ಕಾಂಗ್ರೆಸ್ ಪುನರುಜ್ಜೀವನಕ್ಕೆ ರಾಹುಲ್ ಗಾಂಧಿಯೇ ಸೂಕ್ತ

By Suvarna NewsFirst Published Aug 9, 2020, 9:09 AM IST
Highlights

ಸಂಕಷ್ಟದಲ್ಲಿರುವ ಕಾಂಗ್ರೆಸ್ ಪಕ್ಷದ ಪುನರುಜ್ಜೀವನಕ್ಕೆ ಸಂಸದ ರಾಹುಲ್ ಗಾಂಧಿಯೇ ಸೂಕ್ತ ನಾಯಕ ಎಂದು ಸಮೀಕ್ಷೆಯೊಂದರಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಅದರೊಂದಿಗೆ ಪಕ್ಷದ ಸಾರಥ್ಯವನ್ನು ರಾಹುಲ್ ಕೈಗೆ ಕೊಡಬೇಕು ಎಂದು ಕಾಂಗ್ರೆಸ್ ವಲಯದಲ್ಲಿ ಎದ್ದಿರುವ ಕೂಗಿಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ. 
 

ಬೆಂಗಳೂರು (ಆ. 09): ಸಂಕಷ್ಟದಲ್ಲಿರುವ ಕಾಂಗ್ರೆಸ್ ಪಕ್ಷದ ಪುನರುಜ್ಜೀವನಕ್ಕೆ ಸಂಸದ ರಾಹುಲ್ ಗಾಂಧಿಯೇ ಸೂಕ್ತ ನಾಯಕ ಎಂದು ಸಮೀಕ್ಷೆಯೊಂದರಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಅದರೊಂದಿಗೆ ಪಕ್ಷದ ಸಾರಥ್ಯವನ್ನು ರಾಹುಲ್ ಕೈಗೆ ಕೊಡಬೇಕು ಎಂದು ಕಾಂಗ್ರೆಸ್ ವಲಯದಲ್ಲಿ ಎದ್ದಿರುವ ಕೂಗಿಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ. 

ಇಂಡಿಯಾ ಟುಡೆ ಮತ್ತು ಕಾರ್ವಿ ಇನ್‌ ಸೈಟ್ಸ್ ಲಿ. ಜಂಟಿಯಾಗಿ ನಡೆಸಿದ ಮೂಡ್ ಆಫ್‌ ದಿ ನೇಶನ್ ಸಮೀಕ್ಷೆಯಲ್ಲಿ ಶೇ. 23 ರಷ್ಟು ಜನರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿಯೇ ಸೂಕ್ತ ಎಂದು ಹೇಳಿದ್ದಾರೆ. ಒಟ್ಟು 12,021 ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 

ಕುತೂಹಲದ ಸಂಗತಿ ಎಂದರೆ ರಾಹುಲ್ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪರ ಅಭಿಪ್ರಾಯ ವ್ಯಕ್ತಪಡಿಸಿರುವವರ ಸಂಖ್ಯೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಪರ ಇರುವವರ ಸಂಖ್ಯೆಗಿಂತ ಜಾಸ್ತಿ ಇದೆ. ಮನಮೋಹನ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲಿ ಎಂದು ಶೇ. 18 ಜನರು ಹೇಳಿದ್ದಾರೆ. ಇದೇ ವರ್ಷ ಜನವರಿಯಲ್ಲಿ ನಡೆದ ಮೂಡ್ ಆಫ್‌ ದಿ ನೇಶನ್ ಸಮೀಕ್ಷೆಯಲ್ಲಿ ಶೇ.13 ರಷ್ಟು ಜನರು ಮನಮೋಹನ್ ಸಿಂಗ್ ಪರ ಇದ್ದರು. ಈಗ ಪಕ್ಷದೊಳಗೂ ಮಮನಮೋಹನ್ ಪರ ಒಂದು ವರ್ಗದಿಂದ ಒಲವು ವ್ಯಕ್ತವಾಗುತ್ತಿದ್ದು ಇತ್ತೀಚಿಗೆ ಸೋನಿಯಾ ಗಾಂಧಿ ಅವರು ಪಕ್ಷದ ರಾಜ್ಯಸಭಾ ಸಂಸದರ ಸಭೆ ನಡೆಸಿದ ನಂತರ ಹಲವು ನಾಯಕರು ಮನಮೋಹನ್ ಸಿಂಗ್ ಬೆಂಬಲಿಸಿ ಟ್ವಿಟ್ ಮಾಡಿದ್ದರು. 

click me!