
ನವದೆಹಲಿ(ಅ. 08) ಈ ಕೊರೋನಾ ಲಾಕ್ ಡೌನ್ ಎಲ್ಲರ ಜೀವನದ ಮೇಲೆಯೂ ಕೆಟ್ಟ ಪರಿಣಾಮ ಬೀಓರಿದೆ. ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರ ಬದುಕನ್ನು ಹೈರಾಣವಾಗಿಸಿದೆ. ಸರ್ಕಾರಗಳು ನೆರವು ನೀಡಿದ್ದರೂ ಬದುಕು ಹಿಂದಿನ ಹಾದಿಗೆ ಮರಳಿಲ್ಲ.
ಇವರು 80 ವರ್ಷದ ದಂಪತಿ, ರಾಷ್ಟ್ರ ರಾಜಧಾನಿ ದೆಹಲಿಯ ಮಾಳವೀಯ ನಗರದಲ್ಲಿ ಪುಟ್ಟದೊಂದು ಅಂಗಡಿ ಇದೆ. ಮನೆಯಲ್ಲೆ ತಯಾರಿಸಿ ಊಟ-ತಿಂಡಿ ಸರಬರಾಜು ಮಾಡುತ್ತಾರೆ. ಕೊರೋನಾ ಇವರ ಬದುಕನ್ನು ಕಸಿದುಕೊಂಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ದಂಪತಿಯ ವಿಡಿಯೋ ಶೇರ್ ಆಗುತ್ತಿದ್ದಂತೆ ಜನರೇ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಮಾಳವೀಯ ನಗರದ ಹನುಮಾನ್ ದೇವಾಲಯದ ಮುಂದೆ ಜನರ ಹೊಟ್ಟೆ ತುಂಬಿಸುತ್ತಿದ್ದ ಇವರ ಬದುಕಿಗೆ ಈಗ ಜನರೇ ನೆರವಾಗಿದ್ದಾರೆ.
ಆಗಲ್ಲ ಎಂದ್ರೂ ಪರೇಡ್ ಗೆ ಕಳಿಸಿ ನನ್ನ ಕೊಂದ್ರಾ ದುರುಳರೆ
ಗೌರವ್ ವಾಸನ್ ಎಂಬುವರು ದಂಪತಿಯ ಬದುಕಿನ ಇಂದಿನ ಚಿತ್ರಣವನ್ನು ಶೇರ್ ಮಾಡಿದ್ದರು. ಎಂಭತ್ತು ವರ್ಷದ ಕಾಂತಾ ಪ್ರಸಾದ್ ವ್ಯವಹಾರದ ಮೇಲೆ ಕೊರೋನಾ ಕರಿನೆರಳು ಬೀರಿತ್ತು. ಕಾಂತಾ ಪ್ರಸಾದ್ ಮತ್ತು ಅವರ ಪತ್ನಿ ಬಾದಾಮಿ ದೇವಿ ಬೆಳಗ್ಗೆ 6.30ಕ್ಕೆ ತಮ್ಮ ದೈನಂದಿನ ಕೆಲಸ ಆರಂಭಿಸುತ್ತಾರೆ. ದಾಲ್ , ಕರಿ, ಅನ್ನ ಸಿದ್ಧ ಮಾಡಿ 9.30ಕ್ಕೆ ಗ್ರಾಹಕರಿಗಾಗಿ ಕಾಯುತ್ತಿರುತ್ತಾರೆ.
ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದರೂ ತಂದೆ ತಾಯಿ ಬದುಕು ಮಾತ್ರ ಬೀದಿಯಲ್ಲಿ ಇದೆ. ವಿಡಿಯೋ ಶೇf ಆಗುತ್ತಿದ್ದಂತೆ ಅನೇಕರು ದಂಪತಿಯ ಮಾಹಿತಿ ಕೇಳಿದ್ದು ಸಹಾಯ ಮಾಡಲು ಮುಂದೆ ಬಂದಿದ್ದಾಋಎ. ಇದೆ ಅಲ್ಲವೇ ಅಚ್ಚೇ ದಿನ್?
ನಟಿ ಸೋನಂ ಕಪೂರ್, ಕ್ರಿಕೆಟಿಗ ಆರ್ ಅಶ್ವಿನ್, ದೆಹಲಿ ಐಪಿಎಲ್ ತಂಡ ಡೆಲ್ಲಿ ಕ್ಯಾಪಿಟಲ್ಸ್, ಜೊಮ್ಯಾಟೋ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರತಿ ದಂಪತಿಯ ಭೇಟಿ ಮಾಡಿ ನಿಮ್ಮ ಮುಖದಲ್ಲಿ ಮಂದಹಾಸ ತರುತ್ತೇನೆ ಎಂದು ಹೇಳಿದ್ದಾರೆ.
ವಿಡಿಯೋ ಶೇರ್ ಆಗುತ್ತಿದ್ದಂತೆ ದಂಪತಿಯ ಪುಟ್ಟ ಬಾಬಾ ಕಾ ಡಬ್ಬಾಕ್ಕೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಿದ್ದು ಹಿರಿಯ ಜೀವಗಳು ನೆಮ್ಮದಿಯಾಗಿರಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ