Latest Videos

ಕಾಲ್ತುಳಿತ ಭೀತಿ: ಕೇರಳ ಕಾಲೇಜಲ್ಲಿ ಸನ್ನಿ ಲಿಯೋನ್‌ ಕಾರ್ಯಕ್ರಮಕ್ಕಿಲ್ಲ ಅನುಮತಿ

By Kannadaprabha NewsFirst Published Jun 14, 2024, 8:51 AM IST
Highlights

ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೆಟೆಕ್ ಫೆಸ್ಟ್‌ನ ಭಾಗವಾಗಿ ಜು.5 ರಂದು ಸನ್ನಿ ಲಿಯೋನ್ ಅವರ ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘ ಆಯೋಜಿಸಿತ್ತು. ಆದರೆ ಕಾಲೇಜು ಕ್ಯಾಂಪಸ್‌ನಲ್ಲಿ ಹೊರಗಿನವರ ಕಾರ್ಯಕ್ರಮ ಆಯೋಜನೆಗೊಂಡರೆ ಅದು ಕಾಲ್ತುಳಿತಕ್ಕೆ ಕಾರಣವಾಗುವ ಆತಂಕ ಇದೆ. 
 

ತಿರುವನಂತಪುರ(ಜೂ.14):  ಸ್ಥಳೀಯ ಎಂಜಿನಿಯರಿಂಗ್‌ ಕಾಲೇಜಿನ ಕ್ಯಾಂಪಸ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ ನಟಿ ಸನ್ನಿ ಲಿಯೋನ್‌ರ ಕಾರ್ಯಕ್ರಮಕ್ಕೆ ವಿವಿ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ. 

ಇಲ್ಲಿನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೆಟೆಕ್ ಫೆಸ್ಟ್‌ನ ಭಾಗವಾಗಿ ಜು.5 ರಂದು ಸನ್ನಿ ಲಿಯೋನ್ ಅವರ ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘ ಆಯೋಜಿಸಿತ್ತು. ಆದರೆ ಕಾಲೇಜು ಕ್ಯಾಂಪಸ್‌ನಲ್ಲಿ ಹೊರಗಿನವರ ಕಾರ್ಯಕ್ರಮ ಆಯೋಜನೆಗೊಂಡರೆ ಅದು ಕಾಲ್ತುಳಿತಕ್ಕೆ ಕಾರಣವಾಗುವ ಆತಂಕ ಇದೆ. 

ರೆಡ್ ಹಾಟ್ ಬಿಕಿನಿಯಲ್ಲಿ ಸನ್ನಿ ಲಿಯೋನ್, ಥಾಯ್ಲೆಂಡ್ ಸ್ವಿಮ್ಮಿಂಗ್ ಪೂಲ್ ವಿಡಿಯೋ ಔಟ್!

ಹೀಗಾಗಿ ನಿಯಮಗಳ ಅನ್ವಯ ಅನುಮತಿ ನಿರಾಕರಿಸಲಾಗಿದೆ ಎಂದು ಕೇರಳ ವಿವಿ ತನ್ನ ನಿರ್ಧಾರ ಪ್ರಕಟಿಸಿದೆ.

click me!