
ನವದೆಹಲಿ: ಅಮೆರಿಕದಿಂದ ಎಫ್35ನಂತಹ ದುಬಾರಿ ಯುದ್ಧ ವಿಮಾನಗಳನ್ನು ಭಾರತ ಖರೀದಿಸುವ ಅಗತ್ಯವಿದೆಯೇ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇತ್ತ ಪ್ರಧಾನಿ ಮೋದಿ ಜಾತಿ ಬಗ್ಗೆ ವಾಕ್ಸಮರ! ಅತ್ತ ರಾಹುಲ್ ಧರ್ಮದ ಬಗ್ಗೆ ಕದನ: ರಾಜಕೀಯದಲ್ಲಿ ಕೋಲಾಹಲ
ಪ್ರಧಾನಿ ಮೋದಿಯವರ ಇತ್ತೀಚಿನ ಅಮೆರಿಕ ಭೇಟಿ ಸಂದರ್ಭದಲ್ಲಿ, ಹೊಸ ರಕ್ಷಣಾ ಪಾಲುದಾರಿಕೆ ಭಾಗವಾಗಿ ಎಫ್35 ಯುದ್ಧವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸುರ್ಜೇವಾಲಾ, ‘ಎಫ್35 ವಿಶ್ವದ ಅತ್ಯಂತ ದುಬಾರಿ ಯುದ್ಧವಿಮಾನ. ಒಂದು ವಿಮಾನದ ಬೆಲೆ ಸುಮಾರು 968 ಕೋಟಿ ರು.ಗಳಷ್ಟಿದೆ. ಅದನ್ನು ಒಂದು ಗಂಟೆ 28 ಲಕ್ಷ ರು. ವೆಚ್ಚವಾಗುತ್ತದೆ.
ಅಮೆರಿಕದಿಂದ ಇಂದು ಮತ್ತೆ 119 ಅಕ್ರಮ ಭಾರತೀಯರ ಗಡೀಪಾರು, ಅಮೃತಸರದಲ್ಲಿ ಲ್ಯಾಂಡ್ ಆಗಲಿದೆ ವಿಮಾನ!
ಇಷ್ಟು ದುಬಾರಿ ಬೆಲೆಯ ವಿಮಾನವನ್ನು ತರಿಸುವ ಅಗತ್ಯವಿದೆಯೇ?, ಇಂಥ ಖರೀದಿ ಭಾರತದ ರಕ್ಷಣ ಹಿತಾಸಕ್ತಿಗಳಿಗೆ ಅನುಗುಣವಾಗಿ ಇದೆಯೇ? ಸ್ವತಃ ಅಮೆರಿಕದ ರಕ್ಷಣಾ ಇಲಾಖೆಯೇ ಎಫ್ 35 ವಿಮಾನ ನಮ್ಮ ನಿರ್ವಹಣಾ ಬೇಡಿಕೆಗೆ ಅನುಗುಣವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಜೊತೆಗೆ ಅದರಲ್ಲಿ 65 ತಾಂತ್ರಿಕ ದೋಷಗಳಿಗೆ ಎಂದು ಹೇಳಿದೆ. ಹೀಗಿರುವಾಗ ಭಾರತಕ್ಕೆ ಈ ವಿಮಾನದ ಅವಶ್ಯಕತೆ ಇತ್ತೇ ’ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ