ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಚೀನಾ ಪದೇ ಪದೇ ಕಿರಿಕ್ ಮಾಡುತ್ತಲೇ ಇದೆ.ಪ್ರತಿ ಭಾರಿ ಭಾರತ ತಿರುಗೇಟು ನೀಡಿದೆ. ಇದೀಗ ಅರುಣಾಚಲ ಪ್ರದೇಶದಲ್ಲಿ ಚೀನಾ ಮತ್ತೆ ಖ್ಯಾತೆ ತೆಗಿದಿದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ 30 ಗ್ರಾಮಗಳನ್ನು ಚೀನಾ ತನ್ನದೆಂದು ಪಟ್ಟಿ ಬಿಡುಗಡೆ ಮಾಡಿದೆ.
ನವದೆಹಲಿ(ಏ.01) ನೆರೆ ರಾಷ್ಟ್ರದ ಜೊತೆ ಶಾಂತಿ ಬಯಸುವ ಭಾರತವನ್ನು ಮತ್ತೆ ಚೀನಾ ಕಣಕಿದೆ. ಈಗಾಗಲೇ ಲಡಾಖ್ ಸಂಘರ್ಷ ಕಹಿ ಮಾಸಿಲ್ಲ. ಇದೀಗ ಅರುಣಾಚಲದಲ್ಲಿ ಚೀನಾ ಮತ್ತೆ ಕಾಲುಕೆರೆದು ಜಗಳಕ್ಕೆ ನಿಂತಿದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದದ 30 ಗ್ರಾಮಗಳನ್ನು ಚೀನಾ ತನ್ನದೆಂದು ಪಟ್ಟಿ ಬಿಡುಗಡೆ ಮಾಡಿದೆ. ಈ ಗ್ರಾಮಗಳ ಹೆಸರು ಬದಲಾಯಿಸಿ ಪಟ್ಟಿಯಲ್ಲಿ ಸೇರಿಸಿದೆ. ಚೀನಾದ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಭಾರತ ತಕ್ಕ ತಿರುಗೇಟು ನೀಡಿದೆ.
ಚೀನಾ ಸರ್ಕಾರದ ನಾಗರಿಕರ ಸಚಿವಾಲಯದ ಹಿಡಿತದಲ್ಲಿರುವ ಗ್ಲೋಬಲ್ ಟೈಮ್ಸ್ ಮೂಲಕ ಚೀನಾ ಅರುಣಾಚಲ ಪ್ರದೇಶದ 30 ಗ್ರಾಮಗಳನ್ನು ತನ್ನದೆಂದು ಹೇಳಿಕೊಂಡಿದೆ. ಅರುಣಾಚಲ ಪ್ರದೇಶವನ್ನು ಜೀನಾ ಝಂಗ್ನಮ್ ಎಂದು ಕರೆಯುತ್ತಿದೆ. ಝಂಗ್ನಮ್‌ನ 30 ಹಳ್ಳಿಗಳನ್ನು ಚೀನಾದ ಗ್ರಾಮಗಳು ಎಂದು ಪಟ್ಟಿ ಮಾಡಿದೆ. ಈ ಭಾಗ ಚೀನಾ ಹಿಡಿತದಲ್ಲಿರುವ ದಕ್ಷಿಣ ಟಿಬೆಟ್ ಭಾಗ ಎಂದು ಹೇಳಿಕೊಂಡಿದೆ.
ಇದೊಂದೇ ತಿಂಗಳಲ್ಲಿ 4ನೇ ಬಾರಿ ಅರುಣಾಚಲ ನಮ್ಮದು ಎಂದ ಚೀನಾ!
ಇದು ಚೀನಾ ಬಿಡುಗಡೆ ಮಾಡಿರುವ ನಾಲ್ಕನೇ ಪಟ್ಟಿಯಾಗಿದೆ. ಕಳೆದ ಮೂರು ಪಟ್ಟಿಗಳಲ್ಲಿ ಭಾರತದ ಗ್ರಾಮಗಳನ್ನು ತನ್ನದೆಂದು ಹೆಸರಿಸಿ ಬಿಡುಗಡೆ ಮಾಡಿದೆ. 2017ರಲ್ಲಿ ಚೀನಾ ಇದೇ ರೀತಿ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಭಾರತದ 6 ಹಳ್ಳಿಗಳನ್ನು ತನ್ನದೆಂದು ಪಟ್ಟಿ ಮಾಡಿತ್ತು. 2021ರಲ್ಲಿ 2ನೇ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ 15 ಪ್ರದೇಶಗಳನ್ನು ಚೀನಾ ತನ್ನದು ಎಂದು ಹೇಳಿಕೊಂಡಿತ್ತು. 2023ರಲ್ಲಿ ಅರುಣಾಚಲ ಪ್ರದೇಶದ 11 ವಲಯಗಳನ್ನು ತನ್ನದೆಂದು ಹೆಸರಿಸಿ ಪಟ್ಟಿ ಬಿಡುಡೆ ಮಾಡಿದೆ. ಇದೀಗ ನಾಲ್ಕನೇ ಪಟ್ಟಿಯಲ್ಲಿ ಈ ಸಂಖ್ಯೆ 30ಕ್ಕೇರಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಭೇಟಿ ಚೀನಾ ಕೆರಳಿಸಿತ್ತು. ಇದು ಚೀನಾದ ಭಾಗ ಎಂದು ಖ್ಯಾತೆ ತೆಗೆದಿತ್ತು. ಇಷ್ಟೇ ಅಲ್ಲ ಪ್ರಧಾನಿ ಮೋದಿ ವಿವಾದಲ್ಲಿರುವ ಪ್ರದೇಶಕ್ಕೆ ಭೇಟಿ ನೀಡಿ ತನ್ನದು ಎಂದು ಹೇಳಿಕೊಳ್ಳುತ್ತಿದೆ ಎಂದು ಚೀನಾ ಅಕ್ಷೇಪಿಸಿತ್ತು. ಆದರೆ ಭಾರತ ಖಡಕ್ ಉತ್ತರ ನೀಡಿತ್ತು. ಸಂಪೂರ್ಣ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದಿತ್ತು. ವರ್ಷದಿಂದ ವರ್ಷಕ್ಕೆ ಚೀನಾದ ಹಳ್ಳಿಗಳು, ಭೂಪ್ರದೇಶ ಹೆಚ್ಚಾಗುತ್ತಿರುವುದೇಕೆ? ಎಂದು ಭಾರತ ತಿರುಗೇಟು ನೀಡಿತ್ತು. ಪ್ರದಾನಿ ಮೋದಿ ಭೇಟಿಯಿಂದ ಕೆರಳಿದ ಚೀನಾ ಇದೀಗ 30 ಹಳ್ಳಿಗಳನ್ನು ಉದ್ದೇಶಪೂರ್ವಕವಾಗಿ ಹೆಸರಿಸಿದೆ.
ಪ್ರಧಾನಿ ಮೋದಿ ಭೂತಾನ್ ಭೇಟಿ: ಸೂಕ್ಷ್ಮ, ಭದ್ರತೆ ಆಧಾರಿತ ಮಹತ್ವದ ಮಾತುಕತೆ