ನವದೆಹಲಿ: ತಮಿಳುನಾಡಿನ ಅಣ್ಣಾಡಿಎಂಕೆ ಪಕ್ಷದಲ್ಲಿ ನಡೆಯುತ್ತಿದ್ದ ಆಂತರಿಕ ಕದನಕ್ಕೆ ಮಹತ್ತರ ತಿರುವು ಲಭಿಸಿದೆ. ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್)ಗೆ ಅನುಮತಿ ನೀಡಿ ಮದ್ರಾಸ್ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿ ಹಿಡಿದಿದೆ. ನ್ಯಾಯಾಲಯದ ಈ ನಿರ್ಧಾರದಿಂದ ಅಣ್ಣಾಡಿಎಂಕೆಯಲ್ಲಿ ಇಪಿಎಸ್ ಅವರೇ ಪರಮೋಚ್ಚ ನಾಯಕ ಎಂದು ಸಾರಿದಂತಾಗಿದೆ. ಅವರ ವಿರುದ್ಧ ಕಾನೂನು ಸಮರ ಸಾರಿದ್ದ ಮತ್ತೊಬ್ಬ ಮಾಜಿ ಸಿಎಂ ಒ.ಪನ್ನೀರ್‌ಸೆಲ್ವಂ (ಒಪಿಎಸ್) ಅವರಿಗೆ ತೀವ್ರ ಹಿನ್ನಡೆಯಾಗಿದೆ.
2022ರ ಜು.11ರಂದು ಅಣ್ಣಾಡಿಎಂಕೆ (AIDMK) ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಪಳನಿಸ್ವಾಮಿ (Palaniswami) ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ, ಪನ್ನೀರ್‌ಸೆಲ್ವಂ (Panneerselvam) ಅವರನ್ನು ಉಚ್ಚಾಟಿಸಲಾಗಿತ್ತು. ಇದರ ವಿರುದ್ಧ ಪನ್ನೀರ್‌ಸೆಲ್ವಂ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಏಕಸದಸ್ಯ ಪೀಠ ಆ ಸಭೆಯ ನಿರ್ಣಯವನ್ನು ರದ್ದುಗೊಳಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶವನ್ನೇ ರದ್ದುಗೊಳಿಸಿತ್ತು. ಇದೀಗ ಸುಪ್ರೀಂಕೋರ್ಟ್ (Supreme Court) ಕೂಡ ಅದನ್ನು ಸರಿ ಎಂದಿದೆ.
ಪಳನಿಸ್ವಾಮಿಯೇ AIADMK ಬಾಸ್: ಮದ್ರಾಸ್ ಹೈಕೋರ್ಟ್ ತೀರ್ಪಿನಿಂದ ಓಪಿಎಸ್‌ಗೆ ಹಿನ್ನೆಡೆ
ಇದರ ಬೆನ್ನಲ್ಲೇ ಎಡಪ್ಪಾಡಿ ಕೆ.ಪಳನಿಸ್ವಾಮಿ (EPS) ಬೆಂಬಲಿಗರಿಂದ ಚೆನ್ನೈನಲ್ಲಿ ಸಂಭ್ರಮಾಚರಣೆ ನಡೆದಿದೆ. ಪಕ್ಷವನ್ನು ಮುಗಿಸಲು ಉದ್ದೇಶಿಸಿದ್ದ ಡಿಎಂಕೆ ಬಿ-ಟೀಂ ಹಾಗೂ ವಂಚಕರ ಮುಖವನ್ನು ಸುಪ್ರೀಂಕೋರ್ಟ್ ಬಯಲು ಮಾಡಿದೆ ಎಂದು ಇದಕ್ಕೆ ಇಪಿಎಸ್ ಪ್ರತಿಕ್ರಿಯಿಸಿದ್ದಾರೆ.
ಎಐಎಡಿಎಂಕೆಯಲ್ಲಿ ಬಿರುಕು, ಪನ್ನೀರಸೆಲ್ವಂ ಸೇರಿ ನಾಲ್ವರ ಉಚ್ಚಾಟನೆ, ಪ್ರಧಾನ ಕಚೇರಿ ಸೀಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ