ಕೊರೋನಾ ವಿರುದ್ಧ ನಮ್ಮಲ್ಲಿ ಮಾತ್ರ ಯಶಸ್ವಿ ಹೋರಾಟ: ಅಮಿತ್ ಶಾ

Naveen Kodase   | Asianet News
Published : Jul 13, 2020, 07:57 AM ISTUpdated : Jul 13, 2020, 08:16 AM IST
ಕೊರೋನಾ ವಿರುದ್ಧ ನಮ್ಮಲ್ಲಿ ಮಾತ್ರ ಯಶಸ್ವಿ ಹೋರಾಟ: ಅಮಿತ್ ಶಾ

ಸಾರಾಂಶ

ವಿಶ್ವವು ಇಂದು ಕೊರೋನಾ ವಿರುದ್ಧ ಎಲ್ಲಿ ಯಶಸ್ವಿ ಹೋರಾಟ ನಡೆದಿದೆ ಎಂದು ನೋಡಿದರೆ, ಅದು ಭಾರತಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದ ಅಡಿ ಎಂದು ತಿಳಿದುಬರುತ್ತದೆ ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಗುಡಗಾಂವ್‌(ಜು.13):  ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ದೇಶವು ದೃಢನಿಶ್ಚಯ ಹಾಗೂ ಉತ್ಸಾಹದಿಂದ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಕೇಂದ್ರೀಯ ಸಶಸ್ತ್ರ ಮೀಸಲು ಪಡೆ ದೇಶಾದ್ಯಂತ ಮಾಸಾಂತ್ಯದೊಳಗೆ 1.37 ಕೋಟಿ ಸಸಿ ನಡೆಡುವ ಆಂದೋಲನ ಆರಂಭಿಸಿದ್ದು, ಇದಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಶಾ, ‘ವಿಶ್ವವು ಇಂದು ಕೊರೋನಾ ವಿರುದ್ಧ ಎಲ್ಲಿ ಯಶಸ್ವಿ ಹೋರಾಟ ನಡೆದಿದೆ ಎಂದು ನೋಡಿದರೆ, ಅದು ಭಾರತಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದ ಅಡಿ ಎಂದು ತಿಳಿದುಬರುತ್ತದೆ’ ಎಂದರು.

‘ಭಾರತ 130 ಕೋಟಿ ಜನಸಂಖ್ಯೆ ಹೊಂದಿದ ದೊಡ್ಡ ದೇಶ. ಒಕ್ಕೂಟ ವ್ಯವಸ್ಥೆಯ ದೇಶವಿದು. ಇಂಥ ದೊಡ್ಡ ದೇಶವು ಕೊರೋನಾ ವೈರಸ್‌ ಸವಾಲನ್ನು ಹೇಗೆ ಎದುರಿಸಲಿದೆ ಎಂದು ಭಯಪಡಲಾಗಿತ್ತು. ಆದರೆ 130 ಕೋಟಿ ಜನ, ಎಲ್ಲ ರಾಜ್ಯಗಳು ‘ಏಕದೇಶ’ ಎಂಬ ಪರಿಕಲ್ಪನೆಯಲ್ಲಿ ಕೋವಿಡ್‌-19 ವಿರುದ್ಧ ಹೋರಾಡಿದ್ದಾರೆ’ ಎಂದು ಹೇಳಿದರು.

ಕೊರೋನಾ ಚಿಕಿತ್ಸೆ: ಉಲ್ಟಾ ಹೊಡೆದ ಖಾಸಗಿ ಆಸ್ಪತ್ರೆಗಳು

‘ಜಗತ್ತಿನಾದ್ಯಂತ ಸರ್ಕಾರಗಳು ಈ ವ್ಯಾಧಿ ವಿರುದ್ಧ ಹೋರಾಡುತ್ತಿವೆ. ಆದರೆ ನಮ್ಮ ದೇಶದಲ್ಲಿ ಪ್ರತಿ ವ್ಯಕ್ತಿ ಕೈಜೋಡಿಸಿದ್ದಾರೆ. ಕೊರೋನಾ ವಿರುದ್ಧದ ಯುದ್ಧದಲ್ಲಿ ನಾವು ಇಂದು ಉತ್ತಮ ಸ್ಥಿತಿಯಲ್ಲಿದ್ದೇವೆ. ಬದ್ಧತೆಯೊಂದಿಗೆ ಹೋರಾಟ ನಡೆದಿದೆ. ಭಯದ ವಾತಾವರಣವಿಲ್ಲ. ಅದನ್ನು ಸೋಲಿಸುವ ಉಮೇದಿ ನಮ್ಮಲ್ಲಿದೆ. ಸಶಸ್ತ್ರ ಪಡೆಗಳು ಇದರ ವಿರುದ್ಧದ ಯುದ್ಧದಲ್ಲಿ ದೊಡ್ಡ ಪಾತ್ರ ಹೊಂದಿವೆ’ ಎಂದರು.

‘ಕೊರೋನಾ ಮಾನವ ಕುಲಕ್ಕೇ ದೊಡ್ಡ ಸವಾಲು. ಇದರ ವಿರುದ್ಧ ಹೋರಾಡುವಾಗ ಸಶಸ್ತ್ರ ಪಡೆಗಳ ಯೋಧರೂ ಜೀವ ತ್ಯಾಗ ಮಾಡಿದ್ದಾರೆ. ನಿಮ್ಮ ತ್ಯಾಗ ವ್ಯರ್ಥವಾಗಲ್ಲ. ಅದನ್ನು ಸುವರ್ಣಾಕ್ಷರದಲ್ಲಿ ಬರೆದಿಡಲಾಗವುದು’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ