ದೇಶದ ಭದ್ರತೆಗೆ ಅಪಾಯವಾದ್ರಾ ನೇಹಾ ಬೋರಾ? SIR ಹೋರಾಟಕ್ಕೆ ಬಾಂಗ್ಲಾದೇಶವೇ ಸ್ಫೂರ್ತಿ ಅಂತೆ!

Published : Oct 16, 2026, 07:36 AM IST
Neha Bora Row Bangladesh Protests Inspire SIR Movement

ಸಾರಾಂಶ

ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಅವರು ಬಾಂಗ್ಲಾದೇಶದ ಹೋರಾಟವೇ ನಮಗೆ ಸ್ಫೂರ್ತಿ ಎಂದಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಶಾಂತ್ ಭೂಷಣ್ ಇದನ್ನು ಬೆಂಬಲಿಸಿದ್ದರೆ, ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಇದು ಭಾರತವನ್ನು ಬಾಂಗ್ಲಾದೇಶ ಮಾಡುವ ಯತ್ನ ಎಂದು ಕಿಡಿಕಾರಿದ್ದಾರೆ.

ನವದೆಹಲಿ (ಅ.16): ಎಸ್ಐಆರ್‌ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಅಖಿಲ ಭಾರತ ವಿದ್ಯಾರ್ಥಿ ಸಂಸ್ಥೆ (ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆ ಮತ್ತು ಹೋರಾಟಗಾರ್ತಿ ನೇಹಾ ಬೋರಾ ಅವರು, ‘ಬಾಂಗ್ಲಾದೇಶದ ಹೋರಾಟವೇ ನಮಗೆ ಸ್ಫೂರ್ತಿ’ ಎಂದಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಇದೇ ವೇಳೆ, ನೇಹಾ ಹೇಳಿಕೆಯನ್ನು ಜಿರಳೆ ಪಕ್ಷದ ಬೆಂಬಲಿಗ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಮರ್ಥಿಸಿ, ‘ದೇಶದಲ್ಲಿ ಸರ್ಕಾರ ಬದಲಾವಣೆ (ರೆಜೀಮ್ ಚೇಂಜ್‌) ಆಗಬೇಕು. ಇದು ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕು’ ಎಂದು ಹೇಳಿದ್ದಾರೆ.

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಕಿಡಿ

ಸರ್ಕಾರ ಬದಲಾವಣೆಗೆ ಸಿಜೆಪಿಗರು ನೀಡಿದ ಕರೆಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಕಿಡಿಕಾರಿದ್ದು, ‘ಸಿಜೆಪಿಗರು ಕ್ಷಿಪ್ರಕ್ರಾಂತಿ ನಡೆಸಿ ಭಾರತವನ್ನು ಬಾಂಗ್ಲಾದೇಶ ಮಾಡಲು ಯತ್ನಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ’ ಎಂದಿದ್ದಾರೆ.

ನೇಹಾ ಹೇಳಿದ್ದೇನು?

‘ಭಾರತದಲ್ಲಿ ಬೆಳೆಯುತ್ತಿರುವ ಜೆನ್‌ ಝೀ (ಯುವಕರ) ಪ್ರತಿಭಟನೆಗಳಿಗೆ ಬಾಂಗ್ಲಾದೇಶದ ಯುವಜನರ ಹೋರಾಟವೇ ಸ್ಪೂರ್ತಿ, ಬಾಂಗ್ಲಾದೇಶದ ಅನುಭವವು ಭಾರತದ ಯುವಕರಿಗೆ ದಾರಿ ತೋರಿಸುತ್ತದೆ’ ಎಂದು ನೇಹಾ ಅವರು ಬಾಂಗ್ಲಾದ ಅತಿದೊಡ್ಡ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಸಮಾಜವಾದಿ ವಿದ್ಯಾರ್ಥಿ ರಂಗದ (ಎಸ್ಎಸ್‌ಎಸ್‌) ಸಮ್ಮೇಳನವನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು ಎನ್ನಲಾಗಿದೆ. ಬಿಜೆಪಿ ಈ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ‘ದೇಶದಲ್ಲಿ ಅರಾಜಕತೆ ಸೃಷ್ಟಿಗೆ ನಡೆದ ಹುನ್ನಾರ ಇದು’ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live Today; ಜಿರಳೆ ಹೋರಾಟದಲ್ಲಿ ಭಾಗಿ ಆಗಿದ್ದ ನಟ ಅಮೀರ್ ಖಾನ್ ಅಳಿಯನಿಗೆ ದೇಶ ತೊರೆಯಲು ಸೂಚನೆ
Reservation ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪು