
ನವದೆಹಲಿ: ದೆಹಲಿಯಿಂದ ಛತ್ತೀಸ್‌ಗಢಕ್ಕೆ ತೆರಳಲು ವಿಮಾನವೇರಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿಸಿ ಪೊಲೀಸರು ಬಂಧಿಸಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ಮಾಡಿದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ನಡೆದಿದೆ. ಅಸ್ಸಾಂನಲ್ಲಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಅವರು ಕಾಂಗ್ರೆಸ್ ನಾಯಕ ದೊಡ್ಡ ಗುಂಪಿನೊಂದಿಗೆ ದೆಹಲಿಯಿಂದ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆಯಲಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸಭೆಗಾಗಿ ಕ್ಕೆ ಇಂಡಿಗೋ ವಿಮಾನದಲ್ಲಿ ಹೊರಟಿದ್ದರು. ಈ ವೇಳೆ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಪ್ರತಿಯೊಂದಿಗೆ ಅಲ್ಲಿಗೆ ಬಂದ ಅಸ್ಸಾಂ ಪೊಲೀಸರು (Pawan Khera) ನಾಯಕ ಪವನ್ ಖೇರಾರನ್ನು ಒತ್ತಾಯಪೂರ್ವಕವಾಗಿ ವಿಮಾನದಿಂದ ಇಳಿಸಿ ಕರೆದೊಯ್ದಿದ್ದಾರೆ. ಇದನ್ನು ಖಂಡಿಸಿ ಸುಮಾರು 50 ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದ ರನ್ ವೇಯಲ್ಲೇ ಪ್ರತಿಭಟನೆ ನಡೆಸಿ ವಿಮಾನವನ್ನು ಹಾರಲು ಬಿಡದೇ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಿಮಾನ ಹಾರಾಟ ವಿಳಂಬವಾಗಿದೆ.
ಅಕ್ಷಯ್ ಕುಮಾರ್ ಮೂರ್ಖ, ನನ್ನ ಪಾಲಿಗೆ ಅಕ್ಷಯ್ ಹಾಗೂ ಅಕ್ಬರ್ ಇಬ್ಬರೂ ಈ ದೇಶದವರು!
ಘಟನೆಗೆ ಸಂಬಂಧಿಸಿದಂತೆ ಇಂಡಿಗೋ ವಿಮಾನವೂ ಪ್ರಕಟಣೆ ಹೊರಡಿಸಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ರಾಯ್‌ಪುರಕ್ಕೆ ಹೊರಟಿದ್ದ 6E 204 ವಿಮಾನದಿಂದ ಒಬ್ಬ ಪ್ರಯಾಣಿಕನನ್ನು ಪೊಲೀಸರು ಕೆಳಗಿಳಿಸಿದ್ದಾರೆ. ಈ ವೇಳೆ ಇತರ ಕೆಲವು ಪ್ರಯಾಣಿಕರು ಸಹ ತಮ್ಮ ಇಚ್ಛೆಯ ಮೇರೆಗೆ ಇಳಿಯಲು ನಿರ್ಧರಿಸಿದರು. ನಾವು ಸಂಬಂಧಿತ ಅಧಿಕಾರಿಗಳ ಸಲಹೆಯನ್ನು ಪಾಲಿಸಿದ್ದೇವೆ. ವಿಮಾನವು ಸದ್ಯಕ್ಕೆ ವಿಳಂಬವಾಗಿದೆ ಮತ್ತು ಇದರಿಂದ ಇತರ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಇಂಡಿಗೋ ಏರ್‌ಲೈನ್ಸ್ (IndiGo Airline)ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪವನ್ ಖೇರಾ ಪ್ರತಿಕ್ರಿಯಿಸಿದ್ದು, ಅವರನ್ನು ವಿಮಾನದಿಂದ ಕೆಳಗಿಳಿಸುವ ಮೊದಲು ಅವರ ಲಗೇಜ್‌ನಲ್ಲಿ ತೊಂದರೆ ಇದೆ ಎಂದು ಮೊದಲಿಗೆ ಹೇಳಲಾಯಿತು. ಆದರೆ ನನ್ನ ಬಳಿ ಕೇವಲ ಒಂದು ಹ್ಯಾಂಡ್ ಬ್ಯಾಗ್ ಇತ್ತು. ಅವರು ನನಗೆ ಈಗ ಈ ವಿಮಾನದಲ್ಲಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು. ನಂತರ ಅವರು ಡಿಸಿಪಿ (ಪೊಲೀಸ್ ಉಪ ಆಯುಕ್ತರು) ನಿಮ್ಮನ್ನು ಭೇಟಿ ಮಾಡುತ್ತಾರೆ ಎಂದು ಹೇಳಿದರು. ನಾನು ತುಂಬಾ ಹೊತ್ತಿನಿಂದ ಕಾಯುತ್ತಿದ್ದೇನೆ. ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಯಾವುದೇ ಲಕ್ಷಣಗಳಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಸ್ರೇಲ್ ನೆರವಿನಿಂದ ಮೋದಿ ಎಲೆಕ್ಷನ್ ಗೆಲ್ತಾರೆ: ಕಾಂಗ್ರೆಸ್ ಆರೋಪ
ಇದರ ಹಿಂದೆ ಧೃತಿಗೆಟ್ಟ ಸರ್ಕಾರದ ಕೈವಾಡವಿದೆ ಎಂದು ಅವರು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ಖೇರಾ ಅವರನ್ನು ಬಂಧಿಸುವಂತೆ ಬಿಜೆಪಿ ಒತ್ತಾಯಿಸಿದೆ. ಅಸ್ಸಾಂನಲ್ಲಿ ಬಿಜೆಪಿ ಮುಖಂಡರೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.
ದಿಲ್ಲಿ-ರಾಯಪುರ ವಿಮಾನದಿಂದ (Delhi-Raipur flight) ಪವನ್ ಖೇರಾ ಅವರನ್ನು ಕೆಳಗಿಳಿಸಿ ಮೋದಿ ಸರಕಾರವು ಗೂಂಡಾಗಳ ಗುಂಪಿನಂತೆ ವರ್ತಿಸುತ್ತಿದೆ. ಅವರನ್ನು ಎಐಸಿಸಿ ಸಭೆಯಲ್ಲಿ ಭಾಗವಹಿಸದಂತೆ ಮಾಡಿದೆ. ಕ್ಷುಲ್ಲಕ ಎಫ್‌ಐಆರ್ (FIR) ಬಳಸಿ ಅವರ ಚಟುವಟಿಕೆಯನ್ನು ನಿರ್ಬಂಧಿಸಿ ಅವರನ್ನು ಮೌನವಾಗಿರಿಸಲು ಯತ್ನಿಸಿದ್ದು, ನಾಚಿಕೆಗೇಡಿನ ಒಪ್ಪಿಕೊಳ್ಳಲಾಗದ ಕೃತ್ಯವಾಗಿದೆ. ನಮ್ಮ ಇಡೀ ಪಕ್ಷವೂ ಪವನ್ ಜೀ ಜೊತೆ ನಿಲ್ಲುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ಪತ್ರಿಕಾಗೋಷ್ಠಿ ನಡೆಸಿದ ಪವನ್ ಖೇರಾ ಅವರು ಅದಾನಿ ಹಿಂಡೆನ್‌ಬರ್ಗ್ ವಿವಾದದ (Adani-Hindenburg row) ಬಗ್ಗೆ ಜಂಟಿ ಸಂಸದೀಯ ಸಮಿತಿ (Joint Parliamentary Committee) ತನಿಖೆಗೆ ಒತ್ತಾಯಿಸುವಾಗ ಪ್ರಧಾನಿ ಮೋದಿಯವರ ಹೆಸರನ್ನು ಪ್ರಸ್ತಾಪಿಸಿದರು. ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸಬಹುದಾದರೆ, ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರು ಜೆಪಿಸಿ ರಚಿಸಬಹುದಾದರೆ, ನರೇಂದ್ರ ದಾಮೋದರದಾಸ್ ಮೋದಿಗೆ ಏನು ಸಮಸ್ಯೆ ಎಂದು ಅವರು ಪ್ರಶ್ನಿಸಿದ್ದರು .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ