ಕ್ಯಾನ್ಸರ್‌ ಆತಂಕದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್‌, ಜಾಮೀನು ವಿಸ್ತರಣೆ ನಿರಾಕರಿಸಿದ ಸುಪ್ರೀಂ

By Gowthami KFirst Published May 29, 2024, 5:33 PM IST
Highlights

ಕ್ಯಾನ್ಸರ್‌ ಹಾಗೂ ಮೂತ್ರಪಿಂಡ ವೈಫಲ್ಯದ ಗಂಭೀರ ಆತಂಕ ಎದುರಿಸುತ್ತಿರುವುದಾಗಿ ದೆಹಲಿ ಸಿಎಂ  ಕೇಜ್ರಿವಾಲ್‌ ಸುಪ್ರೀಂಕೋರ್ಟ್‌ಗೆ ತಿಳಿಸಿ ಜಾಮೀನನ್ನು 1 ವಾರ ವಿಸ್ತರಿಸಿ ಎಂದು ಮನವಿ ಮಾಡಿದ್ದರು. ಆದರೆ ಸುಪ್ರೀಂ ಇದನ್ನು ನಿರಾಕರಿಸಿದೆ.

ನವದೆಹಲಿ (ಮೇ.29): ದೆಹಲಿ ಅಬಕಾರಿ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಅವಧಿಯನ್ನು 7 ದಿನಗಳ ವಿಸ್ತರಣೆಗೆ ಕೋರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಸುಪ್ರೀಂ ಕೋರ್ಟ್   ಬುಧವಾರ (ಮೇ 29) ನಿರಾಕರಿಸಿದೆ.

ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ತಾವು ಕ್ಯಾನ್ಸರ್‌ ಮತ್ತು ಮೂತ್ರಪಿಂಡದ ಹಾನಿಯ ಗಂಭೀರ ಆತಂಕ ಎದುರಿಸುತ್ತಿರುವುದಾಗಿ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ತಮಗೆ ನೀಡಿರುವ ಜಾಮೀನು ವಿಸ್ತರಣೆ ಕೋರಿ ಕೇಜ್ರಿ ಸಲ್ಲಿಸಿರುವ ಅರ್ಜಿಯಲ್ಲಿ, ನನ್ನ ದೇಹದ ತೂಕದಲ್ಲಿ ದಿಢೀರ್‌ ಇಳಿಕೆಯಾಗಿದೆ. ರಕ್ತದಲ್ಲಿನ ಹೆಚ್ಚಿನ ಕಿಟೋನ್‌ ಪತ್ತೆಯಾಗಿದೆ. ಇದು ಮೂತ್ರಪಿಂಡದ ಹಾನಿ ಮತ್ತು ಕ್ಯಾನ್ಸರ್‌ ಸಂಭವನೀಯತೆ ತೋರಿಸುತ್ತದೆ. ಹೀಗಾಗಿ ಈ ಕುರಿತು ಉನ್ನತ ಪರೀಕ್ಷೆಗೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಜಾಮೀನು ವಿಸ್ತರಣೆ ಮಾಡಬೇಕು ಎಂದು ಕೋರಿದ್ದರು. ಆದರೆ ಈ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಕೋರ್ಟ್‌ನ ಜೆ.ಕೆ. ಮಹೇಶ್ವರಿ ಮತ್ತು ಕೆ.ಎಸ್. ವಿಶ್ವನಾಥನ್ ಅವರಿದ್ದ ಬುಧವಾರ ನಿರಾಕರಿಸಿದೆ. ಜೊತೆಗೆ ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಪರಿಶೀಲಿಸಲಿದ್ದಾರೆ ಎಂದು ಹೇಳಿದೆ.

Latest Videos

 30 ನಿಮಿಷದಲ್ಲಿ ಸ್ಫೋಟಿಸುವ ಬಾಂಬ್‌ ಬೆದರಿಕೆ: ವಿಮಾನದಿಂದ ಜಾರಿ ಹೊರಬಂದ ಪ್ರಯಾಣಿಕರು, ರಕ್ಕೆ ಮೇಲೆ ಬಂದ ವೃದ್ಧೆ

ದಿಢೀರ್ ದೇಹದ ತೂಕ ನಷ್ಟವಾಗುತ್ತಿದೆ. ಹೆಚ್ಚಿನ ಕಿಟೋನ್ ಮಟ್ಟದ ಸಮಸ್ಯೆಯಿಂದ ಬಳಲುತ್ತಿದ್ದು ಪಿಇಟಿ-ಸಿಟಿ ಸ್ಕ್ಯಾನ್ ಒಳಗಾಗಲು ಜಾಮೀನು ಅವಧಿಯನ್ನು ವಾರದ ತನಕ ಮುಂದೂಡಿ ಎಂದು ನ್ಯಾಯಾಲಯಕ್ಕೆ ದೆಹಲಿ ಸಿಎಂ ಮನವಿ ಮಾಡಿಕೊಂಡಿದ್ದರು. ಈ ಕುರಿತು ಮೇ.26ರಂದು ಈ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಜೂ.9ಕ್ಕೆ ಶರಣಾಗುವುದಾಗಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.

ಉತ್ತರ ಭಾರತದಲ್ಲಿ 50 ಡಿಗ್ರಿ ದಾಟಿದ ಉಷ್ಣಾಂಶ, ಸನ್‌ ಸ್ಟ್ರೋಕ್‌ನಿಂದ 4 ಸಾವಿರ ಜನ ಆಸ್ಪತ್ರೆಗೆ!

ಆಪ್ ನಾಯಕರ ಖರೀದಿಗೆ ಬಿಜೆಪಿ ಯತ್ನ ಎಂದ ಸಚಿವೆ ಅತಿಷಿಗೆ ಕೋರ್ಟ್‌ ಸಮನ್ಸ್‌
ದೆಹಲಿ ಬಿಜೆಪಿ ನಾಯಕ ಪ್ರವೀಣ್ ಶಂಕರ್ ಕಪೂರ್ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ರೋಸ್ ಅವೆನ್ಯೂ ನ್ಯಾಯಾಲಯವು ಮಂಗಳವಾರ ದೆಹಲಿ ಸಚಿವೆ ಅತಿಶಿ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಬಿಜೆಪಿ ನಾಯಕರು ಎಎಪಿ ನಾಯಕರನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಸೂಕ್ತ ಪುರಾವೆಗಳು ನೀಡದ ಕಾರಣ ಅತಿಶಿಗೆ ಸಮನ್ಸ್‌ ಜಾರಿ ಮಾಡಿದ ನ್ಯಾಯಾಲಯ ಮೇ 29ರಂದು ಹಾಜರಾಗುವಂತೆ ಸೂಚಿಸಿದೆ.  
 

click me!