಿಭಟನೆ ಮಾಡ್ತಿದ್ದಾರೆ. ರಿಸರ್ವ್ ಇನ್ಸ್ಪೆಕ್ಟರ್ ಆಗಿದ್ದ ಮೋಹಿತ್ ಯಾದವ್ ಅವರನ್ನ ವಿಚಾರಣೆ ವೇಳೆ ಸಸ್ಪೆಂಡ್ ಮಾಡಲಾಗಿದೆ. ಜನವರಿ 15ರಂದು ಮೋಹಿತ್‌ರನ್ನು ಅಮಾನತು ಮಾಡಲಾಗಿತ್ತು. ಅವರ ತಪ್ಪೇನು ಎಂದರೆ, ಮೋಹಿತ್ ರಜೆ ಕೇಳಿದ್ದು. ರಜೆ ನೀಡಲು ಹಿರಿಯ ಅಧಿಕಾರಿಗಳು ಒಪ್ಪಿರಲಿಲ್ಲ. ಅಷ್ಟೇ ಅಲ್ಲ, ಅವರ ಮೇಲೆ ಅಧಿಕಾರಿಗಳು ದುರ್ವರ್ತನೆ ಮಾಡಿದ್ದರು. ತನ್ನ ಮತ್ತು ತನ್ನ ಹೆಂಡತಿಯ ಫೋನ್ ಕರೆಯನ್ನು ಕದ್ದು ಕೇಳ್ತಿದ್ರು ಅಂತ ಮೋಹಿತ್ ಆರೋಪ ಮಾಡಿದ್ದಾರೆ.
ಮೇಲಧಿಕಾರಿಗಳು ತನ್ನ ಮೇಲೆ ಹಲ್ಲೆ ಮಾಡಿದ್ದರು ಅಂತಲೂ ಮೋಹಿತ್ ಆರೋಪ ಮಾಡಿದ್ದಾರೆ. ಜಗಳ ಆದ್ಮೇಲೆ ಮೋಹಿತ್ ನವಾಬಾದ್ ಪೊಲೀಸ್ ಠಾಣೆಗೆ ಫೋನ್ ಮಾಡಿ ಪೊಲೀಸರನ್ನ ಕರೆಸಿದ್ದರು. ಪೊಲೀಸರು ಬಂದು ಮೋಹಿತ್‌ರನ್ನ ಠಾಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹಿರಿಯ ಅಧಿಕಾರಿಗಳ ಮುಂದೆ ಅತ್ತಿದ್ದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಚಾರಣೆಯ ಬಳಿಕ ಮೋಹಿತ್‌ರನ್ನು ಸಸ್ಪೆಂಡ ಮಾಡಲಾಗಿತ್ತು.
ಅಪ್ಪನ ಶವ 2 ತುಂಡು ಮಾಡಿ ಅಂತ್ಯಸಂಸ್ಕಾರಕ್ಕೆ ಪಾಪಿ ಮಕ್ಕಳ ಸ್ಕೆಚ್!
ಸಸ್ಪೆಂಡ್ ಆದ್ಮೇಲೆ ಮೋಹಿತ್ ಡಿಐಜಿಗೆ ಈ ಬಗ್ಗೆ ದೂರು ನೀಡಿದ್ದರು. ಸಸ್ಪೆಂಡ್ ಆದ ಸಮಯದಲ್ಲಿ ಸಿಗೋ ಅರ್ಧ ಸಂಬಳ ಬೇಡ ಎಂದು ಹೇಳಿದ್ದ ಮೋಹಿತ್ ಯಾದವ್, ನನ್ನ ಕುಟುಂಬ ನೋಡಿಕೊಳ್ಳೋದು ಹೇಗೆ ಅನ್ನೋದು ನನಗೆ ಗೊತ್ತಿದೆ ಎಂದು ಹೇಳಿದ್ದರು. ಇದಾದ ಬಳಿಕ ಝಾನ್ಸಿ ಪೊಲೀಸ್ ಸೂಪರಿಂಟೆಂಡೆಂಟ್ ಕಚೇರಿಯ ಮುಂದೆ ಚಹಾ ಅಂಗಡಿ ತೆರೆದಿದ್ದಾರೆ. ಎಸ್ ಪಿ ಕಚೇರಿ ಮುದೆ ಪ್ರತಿಭಟನೆ ಅನ್ನೋ ರೀತಿಯಲ್ಲಿ ಮೋಹಿತ್ ಟೀ ಮಾರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲಾ ಕೆಲಸಕ್ಕೂ ಗೌರವ ಇದೆ ಅಂತ ಜನರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
Bengaluru: ಪೋರ್ಷೆ, ಫೆರಾರಿ, BMW..30 ಐಷಾರಾಮಿ ಕಾರು ಸೀಜ್ ಮಾಡಿದ ಸಾರಿಗೆ ಇಲಾಖೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ