ಕೋರ್ಟ್ ಚಲೋ ನಡೆಸಿದ ರಾಗಾ ಮೇಲೆ ಗರಂ, ಪರೋಕ್ಷ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌

Published : Oct 16, 2026, 08:27 AM IST
Rahul gandhi

ಸಾರಾಂಶ

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ 'ಸುಪ್ರೀಂ ಕೋರ್ಟ್ ಚಲೋ' ನಡೆಸಿದ ರಾಹುಲ್ ಗಾಂಧಿ ಸೇರಿ ಇತರ ನಾಯಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿ ಅವರಿಗೂ ನೋಟಿಸ್ ನೀಡಿದೆ.

ಪಿಟಿಐ ನವದೆಹಲಿ(ಅ.16): ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಇತರೆ 12 ಪ್ರತಿಪಕ್ಷ ನಾಯಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಗುರುವಾರ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅ‍ವರಿಗೆ ನೋಟಿಸ್‌ ಜಾರಿ ಮಾಡಿದೆ.

ಇದೇ ವೇಳೆ, ಅ.12ರಂದು ಸುಪ್ರೀಂ ಕೋರ್ಟ್ ಚಲೋ ನಡೆಸಿದ ರಾಹುಲ್‌ ಹಾಗೂ ಪ್ರತಿಪಕ್ಷಗಳ ನಾಯಕರ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಅದು, ಇವರಿಂದಲೂ ಸ್ಪಷ್ಟನೆ ಬಯಸಿ ನೋಟಿಸ್‌ ಜಾರಿ ಮಾಡಿದೆ. ’ನ್ಯಾಯಾಂಗವನ್ನು ಯಾರೂ ಹೆದರಿಸಲು ಸಾಧ್ಯವಿಲ್ಲ. ಮುಂದಿನ ವಿಚಾರಣೆ ವೇಳೆ ಒಬ್ಬರ ನಡೆ ಕುರಿತು ಪ್ರಶ್ನಿಸುತ್ತೇವೆ’ ಎಂದು ಪರೋಕ್ಷವಾಗಿ ರಾಹುಲ್‌ಗೆ ತಿವಿದಿದೆ.

ಎಸ್ಐಆರ್ ಪ್ರಕ್ರಿಯೆ ಪ್ರಶ್ನಿಸಿದ್ದ ಅರ್ಜಿಗಳು ಹಾಗೂ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಎಸ್ಐಆರ್‌ ವಿರೋಧಿಸಿ ಇತ್ತೀಚೆಗೆ ನಡೆದ ಸುಪ್ರೀಂ ಕೋರ್ಟ್‌ ಚಲೋ ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆ ಆಗಿದ್ದವು. ಒಟ್ಟಿಗೇ ಇವುಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಹಾಗೂ ನ್ಯಾ. ಜಯಮಾಲ್ಯ ಬಾಗ್ಜಿ ಅವರಿದ್ದ ಪೀಠವು ಮೊದಲು ಸಿಇಸಿ ಜ್ಞಾನೇಶ್‌ ಕುಮಾರ್‌ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿತು.

ಈ ವೇಳೆ ಕೆಲ ವಕೀಲರು ಸುಪ್ರೀಂ ಕೋರ್ಟ್‌ಗೆ ರಾಹುಲ್‌ ಗಾಂಧಿ ಅವರ ಸುಪ್ರೀಂ ಕೋರ್ಟ್‌ ಚಲೋ ಕುರಿತು ಪ್ರಸ್ತಾಪಿಸಿದಾಗ ಪ್ರತಿಪಕ್ಷ ನಾಯಕನೊಬ್ಬನ ನಡೆಗೆ ಸಿಜೆಐ ಸೂರ್ಯಕಾಂತ್‌ ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು. ‘ಯಾರೂ ನ್ಯಾಯಾಂಗವನ್ನು ಬೆದರಿಸಲು ಸಾಧ್ಯವಿಲ್ಲ. ನಾವೇನು ದಂತಗೋಪುರದ ಮೇಲೆ ಕೂತಿಲ್ಲ. ಮುಂದಿನ ವಿಚಾರಣೆ ವೇಳೆ ಪ್ರತಿಪಕ್ಷಗಳ 13 ಮಂದಿ ಅರ್ಜಿದಾರರಲ್ಲಿ ಒಬ್ಬರ ನಡೆಯನ್ನು ಪ್ರಶ್ನೆ ಮಾಡಲಿದ್ದೇವೆ’ ಎಂದು ಹೇಳಿದರು.

ಇದೇ ವೇಳೆ, ‘ಹೊರಗೆ ಅ‍ವರು ನೀಡುತ್ತಿರುವ ಹೇಳಿಕೆಗಳು ಹಾಗೂ ಕೋರ್ಟ್‌ ಒಳಗೆ ನೀಡುತ್ತಿರುವ ಹೇಳಿಕೆಗಳ ಕುರಿತು ನಮಗೆ ಅರಿವಿದೆ. ನಮಗೆ ಎಲ್ಲವೂ ಗೊತ್ತಿದೆ’ ಎಂದರು. ಬಳಿಕ ರ್‍ಯಾಲಿ ಸಂಬಂಧ ರಾಹುಲ್‌ ಗಾಂಧಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಸೇರಿ ಇತರರಿಗೆ ನೋಟಿಸ್‌ ಅನ್ನೂ ಜಾರಿ ಮಾಡಿದರು.

ಹಿರಿಯ ಪೊಲೀಸ್‌ ಅಧಿಕಾರಿಯಿಂದ ಮಹಿಳಾ ಪತ್ರಕರ್ತೆ ಮೇಲೆ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿ ಆಕೆ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿತು. ಈ ಸಂದರ್ಭದಲ್ಲಿ ಬಿಜೆಪಿ ಪರ ವಕೀಲ ಭಾಟಿಯಾ ಅ‍ವರು ಗರ್ಭಿಣಿ ಪತ್ರಕರ್ತೆಯೊಬ್ಬರನ್ನು ಸುಪ್ರೀಂ ಕೋರ್ಟ್‌ ಆವರಣದಲ್ಲಿ ರಾಹುಲ್‌ ಗಾಂಧಿ ತಳ್ಳಿದ ಪ್ರಕರಣದ ವಿಚಾರ ಗಮನಕ್ಕೆ ತಂದಿದ್ದು, ಇದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ನಿರ್ದೇಶನ ನೀಡಿತು.

ಇದೇ ವೇಳೆ ಪೀಠವು, ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯನ್ನು ಮುಂದಿಟ್ಟುಕೊಂಡು ಎಸ್‌ಐಆರ್‌ ಅನ್ನು ರದ್ದುಪಡಿಸುವಂತೆ ಕೋರಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಜ್ಞಾನೇಶ್‌, ಚುನಾವಣಾ ಆಯೋಗ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಶದ ಭದ್ರತೆಗೆ ಅಪಾಯವಾದ್ರಾ ನೇಹಾ ಬೋರಾ? SIR ಹೋರಾಟಕ್ಕೆ ಬಾಂಗ್ಲಾದೇಶವೇ ಸ್ಫೂರ್ತಿ ಅಂತೆ!
ಕೋರ್ಟ್ ಚಲೋ ನಡೆಸಿದ ರಾಗಾ ಮೇಲೆ ಪರೋಕ್ಷ ಗರಂ, ಪರೋಕ್ಷ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌