ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಗೊಂದಲ: ಹೆಲ್ಪ್‌ಲೈನ್ ತೆರೆದ ಏರ್ಪೋರ್ಟ್

By Suvarna News  |  First Published Feb 23, 2023, 5:12 PM IST

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌2ರಲ್ಲಿ ಕಾರ್ಯಾಚರಣೆ ಆರಂಭಿಸಿರುವ, ಏರ್‌ಲೈನ್ಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ ಪ್ರಯಾಣಿಕರು ಟರ್ಮಿನಲ್‌ 2ರಲ್ಲಿ ನೇರವಾಗಿ ತೆರಳಬಹುದಾಗಿದೆ.


ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌2ರಲ್ಲಿ ಕಾರ್ಯಾಚರಣೆ ಆರಂಭಿಸಿರುವ, ಏರ್‌ಲೈನ್ಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ ಪ್ರಯಾಣಿಕರು ಟರ್ಮಿನಲ್‌ 2ರಲ್ಲಿ ನೇರವಾಗಿ ತೆರಳಬಹುದು. ಟರ್ಮಿನಲ್ 2ರಲ್ಲಿ ಈಗಾಗಲೇ ಏರ್‌ ಏಷ್ಯಾ ಇಂಡಿಯಾ ಮತ್ತು ಸ್ಟಾರ್ ಏರ್‌ ದೇಶೀಯ ಏರ್‌ಲೈನ್ಸ್‌ ಕಾರ್ಯಾಚರಣೆ ಶುರು ಮಾಡಿದೆ. ಈ ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿದ ಪ್ರಯಾಣಿಕರು ಈ ಬಗ್ಗೆ ಮಾಹಿತಿ ಇಲ್ಲದೇ ಟರ್ಮಿನಲ್‌ 1ಗೆ ತೆರಳುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಹೀಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ತನ್ನ ಪ್ರಯಾಣಿಕರಿಗಾಗಿ ಪ್ರಕಟಣೆ ಹೊರಡಿಸಿದ್ದು, ಸಹಾಯವಾಣಿ ತೆರೆದಿದೆ.

ಏರ್‌ಏಷ್ಯಾ ಇಂಡಿಯಾ ಹಾಗೂ ಸ್ಟಾರ್‌ಏರ್‌ ಏರ್‌ಲೈನ್ಸ್‌ ಎರಡೂ ತಮ್ಮ ಸಂಪೂರ್ಣ ದೇಶಿಯ ಕಾರ್ಯಾಚರಣೆಯನ್ನು ಟಿ2ಗೆ ಸ್ಥಳಾಂತರಿಸಿದೆ. ಹೀಗಾಗಿ ಈ ಏರ್‌ಲೈನ್ಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ ಬಳಿಕ ಪ್ರಯಾಣಿಕರು ಒಮ್ಮೆ ಟಿಕೆಟ್‌ ನೋಡಿ ಟರ್ಮಿನಲ್‌ಗೆ ಪ್ರವೇಶಿಸುವಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ವಿನಂತಿಸಿದೆ. ಟಿ1 ಮತ್ತು ಟಿ2 ಟರ್ಮಿನಲ್ ಗಳು ಒಂದೇ ವಿಮಾನ ನಿಲ್ದಾಣದ ಆವರಣದಲ್ಲಿದ್ದು, ಸುಮಾರು 600 ಮೀಟರ್‌ಗಳ ಅಂತರದಲ್ಲಿದೆ. ಎರಡು ಟರ್ಮಿನಲ್‌ಗಳ ನಡುವಿನ ಸಂಪರ್ಕಕ್ಕಾಗಿ  24X7  ಗಂಟೆ ನಿಯಮಿತ ಆವರ್ತನದಲ್ಲಿ ಸಂಪರ್ಕ ವಾಹನ (ಶಟಲ್ ಬಸ್) ಸೇವೆಗಳು ಲಭ್ಯವಿರುತ್ತವೆ. ಟರ್ಮಿನಲ್ 1 ರಲ್ಲಿ ಸಂಪರ್ಕ ವಾಹನ (ಶಟಲ್ ಬಸ್) ಸೇವೆಗಳು ಈ ಕೆಳಗೆ ನಮೂದಿಸಿರುವ ಸ್ಥಳಗಳಿಂದ ಲಭ್ಯವಿರುತ್ತದೆ.

Tap to resize

Latest Videos

ರಿಲೇ ಔಟ್‌ಲೆಟ್‌ನ ಮುಂದಿರುವ ನಿರ್ಗಮನ ವಲಯದ (ಡಿಪಾರ್ಚರ್ ಜೋನ್ ನ) ಒಳಗಿನ ಲೇನ್‌ನಿಂದ 
ಕೆರ್ಬ್‌ಸೈಡ್ ನಿಂದ (ಟರ್ಮಿನಲ್‌ 1ನ ಪೂರ್ವ ತುದಿ). 
T2 ನಲ್ಲಿ, ಆಗಮನ ವಲಯದ(ಅರೈವಲ್ಸ್) ಒಳಗಿನ ಲೇನ್‌ನ ಪಿಕ್ ಅಪ್ ಪಾಯಿಂಟ್‌ P16/P17 ನಿಂದ.

ಪ್ರಸ್ತುತ ಟರ್ಮಿನಲ್‌ 1ರಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾರಿಗೆ ವಾಹನಗಳು . ಏರ್‌ಪೋರ್ಟ್ ಟ್ಯಾಕ್ಸಿಗಳು, ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿಗಳು (ಓಲಾ / ಉಬರ್), ಬಿಎಂಟಿಸಿ ಬಸ್‌, ಕೆಎಸ್‌ಆರ್‌ಟಿಸಿ ಬಸ್‌ಗಳು  ಮತ್ತು ಖಾಸಗಿ ಕಾರುಗಳು ಟಿ2 ನ ಪ್ರಯಾಣಿಕರಿಗೂ ಸಹ ಲಭ್ಯವಿರುತ್ತದೆ. ಟಿ2ನ ಆಗಮನದ ಮಟ್ಟದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಹ ಲಭ್ಯವಿದೆ. ನೀವು ಪ್ರಯಾಣಿಸುವ ಟರ್ಮಿನಲ್‌ನಲ್ಲಿನ ಬದಲಾವಣೆಯ ಕುರಿತು ಪ್ರಶ್ನೆಗಳಿದ್ದರೆ ಸಹಾಯಕ್ಕಾಗಿ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
91-8884998888 (WhatsApp ಮಾತ್ರ)
91-80-22012001/+91-80-66785555

ವಿಮಾನಯಾನ ಸಂಬಂಧಿತ ಪ್ರಶ್ನೆಗಳಿಗೆ ಸ್ಟಾರ್‌ಏರ್ +91-22-50799555 ಅಥವಾ ಇಮೇಲ್: CustomerCare@starair.in
ಏರ್‌ಏಷ್ಯಾ ಇಂಡಿಯಾ +91-80-46662222/+91-80-67662222 ಅಥವಾ https://www.airasia.co.in/support ಸಂಪರ್ಕಿಸಬಹುದಾಗಿದೆ. 

click me!