Inherit Properties ವಿಲ್ ಬರೆಯದೇ ಮರಣ ಹೊಂದಿದ ತಂದೆ ಆಸ್ತಿ ಹಕ್ಕು ಮಗಳಿಗೆ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

Published : Jan 21, 2022, 09:31 PM IST
Inherit Properties ವಿಲ್ ಬರೆಯದೇ ಮರಣ ಹೊಂದಿದ ತಂದೆ ಆಸ್ತಿ ಹಕ್ಕು ಮಗಳಿಗೆ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಸಾರಾಂಶ

ಮರಣಶಾಸನ ಕುರಿತು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ 51 ಪುಟಗಳ ಸುದೀರ್ಘ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಹಿಂದೂ ಉತ್ತರಾಧಿಕಾರ ಕಾಯ್ದೆ ಹಾಗೂ ತೀರ್ಪಿನ ವಿವರ ಇಲ್ಲಿವೆ

ನವದೆಹಲಿ(ಜ.21):  ಪೋಷಕರ ಆಸ್ತಿಗಾಗಿ ಮಕ್ಕಳ ಹೋರಾಟ ಸೇರಿದಂತೆ ಆಸ್ತಿ(Properties) ಕಲಹ ದೇಶದ ನ್ಯಾಯಾಲಯದಲ್ಲಿರುವ ಅತೀ ಸುದೀರ್ಘ ಕಾನೂನು ಹೋರಾಟವಾಗಿದೆ. ಇದರ ನಡುವೆ ಮರಣಶಾಸನ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ ಪುರಷ ತಾನು ಸ್ವತಃ ಸಂಪಾದನೆ ಮಾಡಿದ ಆಸ್ತಿಯನ್ನು ಸ್ಪಷ್ಟವಾಗಿ ವಿಲ್(ಉಯಿಲು)ಬರೆಯದೇ (No Will)ಸಾವನ್ನಪ್ಪಿದ್ದರೆ, ಆ ಆಸ್ತಿಯ ಹಕ್ಕು(Daughters To Inherit Father Property) ಮಗಳು ಪಡೆಯಲಿದ್ದಾಳೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮರಣಶಾಸನ ಕುರಿತು ಸುಪ್ರೀಂ ಕೋರ್ಟ್(Supreme Court) ನೀಡಿದ ತೀರ್ಪು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಕೆಲ  ಸ್ಪಷ್ಟ ಸೂಚನೆಗಳು ಈ ತೀರ್ಪಿನಲ್ಲಿದೆ. 1956ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ(Hindu Succession Act, 1956) ಜಾರಿಗೆ ಬಂದಿದೆ. ಇದಕ್ಕೂ ಮೊದಲು ಹಿಂದೂ ಪುರುಷ ತಾನು ಸಂಪಾದಿಸಿದ ಆಸ್ತಿಯನ್ನು ವಿಲ್ ಬರೆಯದೇ ಸಾವನ್ನಪ್ಪಿದರೆ ಆ ಆಸ್ತಿ ಪಡೆಯಲು ಮಗಳು ಮೊದಲ ವಾರಸುದಾರರಾಗಿರುತ್ತಾರೆ . ಹೀಗಾಗಿ  ಉತ್ತರಜೀವಿತಾಧಿಕಾರದ ಕಾರಣಕ್ಕೆ ಆಸ್ತಿ ಪಡೆಯಲು ಅರ್ಹರಲ್ಲ ಎಂದಿದೆ.

PM security lapse ತನಿಖಾ ಸಮಿತಿ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರ ನೇಮಕ!

ಉಯಿಲು ಕುರಿತ ಹಲವು ದಶಕಗಳ ಹಿಂದಿನ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. 1949ರ ಮಾರಪ್ಪ ಗೌಂಡರ್ ಆಸ್ತಿ ಕುರಿತ ವಾದ ವಿವಾದ ಕೊನೆಗೂ ಅಂತ್ಯಗೊಂಡಿದೆ. 1949ರಲ್ಲಿ ಮಾರಪ್ಪ ಗೌಂಡರ್ ಸಾವನ್ನಪ್ಪಿದ್ದರು. ಇವರ ಆಸ್ತಿ ಮಾರಪ್ಪ ಗೌಂಡರ್ ಮಗಳು ಕುಪಾಳ್ ಅಮ್ಮಾಯಿ ಬಂದಿತ್ತು. ಆದರೆ ಕುಪಾಯಿ ಅಮ್ಮಾಯಿಗೆ ಮಕ್ಕಳಿಲ್ಲದೆ ಸಾವನ್ನಪ್ಪಿದ್ದರು. ಹೀಗಾಗಿ ಇವರ ಆಸ್ತಿಯನ್ನು ಮಾರಪ್ಪ ಗೌಂಡರ್ ಸಹೋದರ ರಾಮಸ್ವಾಮಿ ಗೌಂಡರ್ ಅವರ ಐವರು ಮಕ್ಕಳು ಹಂಚಿಕೊಂಡಿದ್ದರು. 

NEET PG, UG Counselling: ಡಾಕ್ಟರ್‌ ಗಳಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!

ರಾಮಸ್ವಾಮಿ ಐವರು ಮಕ್ಕಳು ಆಸ್ತಿ ಹಂಚಿಕೆ ಮಾಡಿಕೊಂಡರೂ, ಪುತ್ರಿಯರಿಗೆ ಆಸ್ತಿ ನೀಡಿಲ್ಲ. ಹೀಗಾಗಿ ರಾಮಸ್ವಾಮಿ ಗೌಂಡರ್ ಪುತ್ರಿ ತಂಗಮ್ಮಾಳ್ ಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ಪ್ರಕರಣ ಹಲವು ಮಜಲುಗಳ ವಿಚಾರಣೆ ಕಂಡಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್ ಮಾರಪ್ಪ ಗೌಂಡರ್ ಉಯಿಲು ಬರೆಯದೇ ನಿಧನರಾಗಿದ್ದಾರೆ. ಮಾರಪ್ಪ ಗೌಂಡರ್ ನಿಧನದ ವೇಳೆ ಹಿಂದೂ ಉತ್ತರಾಧಿಕಾರ ಕಾಯ್ದೆ ಜಾರಿಯಾಗಿರಲಿಲ್ಲ. ಹೀಗಾಗಿ ಅವರ ಆಸ್ತಿ ಸಹಜವಾಗಿ ಮಾರಪ್ಪ ಪುತ್ರಿ ಕುಪಾಯಿ ಅಮ್ಮಳ್ ಹಕ್ಕುದಾರರಾಗಿದ್ದಾರೆ. ಇಲ್ಲಿ ಕುಪಾಯಿ ಅಮ್ಮಳ್ ಸಾವನ್ನಪ್ಪಿದ್ದಾರೆ. ಅವರಿಗೆ ಮಕ್ಕಳಿಲ್ಲದ ಕಾರಣ ರಾಮಸ್ವಾಮಿ ಗೌಂಡರ್ ಮಕ್ಕಳು ಆಸ್ತಿ ಹಂಚಿಕೊಂಡಿದ್ದಾರೆ. ಇಲ್ಲಿ ರಾಮಸ್ವಾಮಿ ಗೌಂಡರ್ ಮಕ್ಕಳಿಗೆ ಆಸ್ತಿ ಹಂಚುವಿಕೆಯಲ್ಲಿ ಪುತ್ರಿಗೆ ಪಾಲು ನೀಡಬೇಕು. ವಿಶೇಷವಾಗಿ ಆಸ್ತಿಯಲ್ಲಿ ಮಗಳು ಮೊದಲ ವಾರಸುದಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಕರ್ನಾಟಕದ ಭೀಮೇಶ್‌ಗೆ ಅನುಕಂಪದ ನೌಕರಿ ರದ್ದು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಹಿಂದೂ ಮಹಿಳೆ ಸಂತಾನವಿಲ್ಲದೆ ಮರಣ ಹೊಂದಿದ್ದರೆ, ತಂದೆ ತಾಯಿಯಿಂದ ಬಂದಿರುವ ಆಸ್ತಿಯೂ ಆಕೆಯ ತಂದೆಯ ವಾರಸುದಾರರಿಗೆ ನೀಡಲಾಗುತ್ತದೆ. ಇನ್ನು ಪತಿ ಮರಣ ಹೊಂದಿದರೆ ಅಥವಾ ಮಾವ ಮರಣಹೊಂದಿದ್ದರೆ, ಈ ಇಬ್ಬರಿಂದ ಪಡೆದ ಆಸ್ತಿಯನ್ನು ಗಂಡನ ವಾರಸುದಾರರಿಗೆ ಹಿಂತಿರುಗಿಸಬೇಕು, ಅಥವಾ ಗಂಡನ ವಾರಸುದಾರರು ಆಸ್ತಿ ಹಕ್ಕು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!