ಪಾಪಿ ಅರ್ಜಿ ತಿರಸ್ಕಾರ: ನೇಣಿಗೆ ಕೊರಳೊಡ್ಡುವುದೊಂದೇ ಮಾರ್ಗ!

By Suvarna News  |  First Published Jan 31, 2020, 4:59 PM IST

ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲೇ ಗತಿ| ಪವನ್ ಗುಪ್ತಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್| ಅಪರಾಧ ನಡೆದಾಗ ಅಪ್ರಾಪ್ತನಾಗಿದ್ದೆ ಎಂದ ಪವನ್ ಗುಪ್ತಾ| ನಾಳೆ(ಫೆ.01) ನಾಲ್ವರೂ ಅಪರಾಧಿಗಳಿಗೆ ತಿಹಾರ್ ಜೈಲಿನಲ್ಲಿ ಗಲ್ಲು| 


ನವದೆಹಲಿ(ಜ.31): ಗಲ್ಲುಶಿಕ್ಷೆ ಪ್ರಶ್ನಿಸಿ ನಿರ್ಭಯಾ ಹತ್ಯಾಚಾರಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಅಪರಾಧ ಮಾಡಿದಾಗ ತಾನು ಅಪ್ರಾಪ್ತನಾಗಿದ್ದು, ಈ ಹಿನ್ನೆಲೆಯಲ್ಲಿ ತನ್ನ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಕೋರಿ ಪವನ್ ಗುಪ್ತಾ ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದ.

2012 Delhi gang rape case: Supreme Court dismisses convict Pawan Gupta's petition claiming that he was a juvenile when the offence took place. https://t.co/nab27Etbyc

— ANI (@ANI)

Latest Videos

undefined

ಆದರೆ ಪವನ್ ಗುಪ್ತಾ ವಾದವನ್ನು ಒಪ್ಪದ ಸರ್ವೋಚ್ಛ ನ್ಯಾಯಾಲಯ, ಆತನ ಅರ್ಜಿಯನ್ನು ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ರಿಹಾರ್ ಜೈಲಿನಲ್ಲಿ ನಾಲ್ವರೂ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಸಿದ್ಧತೆ ಆರಂಭವಾಗಿದೆ.

ಗಲ್ಲು ಮೂವರಿಗೋ, ಎಲ್ಲರಿಗೋ?: ಗಂಟೆಯಲ್ಲಿನ ನಿರ್ಧಾರ!

ನಾಳೆ(ಫೆ.01) ಬೆಳಗ್ಗೆ 6 ಗಂಟೆಗೆ ನಾಲ್ವರೂ ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು ಎಂದು ತಿಹಾರ್ ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

click me!