ರಕ್ಷಾ ಬಂಧನ ರಜೆಗೆ ಸ್ಯಾಲರಿ ಕಟ್ ನಿರ್ಧಾರ ವಿರೋಧಿಸಿದ ಹೆಚ್ಆರ್ ಅಮಾನತು, ಕಂಪನಿ ಹೇಳಿದ್ದೇನು?

By Chethan Kumar  |  First Published Aug 13, 2024, 7:50 PM IST

ರಕ್ಷಾ ಬಂಧನಕ್ಕೆ ರಜೆ ಪಡೆದರೆ 7 ದಿನದ ವೇತನ ಕಡಿತ ನಿರ್ಧಾರವನ್ನು ವಿರೋಧಿಸಿದ ಕಂಪನಿಯಿಂದ ಅಮಾನತ್ತುಗೊಂಡಿದ್ದೇನೆ ಎಂದು ಹೆಚ್‌ಆರ್ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.


ಚಂಡಿಘಡ(ಆ.13) ಕಚೇರಿಯಲ್ಲಿ ರಜೆ ವಿಚಾರವಾಗಿ ಹಲವು ಯುದ್ಧಗಳೇ ನಡೆದಿದೆ. ರಜೆ ನೀಡದ ಕಾರಣ ಕೆಲಸಕ್ಕೆ ರಾಜೀನಾಮೆ ನೀಡಿದ ಊದಾಹರಣೆಗಳಿವೆ. ಇದೀಗ ಮಹಿಳಾ ಉದ್ಯೋಗಿಯೊಬ್ಬರು ಕಂಪನಿ ವಿರುದ್ಧ ಮಾಡಿರುವ ಗಂಭೀರ ಆರೋಪ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಕ್ಷಾ ಬಂಧನಕ್ಕೆ ರಜೆ ತೆಗೆದುಕೊಳ್ಳುವ ಉದ್ಯೋಗಿಗಳ 7 ದಿನದ ವೇತನ ಕಟ್ ಮಾಡಲು ಸಿಇಒ ನೀಡಿದ ಆದೇಶ ಧಿಕ್ಕರಿಸಿದ ಮಹಿಳಾ ಮಾನವ ಸಂಪನ್ಮೂಲ ಅಧಿಕಾರಿ(ಹೆಚ್ಆರ್) ಅಮಾನತುಗೊಂಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಕುರಿತು ಮಹಿಳಾ ಹೆಚ್ಆರ್ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಕಂಪನಿ ತಿರುಗೇಟು ನೀಡಿದೆ.

ಪಂಜಾಬ್‌ನ ಖಾಸಗಿ ಕಂಪನಿಯೊಂದರ ವಿರುದ್ದ ಮಹಿಳಾ ಹೆಚ್ಆರ್ ಈ ಆರೋಪ ಮಾಡಿದ್ದಾರೆ. ಹೆಚ್ಆರ್ ಆರೋಪದ ಪ್ರಕಾರ, ಕಂಪನಿ ಬಾಸ್ ಕಠಿಣ ಆದೇಶವೊಂದನ್ನು ನೀಡಿದ್ದಾರೆ. ಆಗಸ್ಟ್ 19ರಂದು ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ. ಈ ದಿನ ಕಂಪನಿಯ ಉದ್ಯೋಗಿಗಳು ರಜೆ ತೆಗೆದುಕೊಂಡರೆ ಅಂತವರ 7 ದಿನದ ವೇತನ ಕಡಿತಗೊಳಿಸಬೇಕು ಅನ್ನೋದು ಬಾಸ್ ಆದೇಶವಾಗಿತ್ತು. ಆದರೆ ಇದು ಸಾಧ್ಯವಿಲ್ಲ. 1 ದಿನ ರಜೆಗಾಗಿ 7 ದಿನ ಸ್ಯಾಲರಿ ಕಟ್ ಮಾಡುವುದು ಉಚಿತವಲ್ಲ ಎಂದಿದ್ದಾರೆ ಅನ್ನೋದು ಮಹಿಳಾ ಹೆಚ್ಆರ್ ಆರೋಪ. 

Tap to resize

Latest Videos

undefined

ರಜೆ ಕೊಡಿ ಪ್ಲೀಸ್ ತಾಯಿ ಕೊಂದೇ ಬಿಡುತ್ತಾರೆ, ಬಾಸ್‌ಗೆ ಮೆಸೇಜ್ ಹಾಕಿದ ಉದ್ಯೋಗಿಗೆ ಸಿಕ್ಕ ಉತ್ತರವೇನು?

ಸ್ಯಾಲರಿ ಕಟ್ ವಿರೋಧಿಸಿದ ಬೆನ್ನಲ್ಲೇ ನನ್ನ ವಿರುದ್ಧೇ ಕ್ರಮ ಕೈಗೊಳ್ಳಲಾಗಿದೆ. ಮೊದಲು ನನ್ನ ಎಲ್ಲಾ ಅಧಿಕಾರ ಮೊಟಕುಗೊಳಿಸಲಾಯಿತು. ಬಳಿಕ ಇಮೇಲ್ ಮೂಲಕ ಅಮಾನತು ಮಾಡಲಾಯಿತು ಎಂದು ಹೆಚ್ಆರ್ ದೂರಿದ್ದಾರೆ. ಉದ್ಯೋಗಿಗಳ ಪರ ನಿಂತ ಕಾರಣ ನನಗೆ ಅಮಾನತು ಶಿಕ್ಷೆ ನೀಡಿದ್ದಾರೆ. ಆರಂಭದಲ್ಲಿ 2 ವಾರ ಸಮಯ ನೀಡಲಾಗುವುದು ಎಂದು ಎಚ್ಚರಿಸಿದ್ದ ಕಂಪನಿ ಬಳಿಕ ಏಕಾಏಕಿ ಅಮಾನತು ಮಾಡಿದೆ ಎಂದು  ಉದ್ಯೋಗಿ ಆರೋಪಿಸಿದ್ದಾರೆ.

ಮಹಿಳಾ ಉದ್ಯೋಗಿ ಪೋಸ್ಟ್‌ ಬೆನ್ನಲ್ಲೇ ಕಂಪನಿ ಸ್ಪಷ್ಟನೆ ನೀಡಿದೆ. ಮಹಿಳಾ ಹೆಚ್ಆರ್ ಅಮಾನತು ಮಾಡಲಾಗಿದೆ. ಆದರೆ ಕಾರಣಗಳು ಬೇರೆ ಇದೆ. ಮಹಿಳಾ ಹೆಚ್ಆರ್ ಕ್ಷಮತೆ ನಿರೀಕ್ಷಿತವಾಗಿರಲಿಲ್ಲ.  ಕೆಲಸದ ಸಮಯದಲ್ಲಿ ಮನೆಯ ಕೆಲಸ, ಪುತ್ರಿಯ ಹೋಮ್ ವರ್ಕ್ ಸೇರಿದಂತೆ ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕಂಪನಿಯ ಸೋಶಿಯಲ್ ಮೀಡಿಯಾ ಪೇಜ್‌ಗಳನ್ನು ನಿರ್ವಹಿಸುತ್ತಿರಲಿಲ್ಲ. ಇದೀಗ ಸಿಂಪಥಿ ಗಿಟ್ಟಿಸಿಕೊಳ್ಳಲು ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಂಪನಿ ತಿರುಗೇಟು ನೀಡಿದೆ.

ಸಿಕ್ ಲೀವ್‌ಗೆ 7 ದಿನ ಮೊದಲೇ ತಿಳಿಸಬೇಕು, ಬಾಸ್ ಮೆಸೇಜ್‌ಗೆ ನೆಟ್ಟಿಗರ ಕ್ಲಾಸ್!
 

click me!