ಬಾಂಬೆ ಹೈಕೋರ್ಟ್‌ ಹೆಸರನ್ನೇ ಬದಲಿಸಲು ಕೋರಿದ ಅರ್ಜಿ ತಿರಿಸ್ಕರಿಸಿದ ಸುಪ್ರೀಂ ಕೋರ್ಟ್!

By Suvarna NewsFirst Published Nov 3, 2022, 5:17 PM IST
Highlights

ಸುಪ್ರೀಂ ಕೋರ್ಟ್‌ನಲ್ಲಿನ ಒಂದು ಅರ್ಜಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಅರ್ಜಿಯಲ್ಲಿ ಹೈಕೋರ್ಟ್ ಹೆಸರನ್ನೇ ಬದಲಿಸಬೇಕು ಎಂದು ಕೋರಲಾಗಿದೆ. ಆದರೆ ಈ ಅರ್ಜಿಯನ್ನು ಸಾರಾ ಸಗಟಾಗಿ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ನವದೆಹಲಿ(ನ.03): ದೇಶದಲ್ಲಿ ಈಗಾಗಲೇ ಹಲವು ನಗರಗಳು, ಪಟ್ಟಣಗಳ ಹೆಸರುಗಳನ್ನು ಬದಲಿಸಲಾಗಿದೆ. ಇದು ಈಗಾಗಲೇ ಭಾರಿ ವಿವಾದಕ್ಕೂ ಕಾರಣವಾಗಿದೆ. ಇದೀಗ ಹೈಕೋರ್ಟ್ ಹೆಸರನ್ನೇ ಬದಲಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಬಾಂಬೆ ಹೈಕೋರ್ಟ್ ಹೆಸರನ್ನು ಬದಲಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ವಿಪಿ ಪಾಟಿಲ್ ಅರ್ಜಿ ಸಲ್ಲಿಸಿದ್ದರು. ಹೆಸರು ಬದಲಿಸುವುದು ನಮ್ಮ ಕೆಲಸವಲ್ಲ ಇದು ಕಾನೂನು ರಚನಾಕಾರರು ಮಾಡಬೇಕು ಎಂದು ಅರ್ಜಿಯನ್ನು ತಿರಸ್ಕರಿಸಿದೆ.  ಇದರೊಂದಿಗೆ ಬಾಂಬೆ ಹೈಕೋರ್ಟ್ ಮರುನಾಮಕರಣ ಯತ್ನಕ್ಕೆ ಹಿನ್ನಡೆಯಾಗಿದೆ.

ಬಾಂಬೆ ಹೈಕೋರ್ಟ್ ಹೆಸರನ್ನು ಮಹಾರಾಷ್ಟ್ರ ಹೈಕೋರ್ಟ್ ಎಂದು ಮರುನಾಮಕರಣ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.  ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜಸ್ಟೀಸ್ ಅನಿರುದ್ಧ ಬೋಸ್ ಹಾಗೂ ಜಸ್ಟೀಸ್ ವಿಕ್ರಮ್ ನಾಥ್ ಅವರಿದ್ದ ದ್ವಿಸದಸ್ಯ ಪೀಠ, ನೇರವಾಗಿ ಅರ್ಜಿ ತಿರಸ್ಕರಿಸಿತು. 

ಗರ್ಭಿಣಿಯಾಗೋದು, ಆಗದೇ ಇರೋದು ಮಹಿಳೆಯ ಹಕ್ಕು, ಗಂಡ ಒತ್ತಾಯ ಮಾಡುವಂತಿಲ್ಲ!

ಬಾಂಬೆ ಹೈಕೋರ್ಟ್ ಬ್ರಿಟಿಷರು ಆರಂಭಿಸಿದ ಕೋರ್ಟ್. 1862ರ ಆಗಸ್ಟ್ 14 ರಂದು ಬಾಂಬೆ ಹೈಕೋರ್ಟ್ ಅಸ್ತಿತ್ವಕ್ಕೆ ಬಂದಿತ್ತು. ಭಾರತದ ಅತ್ಯಂತ ಹಳೆಯ ಕೋರ್ಟ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬಾಂಬೆ ಬ್ರಿಟಿಷರು ಸುಲಭವಾಗಿ ಉಚ್ಚರಿಸಲು ಇಟ್ಟಿದ್ದ ಹೆಸರಾಗಿತ್ತು. ಹೀಗಾಗಿ ಬಾಂಬೆ ನಗರ 1995ರಲ್ಲಿ ಮುಂಬೈ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ಹೈಕೋರ್ಟ್ ಹೆಸರು ಮಾತ್ರ ಬದಲಿಸಿಲ್ಲ. ಇಂಗ್ಲೆಂಡ್ ರಾಣಿ ವಿಕ್ಟೋರಿಯಾ 1862ರ ಜೂನ್ ತಿಂಗಲ್ಲಿ ಬಾಂಬೆ ಹೈಕೋರ್ಟ್‌ಗೆ ಅನುಮೋದನೆ ನೀಡಿದ್ದರು. ಯನೈಟೆಡ್ ಕಿಂಗ್‌ಡಮ್ 1862ರ ಹೈಕೋರ್ಟ್ ಕಾಯ್ದೆ ಪ್ರಕಾರ ಈ ಕೋರ್ಟ್ ಸ್ಥಾಪಿಸಲಾಗಿತ್ತು.

ಸದ್ಯ ಬಾಂಬೆ ಹೈಕೋರ್ಟ್ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಪುರಾತನ ಹಾಗೂ ಐತಿಹಾಸಿಕ ಕಟ್ಟದಲ್ಲಿ. ಈ ಕಟ್ಟ 1878ರಲ್ಲಿ ನಿರ್ಮಾಣ ಮಾಡಲಾಗಿತ್ತು. ಬ್ರಿಟಿಷ್ ಎಂಜಿನಿಯರ್ ಕೊಲೊನೆಲ್ ಜೇಮ್ಸ್ ಎ ಫುಲ್ಲರ್ ಈ ಕಟ್ಟಡ ಕಟ್ಟಿದ್ದರು.  2016ರಲ್ಲಿ ಬಾಂಬೆ ಹೈಕೋರ್ಟ್‌ನ್ನು ಮುಂಬೈ ಹೈಕೋರ್ಟ್ ಎಂದು ಮರುನಾಮಕರಣ ಮಾಡುವ ಪ್ರಯಯತ್ನಗಳು ನಡೆದಿತ್ತು. ಆದರೆ ಫಲಪ್ರದವಾಗಲಿಲ್ಲ.

ಬಾಂಬೆ ಹೈಕೋರ್ಟ್ ಮಾತ್ರವಲ್ಲ, ಕಲ್ಕತ್ತಾ ಹೈಕೋರ್ಟ್, ಮದ್ರಾಸ್ ಹೈಕೋರ್ಟ್ ಹೆಸರು ಮರುನಾಮಕರಣ ಮಾಡುವ ಯತ್ನವೂ ಸಂಪೂರ್ಣವಾಗಿ ಯಶಸ್ಸು ಸಿಕ್ಕಿಲ್ಲ. ಕಲ್ಕತಾ ಹೈಕೋರ್ಟನ್ನು ಕೋಲ್ಕತಾ ಹೈಕೋರ್ಟ್ ಎಂದು, ಮದ್ರಾಸ್‌ನ್ನು ಚೆನ್ನೈ ಹೈಕೋರ್ಟ್ ಎಂದು ಮರುನಾಮಕರಣ ಮಾಡಲು ಕೋರಲಾಗಿತ್ತು. 
 
2010ರಲ್ಲಿ ಬಾಂಬೈ ಹೈಕೋರ್ಟ್ 150ನೇ ವರ್ಷಾಚರಣೆ ಆಚರಿಸಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಸ್ವಾತಂತ್ರ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರನ್ನು ಇದೇ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿತ್ತು. ಇಷ್ಟೇ ಅಲ್ಲ ಇಲ್ಲ ಸಲ್ಲದ ಆರೋಪ ಹೊರಿಸಿ ಶಿಕ್ಷೆ ವಿಧಿಸಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವು ನಾಯಕರಿಗೆ ಬ್ರಿಟಿಷರ್ ಇದೇ ಕೋರ್ಟ್ ಮೂಲಕ ಗಲ್ಲು ಶಿಕ್ಷೆ ವಿಧಿಸಿದ್ದರು. 

click me!