ಜೂನ್ 15ರೊಳಗೆ ಪ್ರಧಾನ ಕಚೇರಿ ತೊರೆಯಲು ಆಮ್ ಆದ್ಮಿಗೆ ಸುಪ್ರೀಂ ಕೋರ್ಟ್ ವಾರ್ನಿಂಗ್!

By Suvarna NewsFirst Published Mar 4, 2024, 5:29 PM IST
Highlights

ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಆಮ್ ಆದ್ಮಿ ಪಾರ್ಟಿಗೆ ಭಾರಿ ಹಿನ್ನಡೆಯಾಗಿದೆ. ಜೂನ್ 15ರೊಳಗೆ ದೆಹಲಿಯಲ್ಲಿರುವ ಆಪ್ ಪ್ರಧಾನ ಕಚೇರಿ ತೊರೆಯುವಂತೆ ಸುಪ್ರೀಂ ಕೋರ್ಟ್ ವಾರ್ನಿಂಗ್ ನೀಡಿದೆ.

ನವದೆಹಲಿ(ಮಾ.04) ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ಭರ್ಜರಿಯಾಗಿ ತಯಾರಾಗಿದೆ. ಹಲವೆಡೆ ಮೈತ್ರಿ, ಕೆಲೆವೆಡೆ ಏಕಾಂಗಿ ಹೋರಾಟಕ್ಕಿಳಿದಿರುವ ಆಮ್ ಆದ್ಮಿ ಪಾರ್ಟಿಗೆ ಇದೀಗ ಸುಪ್ರೀಂ ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ. ಜೂನ್ 15ರೊಳಗೆ ದೆಹಲಿಯಲ್ಲಿರುವ ಆಮ್ ಆದ್ಮಿ ಪಾರ್ಟಿ ಪ್ರಧಾನ ಕಚೇರಿ ತೊರೆಯಲು ಸೂಚಿಸಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಬಳಿ ಇರುವ ಆಪ್ ಪ್ರಧಾನ ಕಚೇರಿ ಅತಿಕ್ರಮಣ ಜಾಗದಲ್ಲಿ ಕಟ್ಟಲಾಗಿದೆ. ದೆಹಲಿ ಹೈಕೋರ್ಟ್ ನೀಡಿದ್ದ ಜಾಗ ಬಳಿಸಿ ಕಟ್ಟಿರುವ ಈ ಕಚೇರಿ ಜಾಗ ಖಾಲಿ ಮಾಡುವಂತೆ ಸುಪ್ರೀಂ ಸೂಚಿಸಿದೆ.

ಲೋಕಸಭಾ ಚುನಾವಣೆ ಕಾರಣದಿಂದ ಹೆಚ್ಚುವರಿ ಸಮಯ ನೀಡುತ್ತಿದ್ದೇವೆ. ಆದರೆ ಈ ಸಮಯ ಜೂನ್ 15 ಮೀರಬಾರದು. ಈ ದಿನಾಂಕದೊಳಗೆ ಆಮ್ ಆದ್ಮಿ ಪಾರ್ಟಿ ಪ್ರಧಾನ ಕಚೇರಿಯಿಂದ ತೊರೆಯಬೇಕು. ದೆಹಲಿ ಭೂ ಅಭಿವೃದ್ಧಿ ಇಲಾಖೆಯಿಂದ ಬೇರೊಂದು ಜಾಗ ಪಡೆದು ಅಲ್ಲಿ ಕಚೇರಿ ನಿರ್ಮಿಸುವಂತೆ ಸೂಚಿಸಿದೆ. 

Latest Videos

 

ಲೋಕಸಭಾ ಚುನಾವಣೆಗೂ ಸಿಎಂ ಕೇಜ್ರಿವಾಲ್ ಫ್ರೀ ಆಫರ್ ಘೋಷಣೆ, 7ಸ್ಥಾನ ಗೆದ್ದರೆ ಉಚಿತ, ಉಚಿತ!

ದೆಹಲಿ ಹೈಕೋರ್ಟ್‌ಗೆ ನೀಡಿದ್ದ ಜಾಗವನ್ನು ಅತಿಕ್ರಮಣ ಮಾಡಿದ ಆಮ್ ಆದ್ಮಿ ಪಾರ್ಟಿ 2017ರಲ್ಲಿ ಸುಸಜ್ಜಿತ ಪ್ರಧಾನ ಕಚೇರಿ ನಿರ್ಮಿಸಿತ್ತು. 2017ರಿಂದ ಇಲ್ಲೀವರೆಗೆ ಈ ಕಚೇರಿಯಿಂದಲೇ ಆಮ್ ಆದ್ಮಿ ಪಾರ್ಟಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಸ್ಥಳ ಅತಿಕ್ರಮಣ ಅನ್ನೋದು ಬಯಲಾಗಿತ್ತು. ಅದರಲ್ಲೂ ದೆಹಲಿ ಹೈಕೋರ್ಟ್‌ಗೆ ಸೇರಿದ ಜಾಗವನ್ನು ಅತಿಕ್ರಮವಾಗಿ ಬಳಸಿ ಆಮ್ ಆದ್ಮಿ ಪಾರ್ಟಿ ಕಚೇರಿ ನಿರ್ಮಿಸಿರುವುದು ಬೆಳಕಿಗೆ ಬಂದಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಆಪ್ ಪಾರ್ಟಿಗೆ ಖಡಕ್ ಸಂದೇಶ ನೀಡಿದೆ. ಆಪ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ಈ ವೇಳೆ ಇದು ಈಗಾಗಲೇ ಹೈಕೋರ್ಟ್‌ಗೆ ನೀಡಿರುವ ಸ್ಥಳ ಅನ್ನೋದು ಗೊತ್ತಿರಲಿಲ್ಲ ಎಂದು ಆಪ್ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಇದಕ್ಕೆ ಗರಂ ಆದ ಸುಪ್ರೀಂ ಕೋರ್ಟ್, ತೆರವು ಮಾಡಲು ಕಾಲವಕಾಶ ನೀಡಿದೆ.

ಲೋಕಸಭಾ ಚುನಾವಣೆಗೂ ಸಿಎಂ ಕೇಜ್ರಿವಾಲ್ ಫ್ರೀ ಆಫರ್ ಘೋಷಣೆ, 7ಸ್ಥಾನ ಗೆದ್ದರೆ ಉಚಿತ, ಉಚಿತ!

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಅಂತಿಮಗೊಳಿಸುವಲ್ಲಿ ತಲ್ಲೀನರಾಗಿರುವ ದೆಹಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ ಇದೀಗ ಹೊಸ ಕಚೇರಿ ನಿರ್ಮಿಸುವ ಅನಿವಾರ್ಯತೆಯಲ್ಲಿದ್ದಾರೆ. 2024ರ ಚುನಾವಣೆಗೆ ವರೆಗೆ ಇದೇ ಕಚೇರಿಯಲ್ಲಿ ಕೆಲಸ ಮಾಡಲು ಆಪ್ ನಿರ್ಧರಿಸಿದೆ. ಇದೇ ವೇಳೆ ಬೇರೊಂದು ಕಚೇರಿ ನಿರ್ಮಿಸಿ ಜೂನ್ 15ರ ಬಳಿಕ ಹೊಸ ಕಚೇರಿಗೆ ಸ್ಥಳಾಂತರಗೊಳ್ಳಲು ಆಪ್ ನಿರ್ಧರಿಸಿದೆ.
 

click me!