
ನವದೆಹಲಿ: ಅಯೋಧ್ಯೆ ರೀತಿ ಹಿಂದೂ ದೇಗುಲಗಳನ್ನು ಕೆಡವಿ ನಿರ್ಮಿಸುವ ಮಸೀದಿ, ದರ್ಗಾಗಳನ್ನು ವಾಪಸ್ ಹಿಂದೂಗಳ ಕೈಗೊಪ್ಪಿಸಬೇಕೆಂಬ ಕೂಗು ಹೆಚ್ಚುತ್ತಿರುವ ನಡುವೆಯೇ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಪೂಜಾ ಸ್ಥಳದ ಕಾಯ್ದೆ-1991ರ ಕುರಿತು ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ಮಹತ್ವದ ವಿಚಾರಣೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಸಂಜಯ್ ಕುಮಾರ್ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರ ತ್ರಿಸದಸ್ಯ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದೆ.
ಜ್ಞಾನವ್ಯಾಪಿ ಮಸೀದಿಯೊಳಗೆ ಶಿವಲಿಂಗ, ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್ ನೋಟಿಸ್ ಶಾಕ್!
ಸ್ವಾತಂತ್ರ್ಯಾನಂತರ ಧಾರ್ಮಿಕ ಸ್ಥಳಗಳು ಅಥವಾ ಪೂಜಾ ಸ್ಥಳಗಳು ಹೇಗಿವೆಯೋ ಅದೇ ರೀತಿ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಬೇಕು, ಯಾವುದೇ ಕಾರಣಕ್ಕೂ ಅಲ್ಲಿರುವ ಧಾರ್ಮಿಕ ಕುರುಹನ್ನು ಬದಲಾವಣೆ ಮಾಡಲು ಹೋಗಬಾರದು ಎಂದು ಈ ಕಾಯ್ದೆ ಹೇಳುತ್ತದೆ. ಆದರೆ, ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದವನ್ನು ಈ ಕಾಯ್ದೆಯಿಂದ ಹೊರಗಿಡಲಾಗಿತ್ತು.
ಹಿಂದೂ ಹೋರಾಟಕ್ಕೆ ಗೆಲುವು, ಗ್ಯಾನವಾಪಿ ಮಸೀದಿಯಲ್ಲಿ ಪೂಜೆ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ!
ಇದೀಗ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಕೆಲ ಅರ್ಜಿಗಳಲ್ಲಿ 1991ರ ಕಾಯ್ದೆಯ ಮಾನ್ಯತೆಯನ್ನು ಪ್ರಶ್ನೆ ಮಾಡಲಾಗಿದ್ದರೆ, ಕೆಲವು ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಲಾಗಿತ್ತು.
ಜ.2ರಂದು ಎಐಐಎಂ ಮುಖ್ಯಸ್ಥ ಅಕ್ಬರುದ್ದೀನ್ ಓವೈಸಿ ಅವರು 1991ರ ಧಾರ್ಮಿಕ ಪೂಜಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಈಗಾಗಲೇ ಒಪ್ಪಿಕೊಂಡಿದೆ. ಇದಕ್ಕೂ ಮುನ್ನ ಡಿ.12ರಂದು ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠವು ಮಸೀದಿ ಮತ್ತು ದರ್ಗಾಕ್ಕೆ ಸಂಬಂಧಿಸಿ ಇದೇ ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಮತ್ತು ಯಾವುದೇ ಅಧ್ಯಂತರ ಅಥವಾ ಅಂತಿಮ ತೀರ್ಪು ನೀಡದಂತೆ ಎಲ್ಲಾ ಕೋರ್ಟ್‌ಗಳಿಗೆ ಸೂಚಿಸಿತ್ತು.
ಡಿ.12ರ ಆದೇಶದಿಂದಾಗಿ ಗ್ಯಾನವ್ಯಾಪಿ ಸೇರಿ ವಿವಿಧ 12ಕ್ಕೂ ಹೆಚ್ಚು ಮದೀಸಿ, ದರ್ಗಾಗಳ ವಿವಾದಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ತಡೆ ಬಿದ್ದಿದೆ.
ಜ್ಞಾನವಾಪಿ ಪೂಜೆ ವಿರುದ್ದ ಸುಪ್ರೀಂಗೆ ಹೋದರೂ ಮರಳಿ ಪಡೆಯಲು ಸಿದ್ಧ; ವಕೀಲ ಹರಿಶಂಕರ್ ಜೈನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ