Summon Modeನಲ್ಲಿದ್ದ ಟಾಟಾ ಹ್ಯಾರಿಯರ್‌ ಇವಿ ಕಾರು ಇದಕ್ಕಿದ್ದಂತೆ ರಿವರ್ಸ್ ಬಂದು ಮಾಲೀಕ ಸಾವು

Published : Aug 25, 2025, 03:57 PM IST
Tata EV Car in Summon Mode Kills Man in Tiruppur

ಸಾರಾಂಶ

ಟಾಟಾ ಹ್ಯಾರಿಯರ್ ಇವಿ ಕಾರಿನ ಸಮ್ಮನ್ ಮೋಡ್‌ನಲ್ಲಿನ ದೋಷದಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ತಮಿಳುನಾಡಿನ ತಿರುಪ್ಪುರ್‌ನಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಟಾಟಾ ಮೋಟಾರ್ಸ್ ಘಟನೆಗೆ ವಿಷಾದ ವ್ಯಕ್ತಪಡಿಸಿದೆ.

ತಿರುಪ್ಪುರ್‌: ಸಮ್ಮನ್ ಮೋಡ್‌ನಲ್ಲಿದ್ದ ಟಾಟಾ ಇವಿ ಗಾಡಿಯೊಂದು ಇದ್ದಕ್ಕಿದ್ದಂತೆ ಹಿಂದೆ ಬಂದು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದಂತಹ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಈ ಘಟನೆ ಅಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಟಾಟಾ ಮೋಟಾರ್ಸ್ ವಿಷಾದ ವ್ಯಕ್ತಪಡಿಸಿದೆ. ತಮಿಳುನಾಡಿನ ತಿರುಪ್ಪುರ್‌ನಲ್ಲಿ ಈ ಘಟನೆ ನಡೆದಿದ್ದು, ಸೆಂಥಿಲ್ ಎಂಬುವವರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ಟಾಟಾ ಹ್ಯಾರಿಯರ್ ಇವಿ ವಾಹನವನ್ನು ಕೆಲ ವಾರಗಳ ಹಿಂದಷ್ಟೇ ಅವರು ಖರೀದಿಸಿದ್ದರು. ಬನಿಯನ್ ಅಂಗಡಿ ನಡೆಸುತ್ತಿದ್ದ ಸೆಂಥಿಲ್ ಅವರು ಕಾರನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆ ವೇಳೆ ಕಾರು ಸಮ್ಮನ್ ಮೋಡ್‌ನಲ್ಲಿತ್ತು ಎಂದು ವರದಿಯಾಗಿದೆ. ಸಮ್ಮನ್ ಮೋಡ್ ಎಂದರೆ ಚಾಲಕನಿಲ್ಲದೇ ಕಾರಿನ ಕೀಲಿಯನ್ನು ಬಳಸಿಕೊಂಡು ರಿಮೋಟ್ ಮೂಲಕ ಕಾರನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲು ಅನುವು ಮಾಡಿಕೊಡುವ ಒಂದು ವ್ಯವಸ್ಥೆಯಾಗಿದೆ. ಈ ಕಾರನ್ನು ಹ್ಯಾಂಡ್‌ಬ್ರೇಕ್ ಹಾಕದೇ ಇಳಿಜಾರಿನಲ್ಲಿ ನಿಲ್ಲಿಸಲಾಗಿತ್ತು.

ಇದ್ದಕ್ಕಿದ್ದಂತೆ ಹಿಂದಕ್ಕೆ ಚಲಿಸಿದ ಟಾಟಾ ಹ್ಯಾರಿಯರ್ ಇವಿ:

ತಿರುಪ್ಪುರ್ ಜಿಲ್ಲೆಯ ಅವಿನಾಶಿಯಲ್ಲಿ ಆಗಸ್ಟ್ 14ರಂದು ಈ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ವೀಡಿಯೋದಲ್ಲಿ ಡೋರ್‌ ತೆರೆದುಕೊಂಡಿರುವಾಗಲೇ ಈ ಇವಿ ಗಾಡಿ ಹಿಂದಕ್ಕೆ ಇಳಿಜಾರಿಗೆ ಚಲಿಸಲು ಶುರು ಮಾಡಿದ್ದು, ಸೆಂಥಿಲ್ ಅವರು ಈ ಕಾರನ್ನು ಏರುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಏರಲಾಗದೇ ಕಾರಿನ ಡೋರ್ ತಾಗಿ ಕೆಳಗೆ ಬಿದ್ದ ಅವರ ಮೇಲೆ ಕಾರು ಚಲಿಸಿದೆ. ಅಲ್ಲಿದ್ದವರು ಈ ವೇಳೆ ಕಾರನ್ನು ನಿಲ್ಲಿಸಲು ಯತ್ನಿಸಿದರು ಸಾಧ್ಯವಾಗಿಲ್ಲ.

ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್:

ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳು ಕಾರು ಸಮ್ಮನ್ ಮೂಡ್‌ನಲ್ಲಿತ್ತು ಎಂದು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಟಾಟಾ ಮೊಟಾರ್ಸ್ ಪ್ರತಿಕ್ರಿಯಿಸಿದ್ದು, ವಾಹನವೂ ಚಾಲನೆಯಲ್ಲಿ ಇರಲಿಲ್ಲ, ಈ ಅಪಘಾತವೂ ಇಳಿಜಾರಿನ ಕಾರಣದಿಂದ ಸಂಭವಿಸಿದ್ದಿರಬಹುದು ಎಂದು ಹೇಳಿತ್ತು. ಈ ದುರಂತಮಯ ಅಪಘಾತದ ಬಗ್ಗೆ ನಮಗೆ ಮಾಹಿತಿ ನೀಡಲಾಗಿದೆ ಕುಟುಂಬಕ್ಕೆ ಆದ ಈ ನಷ್ಟದಿಂದ ನಮಗೆ ತೀವ್ರ ದುಃಖವಾಗಿದೆ. ನಮ್ಮ ಬೆಂಬಲ ಹಾಗೂ ಸಂತಾಪಗಳು ಮೃತರ ಕುಟುಂಬದೊಂದಿಗೆ ಇದೆ. ನಾವು ಪ್ರಸ್ತುತ ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಘಟನೆಗೆ ಸಂಬಂಧಿಸಿದಂತೆ ಟಾಟಾ ಮೋಟಾರ್ಸ್ ಹೇಳಿಕೆ ಬಿಡುಗಡೆ ಮಾಡಿದೆ.

ಜೂನ್ 3ರಂದು ಭಾರತದಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್ ಇವಿ

ಟಾಟಾ ಹ್ಯಾರಿಯರ್ ಇವಿ ಅನ್ನು 2025 ರ ಜೂನ್ 3ರಂದು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಟಾಟಾ ಮೋಟಾರ್ಸ್‌ನ ವೆಬ್‌ಸೈಟ್‌ನ ಪ್ರಕಾರ, ಹ್ಯಾರಿಯರ್ ಇವಿಯ ಸಮನ್ ಮೋಡ್ ಕಾರ್ಯನಿರತವಾಗಿದ್ದರೆ, ಆ ಗಾಡಿಯನ್ನು ಮುಂದಕ್ಕೆ ಅಥವಾ ಹಿಮ್ಮುಖ ದಿಕ್ಕಿನಲ್ಲಿ ಸ್ವಯಂಚಾಲಿತವಾಗಿ ಚಲಾಯಿಸಲು ದೂರದಿಂದಲೇ ರಿಮೋಟ್‌ ಮೂಲಕ ಪ್ರಯತ್ನಿಸಬಹುದಾಗಿದೆ. ಇದರಿಂದ ಪಾರ್ಕಿಂಗ್ ಸ್ಥಳಗಳಲ್ಲಿ ಕಡಿಮೆ ಜಾಗ ಇರುವ ಸ್ಥಳಗಳಲ್ಲಿ ಕಾರುಗಳನ್ನು ಚಾಲಕನಿಲ್ಲದೇ ಹೊರಗೆ ತರಬಹುದಾಗಿದೆ.

ಘಟನೆಯ ವೀಡಿಯೋ ನೋಡಿದ ಜನ ಹಲವು ಕಾಮೆಂಟ್ ಮಾಡಿದ್ದಾರೆ. ಆ ವ್ಯಕ್ತಿ ಸಮನ್ಸ್ ಮೋಡ್ ಬಳಸಲು ಪ್ರಯತ್ನಿಸಿದ್ದಿರಬಹುದು ಅಥವಾ ತಪ್ಪಾಗಿ ಮೋಡ್ ಆನ್ ಆಗಿದ್ದರೂ, ಬಾಗಿಲು ತೆರೆದಿರುವಾಗ ಮೋಡ್ ಕೆಲಸ ಮಾಡಬಾರದಿತ್ತು. ಕಾರು ಚಲಿಸಲು ಪ್ರಾರಂಭಿಸಿದಾಗ, ಅವನು ಬ್ರೇಕ್ ಹಾಕಲು ಪ್ರಯತ್ನಿಸಿದರು, ಇದರಿಂದಾಗಿ ಅವರು ನೆಲಕ್ಕೆ ಬಿದ್ದರು ಇದರಿಂದ ತಲೆಗೆ ಗಾಯವಾಯಿತು ಮತ್ತು ವೈದ್ಯರು ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದರು. ಅವರ ಕುಟುಂಬವು ಇನ್ನೂ ಆಘಾತದಲ್ಲಿದೆ, ಆದ್ದರಿಂದ ಅವರು ಇನ್ನೂ ಟಾಟಾ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಟಾಟಾ ಅಧಿಕಾರಿಗಳು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಮೃತ ಸೆಂಥಿಲ್ ಅವರು ಈ ಹೊಸ ಕಾರಿನಲ್ಲಿ ಈಗಾಗಲೇ ಸಾಫ್ಟ್‌ವೇರ್ ಸಮಸ್ಯೆಯನ್ನು ಎದುರಿಸಿದ್ದಾರೆ. ಅದು ರಸ್ತೆಯಲ್ಲಿ ನಿಂತ ನಂತರ ಸ್ವಿಚ್ ಆನ್ ಆಗಲಿಲ್ಲ. ನಂತರ ಅವರು ಶೋರೂಮ್‌ಗೆ ಕರೆ ಮಾಡಬೇಕಾಯಿತು ಮತ್ತು ತಂತ್ರಜ್ಞರು ಬಂದು ವಾಹನವನ್ನು ಆನ್ ಮಾಡಲು ಸಹಾಯ ಮಾಡಬೇಕಾಯಿತು ಎಂದು ಒಬ್ಬರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.

 

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಫ್ಲೈಓವರ್‌ ಕೆಳಗೆ ಬಾಕಿಯಾದ ಗಣೇಶ: ಮುಂಬೈನಲ್ಲಿ ಲಾಲ್‌ಬಾಗ್ಚ ರಾಜನ ಅನಾವರಣ

ಇದನ್ನೂ ಓದಿ: ಮಧ್ಯ ಆಗಸದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನುಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ನಿರ್ವಹಿಸಿದ ರೀತಿಗೆ ಪ್ರಯಾಣಿಕನಿಂದ ಭಾರಿ ಶ್ಲಾಘನೆ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?