
ಒಡಿಶಾ(ಜೂ.22): ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಈ ಬಾರಿ ಪುರಿ ಜಗನ್ನಾಥ ರಥ ಯಾತ್ರೆ ಆಯೋಜನೆ ಮಾಡಲು ಅವಕಾಶವಿಲ್ಲ. ಈ ಬಾರಿ ಅವಕಾಶ ನೀಡಿದರೆ ಜಗನ್ನಾಥ ನಮ್ಮನ್ನು ಕ್ಷಮಿಸಲ್ಲ ಎಂದು ಜೂನ್ 18ರಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೀಗ(ಜೂ.22) ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿದೆ. ಪುರಿ ಜಗನ್ನಾಥ ರಥ ಯಾತ್ರೆ ಆಯೋಜಿಸಲು ಅನುಮತಿ ನೀಡಿದೆ.
ರಥ ಯಾತ್ರೆಗೆ ಬ್ರೇಕ್, ಅನುಮತಿ ನೀಡಿದರೆ ಪುರಿ ಜಗನ್ನಾಥ ಕ್ಷಮಿಸಲ್ಲ ಎಂದ ಸುಪ್ರೀಂ ಕೋರ್ಟ್!..
ಜಗನ್ನಾಥ ರಥ ಯಾತ್ರೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ಕೇವಲ ಆಯೋಜಕರು, ಆಡಳಿತ ಮಂಡಳಿ ಸದಸ್ಯರು ರಥ ಯಾತ್ರೆ ಆಯೋಜನೆ ಮಾಡಬೇಕು. ಇನ್ನು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಥಾ ಯಾತ್ರೆ ರದ್ದು ಮಾಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಕೋರ್ಟ್ ಇಂದು(ಜೂ.22) ನಡೆಸಿ ಹೊಸ ಆದೇಶ ನೀಡಿದೆ.
ಎಲ್ಲಾ ರೀತಿ ಮುಂಜಾಗ್ರತ ಕ್ರಮದ ಮೂಲಕ ರಥ ಯಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಸಾರ್ವಜನಿಕರ ಪ್ರವೇಶಕ ನಿರಾಕರಿಸಿ ಅನುಮತಿ ನೀಡಿದೆ. ಇದೀಗ ಒಡಿಶಾ ಸರ್ಕಾರ ರಥ ಯಾತ್ರೆ ದಿನ ಕರ್ಫ್ಯೂ ವಿಧಿಸಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ