ಇಂಜೆಕ್ಷನ್ ಭಯಕ್ಕೆ ಜೀವವೇ ಹೋಯ್ತು: 9 ವರ್ಷದ ಪುಟಾಣಿ ಸಾವು

Published : Mar 25, 2026, 12:35 PM IST
Girl died after she Skips Rabies Shot after dog bite

ಸಾರಾಂಶ

ಇಂಜೆಕ್ಷನ್ ಎಂದರೆ ಭಯಪಡುವ ಅನೇಕರಿದ್ದಾರೆ. ಅನಾರೋಗ್ಯಕ್ಕೀಡಾದಾಗ ವೈದ್ಯರು ಇಂಜೆಕ್ಷನ್ ನೀಡುವುದಕ್ಕೆ ಮುಂದಾದರೆ ಇಂಜೆಕ್ಷನ್ ಬೇಡ ಡಾಕ್ಟ್ರೆ ಮಾತ್ರೆ ಕೊಡಿ ಎಂದು ಮಾತ್ರೆ ಕೇಳಿ ಪಡೆಯುವ ಅನೇಕರಿದ್ದಾರೆ. ಆದರೆ ಹೀಗೆ ಇಂಜೆಕ್ಷನ್ ಪಡೆಯದೇ ನಿರ್ಲಕ್ಷ್ಯ ವಹಿಸಿದ ಬಾಲಕಿಯೊಬ್ಬಳ ಪ್ರಾಣವೇ ಹೋಗಿದೆ.

ಇಂಜೆಕ್ಷನ್‌ಗೆ ನಿರಾಕರಿಸಿದ್ದೇ ಜೀವಕ್ಕೆ ಎರವಾಯ್ತು:

ಮುಂಬೈ: ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಂಜೆಕ್ಷನ್ ಎಂದರೆ ಭಯಪಡುವ ಅನೇಕರಿದ್ದಾರೆ. ಈ ಭಯದಿಂದಲೇ ಕೆಲವೊಮ್ಮೆ ಅನಾರೋಗ್ಯಕ್ಕೀಡಾದಾಗ ವೈದ್ಯರು ಇಂಜೆಕ್ಷನ್ ನೀಡುವುದಕ್ಕೆ ಮುಂದಾದರೆ ಇಂಜೆಕ್ಷನ್ ಬೇಡ ಡಾಕ್ಟ್ರೆ ಮಾತ್ರೆ ಕೊಡಿ ಎಂದು ಇಂಜೆಕ್ಷನ್ ಬದಲು ಮಾತ್ರೆ ಕೇಳಿ ಪಡೆಯುವ ಅನೇಕರಿದ್ದಾರೆ. ಆದರೆ ಕೆಲವು ರೋಗಗಳಿಗೆ ಅಥವಾ ಮುಂದಾಗುವ ಅನಾಹುತವನ್ನು ತಡೆಯಲು ಚುಚ್ಚುಮದ್ದು ಪಡೆಯಲೇಬೇಕು. ಆದರೆ ಇಲ್ಲೊಂದು ಕಡೆ ಪುಟ್ಟ ಬಾಲಕಿಯೊಬ್ಬಳು ನಾಯಿ ಕಚ್ಚಿದ ನಂತರ ಇಂಜೆಕ್ಷನ್‌ಗೆ ಹೆದರಿ ಚಿಕಿತ್ಸೆ ಪಡೆಯದೇ ಇದ್ದ ಪರಿಣಾಮ ಘಟನೆ ನಡೆದು ಆರು ತಿಂಗಳ ನಂತರ ಅನಾರೋಗ್ಯಕ್ಕೀಡಾಗಿ ಪ್ರಾಣ ಬಿಟ್ಟಿದ್ದಾಳೆ.

ನಾಯಿ ಕಚ್ಚಿದ ಆರು ತಿಂಗಳ ನಂತರ ಸಾವು

ಇತ್ತೀಚೆಗೆ ನಾಯಿ ಕಚ್ಚುವಿಕೆ ಅಥವಾ ಬೆಕ್ಕು ಮುಂತಾದ ಪ್ರಾಣಿಗಳ ಪರಚುವಿಕೆಯ ನಂತರ ಸರಿಯಾದ ಚಿಕಿತ್ಸೆ ಪಡೆಯದೇ ನಿರ್ಲಕ್ಷಿಸಿ ಹಲವು ತಿಂಗಳುಗಳ ನಂತರ ರೋಗ ಉಲ್ಬಣಗೊಂಡು ಮನುಷ್ಯರು ಸಾವನ್ನಪ್ಪಿದಂತಹ ಹಲವು ಘಟನೆಗಳು ನಡೆದಿವೆ. ಹಾಗೆಯೇ ಈಗ ಬಾಲಕಿಯೊಬ್ಬಳು ನಾಯಿ ಕಚ್ಚಿದ ನಂತರ ಇಂಜೆಕ್ಷನ್‌ಗೆ ಹೆದರಿ ಚಿಕಿತ್ಸೆ ನಿರ್ಲಕ್ಷಿಸಿದ ಪರಿಣಾಮ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. 4ನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕಿ ಕಶಿಶ್ ಸಹನಿ ಬೀದಿ ನಾಯಿ ಕಚ್ಚಿದ ಆರು ತಿಂಗಳ ನಂತರ ಸಾವನ್ನಪ್ಪಿದ್ದಾಳೆ. ಆಕೆ ತನ್ನ ಅಜ್ಜನ ಜೊತೆ ವಾಕ್ ಹೋಗುವ ವೇಳೆ ಬೀದಿನಾಯೊಂದು ದಾಳಿ ಮಾಡಿತ್ತು.

ಇಂಜೆಕ್ಷನ್ ನಿರಾಕರಿಸಿದ್ದ ಬಾಲಕಿ

ನಾಯಿ ದಾಳಿ ಮಾಡಿದ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ರೇಬಿಸ್ ಚುಚ್ಚುಮದ್ದು ನೀಡುವುದಕ್ಕೂ ವೈದ್ಯರು ಸಿದ್ಧತೆ ನಡೆಸಿದ್ದರು. ಆದರೆ ಇಂಜೆಕ್ಷನ್ ಬಗ್ಗೆ ಭಯವಿದ್ದ ಆಕೆ ಚುಚ್ಚುಮದ್ದು ಪಡೆದಿರಲಿಲ್ಲ. ಸ್ವಲ್ಪ ದಿನಗಳಲ್ಲೇ ಆಕೆ ಹುಷಾರಾಗಿದ್ದರಿಂದ ಪೋಷಕರು ಆಕೆಗೆ ಇಂಜೆಕ್ಷನ್ ಪಡೆಯುವಂತೆ ಒತ್ತಾಯ ಮಾಡಿರಲಿಲ್ಲ.

ಇದನ್ನೂ ಓದಿ: ಮಡಿಕೇರಿ ಸಮೀಪ ಕಾಫಿತೋಟದಲ್ಲಿ ಹುಲಿ ಓಡಾಟ: ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಆದರೆ ಇತ್ತೀಚೆಗೆ ಆಕೆಯ ಆರೋಗ್ಯ ಒಮ್ಮಿಂದೊಮ್ಮೆಗೆ ಬಿಗಾಡಾಯಿಸಿದ್ದು, ಆಕೆ ಊಟ ಮಾಡುವುದನ್ನು ನೀರು ಕುಡಿಯುವುದನ್ನು ನಿಲ್ಲಿಸಿದ್ದಳು, ಆಕೆಯ ಕಣ್ಣುಗಳು ಕೆಂಪಗಾಗಿದ್ದವು. ಆಕೆಯ ಸ್ಥಿತಿ ಗಂಭೀರವಾಗಿರುವ ವಿಚಾರ ತಿಳಿದ ಪೋಷಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಅಲ್ಲಿಂದ ಮುಂದುವರಿದ ಚಿಕಿತ್ಸೆಗಾಗಿ ಆಕೆಯನ್ನು ಮುಂಬೈನ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸೋಮವಾರ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: ಇಡಿ ದಾಳಿಗೆ ಅಡ್ಡಿಯಾದ ಮಮತಾ ಬ್ಯಾನರ್ಜಿಗೆ ಸುಪ್ರೀಂಕೋರ್ಟ್ ತರಾಟೆ

ಆಕೆಯ ಮರಣದ ನಂತರ, ಪುರಸಭೆಯು ಅಧಿಕಾರಿಗಳು ಆಕೆಯ ಕುಟುಂಬ ಸದಸ್ಯರು ಮತ್ತು ಆಕೆಯ ಸಂಪರ್ಕಕ್ಕೆ ಬಂದ ನೆರೆಹೊರೆಯವರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ನಾಯಿಗಳು ಅಥವಾ ಬೆಕ್ಕುಗಳಿಂದ ಕಡಿತ ಅಥವಾ ಸಣ್ಣ ಗೀರುಗಳನ್ನು ಸಹ ಜನರು ನಿರ್ಲಕ್ಷಿಸಬಾರದು ಮತ್ತು ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಜನರಿಗೆ ಒತ್ತಾಯಿಸಿದ್ದಾರೆ.

ಆಕೆಯ ಮರಣದ ನಂತರ, ಪುರಸಭೆಯು ಅಧಿಕಾರಿಗಳು ಆಕೆಯ ಕುಟುಂಬ ಸದಸ್ಯರು ಮತ್ತು ಆಕೆಯ ಸಂಪರ್ಕಕ್ಕೆ ಬಂದ ನೆರೆಹೊರೆಯವರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ನಾಯಿಗಳು ಅಥವಾ ಬೆಕ್ಕುಗಳಿಂದ ಕಡಿತ ಅಥವಾ ಸಣ್ಣ ಗೀರುಗಳನ್ನು ಸಹ ಜನರು ನಿರ್ಲಕ್ಷಿಸಬಾರದು ಮತ್ತು ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಜನರಿಗೆ ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ನಿಯಮ, ಎಲ್‌ಪಿಜಿ ನೀಡಲು ಹೊಸ ಮಾರ್ಗಸೂಚಿ ಜಾರಿಗೊಳಿಸಿದ ಕೇಂದ್ರ!
ಇಡಿ ದಾಳಿಗೆ ಅಡ್ಡಿಯಾದ ಮಮತಾ ಬ್ಯಾನರ್ಜಿಗೆ ಸುಪ್ರೀಂಕೋರ್ಟ್ ತರಾಟೆ