ಅನಂತ ಪದ್ಮನಾಭ ದೇಗುಲ ಯಾರ ವಶ? ಸುಪ್ರೀಂನಿಂದ ಮಹತ್ತರ ತೀರ್ಪು

By Suvarna NewsFirst Published Jul 13, 2020, 9:47 AM IST
Highlights

ದೇಗುಲದ ನಿರ್ವಹಣೆಗೆ ಪ್ರತ್ಯೇಕ ಟ್ರಸ್ಟ್‌ ರಚಿಸಿ, ದೇಗುಲವನ್ನು ವಶಕ್ಕೆ ಪಡೆಯಬೇಕು 2011ರ ಜ.31ರಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ರಾಜಮನೆತನ ಪ್ರಶ್ನಿಸಿದ್ದು, ಕಳೆದ 9 ವರ್ಷಗಳಿಂದ ದಾವೆ ನಡೆಯುತ್ತಿದೆ. ಏ.10ರಂದು ಸುಪ್ರೀಂಕೋರ್ಟ್‌ ತೀರ್ಪು ಕಾದಿರಿಸಿತ್ತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜು.13): ನೆಲಮಾಳಿಗೆಯಲ್ಲಿ 1 ಲಕ್ಷ ಕೋಟಿ ರು.ಗೂ ಅಧಿಕ ಮೌಲ್ಯದ ಚಿನ್ನಾಭರಣ ಹೊಂದಿರುವ ಕೇರಳದ ತಿರುವನಂತಪುರದಲ್ಲಿರುವ ಅನಂತಪದ್ಮನಾಭ ದೇವಾಲಯದ ಆಡಳಿತ ಮಂಡಳಿಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಸೋಮವಾರ ತೀರ್ಪು ಪ್ರಕಟಿಸಲಿದೆ.

ದಕ್ಷಿಣ ಕೇರಳ ಮತ್ತು ತಮಿಳುನಾಡಿನಲ್ಲಿ ಆಡಳಿತ ನಡೆಸಿದ್ದ ತಿರುವಾಂಕೂರು ರಾಜಮನೆತನ 18ನೇ ಶತಮಾನದಲ್ಲಿ ಅನಂತ ಪದ್ಮನಾಭ ದೇವಾಲಯವನ್ನು ಪುನರ್‌ ನಿರ್ಮಾಣ ಮಾಡಿತ್ತು. ಸ್ವಾತಂತ್ರ್ಯಾನಂತರ ಟ್ರಸ್ಟ್‌ ಮಾಡಿಕೊಂಡು ದೇಗುಲವನ್ನು ರಾಜಮನೆತನದವರೇ ನೋಡಿಕೊಳ್ಳುತ್ತಿದ್ದರು. ಆದರೆ, ದೇಗುಲದ ನಿರ್ವಹಣೆಗೆ ಪ್ರತ್ಯೇಕ ಟ್ರಸ್ಟ್‌ ರಚಿಸಿ, ದೇಗುಲವನ್ನು ವಶಕ್ಕೆ ಪಡೆಯಬೇಕು 2011ರ ಜ.31ರಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ರಾಜಮನೆತನ ಪ್ರಶ್ನಿಸಿದ್ದು, ಕಳೆದ 9 ವರ್ಷಗಳಿಂದ ದಾವೆ ನಡೆಯುತ್ತಿದೆ. ಏ.10ರಂದು ಸುಪ್ರೀಂಕೋರ್ಟ್‌ ತೀರ್ಪು ಕಾದಿರಿಸಿತ್ತು.

ಕಟ್ಮಂಡು ಪಶುಪತಿ ಆಸ್ತಿ ಬಹಿರಂಗ, ಎಷ್ಟೆ ಇದ್ರೂ ತಿರುಪತಿ ತಿಮ್ಮಪ್ಪನೇ ಶ್ರೀಮಂತ!

ಅನಂತ ಪದ್ಮನಾಭ ದೇವಸ್ಥಾನದ ನೆಲ ಮಾಳಿಗೆಯಲ್ಲಿ 6 ಗುಪ್ತ ಕೋಣೆಗಳಿವೆ. ಈ ಕೋಣೆಗಳಲ್ಲಿ ಅಪರಿಮಿತವಾದ ಚಿನ್ನಭರಣಗಳನ್ನು ಹೊಂದಿವೆ ಎನ್ನಲಾಗಿದೆ. ಈ ಪೈಕಿ A ಮತ್ತು F ಕೋಣೆಗಳು ಅತಿದೊಡ್ಡ ರೂಂ ಗಳಾಗಿವೆ. ಈಗಾಗಲೇ A ಮತ್ತು B ರೂಂಗಳ ಬಾಗಿಲುಗಳನ್ನು ತೆರೆಯಲಾಗಿದೆ. C ಮತ್ತು F ರೂಂಗಳಲ್ಲಿ ಊಹಿಸಲಾಧ್ಯವಾದಷ್ಟು ಆಭರಣಗಳಿವೆ ಎನ್ನಲಾಗಿದೆ. 
 

click me!