ಮಂಗಳೂರು ಸೇರಿ ದೇಶದ 5 ಟೇಬಲ್‌ ಟಾಪ್‌ ನಿಲ್ದಾಣಗಳು: ಸಣ್ಣ ಎಡವಟ್ಟಾದ್ರೂ ಅಪಘಾತ!

By Suvarna NewsFirst Published Aug 9, 2020, 9:02 AM IST
Highlights

ಟೇಬಲ್ ಟಾಪ್ ಭಾರೀ ಡೇಂಜರ್| ಸಣ್ಣ ಎಡವಟ್ಟಾದರೂ ವಿಮಾನ ಅಪಘಾತ ಖಚಿತ| ಎಚ್ಚರಿಕೆಯ ಹೊರತೂ ಆಗಿಲ್ಲ ರನ್‌ವೇ ಸುಧಾರಣೆ

ನವದೆಹಲಿ(ಆ.09): ಕಲ್ಲಿಕೋಟೆ ವಿಮಾನ ದುರಂತ ಬಳಿಕ ದೇಶಾದ್ಯಂತ ಮತ್ತೊಮ್ಮೆ ಟೇಬಲ್‌ ಟಾಪ್‌ ವಿಮಾನ ನಿಲ್ದಾಣಗಳ ಕುರಿತು ಚರ್ಚೆ ಜೋರಾಗಿದೆ. ಇಂಥ ನಿಲ್ದಾಣಗಳ ರನ್‌ವೇ ವಿಸ್ತರಣೆ ಮಾಡಬೇಕು, ಇಲ್ಲವೇ ಇಂಥ ವಿಮಾನ ನಿಲ್ದಾಣಗಳ ಬಳಕೆ ಬಿಡಬೇಕು ಎಂಬ ಮನವಿಗಳ ಹೊರತಾಗಿಯೂ ನಾನಾ ಕಾರಣಗಳಿಂದಾಗಿ ಇಂಥ ನಿಲ್ದಾಣಗಳ ಬಳಕೆ ಮುಂದುವರೆದೇ ಇದೆ.

ಇತರೆ ನಿಲ್ದಾಣಗಳಿಗೆ ಹೋಲಿಸಿದರೆ ಗುಡ್ಡ ಅಥವಾ ಎತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆ ಪೈಲಟ್‌ಗಳಿಗೆ ಸವಾಲಿಕನ ಕೆಲಸ. ರನ್‌ವೇ ಉದ್ದ ಕಡಿಮೆ ಇರುವ ಕಾರಣ ಸಣ್ಣದೊಂದು ವೈಫಲ್ಯ ಕೂಡಾ ಭಾರೀ ಅನಾಹುತಕ್ಕೆ ಕಾರಣವಾಗಬಹುದು.

ಏನಿದು ಟೇಬಲ್‌ಟಾಪ್‌ ರನ್‌ವೇ? ಮಂಗಳೂರು ದುರಂತ ನೆನಪಿಸಿದ ಕಲ್ಲಿಕೋಟೆ ವಿಮಾನ ಅಪಘಾತ!

10 ವರ್ಷಗಳ ಹಿಂದೆ 158 ಜನರನ್ನು ಬಲಿ ಪಡೆದ ಮಂಗಳೂರು ವಿಮಾನ ದುರಂತ ಇದಕ್ಕೊಂದು ಉದಾಹರಣೆ. ಆ ಘಟನೆ ಬಳಿಕ ಭಾರತದಲ್ಲಿ ಇರುವ ಇಂಥ ಇತರೆ ನಿಲ್ದಾಣಗಳ ಬಗ್ಗೆ ಸಾಕಷ್ಟುಎಚ್ಚರಿಕೆ ನೀಡಿದ್ದರೂ, ಅದು ಯಾವುದೇ ಫಲ ಕೊಟ್ಟಿಲ್ಲ. ದೇಶದಲ್ಲಿ ಕಳೆದ 10 ವರ್ಷದಲ್ಲಿ ನಡೆದ ದೊಡ್ಡ ವಿಮಾನ ಅವಘಢಗಳು ಟೇಬಲ್‌ ಟಾಪ್‌ ನಿಲ್ದಾಣಗಳಲ್ಲೇ ನಡೆದಿದೆ ಎನ್ನುವುದು ಈ ಮಾದರಿಯ ವಿಮಾನ ನಿಲ್ದಾಣಗಳ ಆತಂಕ ಹೆಚ್ಚಿಸಿದೆ.

ಮಂಗಳೂರು ಸೇರಿ ದೇಶದಲ್ಲಿ 5 ಟೇಬಲ್‌ ಟಾಪ್‌ ನಿಲ್ದಾಣಗಳು

1. ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕರಿಪುರ ಮಲಪ್ಪುರಂ

2. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಜ್ಪೆ

3. ಶಿಮ್ಲಾ ವಿಮಾನ ನಿಲ್ದಾಣ, ಜುಬರಾತ್ತಿ ಹಿಮಾಚಲ ಪ್ರದೇಶ

4. ಪ್ಯಾಕ್ಯೋಂಗ್‌ ವಿಮಾನ ನಿಲ್ದಾಣ, ಸಿಕ್ಕಿಂ

5. ಲೆಂಗ್ಪುಯ್‌ ವಿಮಾನ ನಿಲ್ದಾಣ, ಐಜ್ವಾಲ್‌, ಮಿಜೋರಾಂ

click me!