
ನವದೆಹಲಿ (ಆ.22) ಭಾರತದಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿದೆ.ಒಂದೇ ತಿಂಗಳಲ್ಲಿ ಕೆಜಿಗೆ 30 ರೂಪಾಯಿ ಏರಿಕೆಯಾಗಿದೆ. ಕಳೆದ ತಿಂಗಳು ಪ್ರತಿ ಕೆಜಿ ಸಕ್ಕರೆಗೆ 45 ರೂಪಾಯಿ ಇತ್ತು. ಇದೀಗ 75 ರೂಪಾಯಿಗೆ ಏರಿಕೆಯಾಗಿದೆ. ಸಕ್ಕರೆ ದುಬಾರಿಯಾಗುತ್ತಿರುವ ಬೆನ್ನಲ್ಲೇ ದೇಶದಲ್ಲಿ ಆತಂಕ ಹೆಚ್ಚಾಗಿದೆ. ಒಂದೆಡೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆತಂಕ ಎದುರಾಗಿದೆ. ಇದೇ ವೇಳೆ ದೇಶದಲ್ಲಿ ಎಥೆನಾಲ್ ಪೆಟ್ರೋಲ್‌ಗೆ ಆದ್ಯತೆ ನೀಡಿರುವ ಕಾರಣ ಸಕ್ಕರೆ ಉತ್ಪಾದನೆ ಕುಂಠಿತವಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಇದರ ಪರಿಣಾಮ ಸಕ್ಕರೆ ಬೆಲೆ ಏರಿಕೆಯಾಗಿದೆ ಎಂಬ ಆರೋಪಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆ ಕಾರಣಲ್ಲ ಎಂದಿದೆ.ಟ
ರೈತರು ಕಬ್ಬು ಬೆಳೆಯನ್ನು ಎಥೆನಾಲ್ ಉತ್ಪಾದನೆಗೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಎಥೆನಾಲ್ ಉತ್ಪಾದನೆ ಮೇಲೆ ಒತ್ತು ನೀಡಿರುವ ಕಾರಣ ಇದೀಗ ಕಬ್ಬು ನೇರವಾಗಿ ಎಥೆನಾಲ್ ಫ್ಯಾಕ್ಟರಿಗೆ ತಲುಪುತ್ತಿದೆ. ರೈತರಿಗೆ ಸಕ್ಕರೆ ಫ್ಯಾಕ್ಚರಿಗಿಂತ ಹೆಚ್ಚಿನ ಬೆಲೆಯೂ ಸಿಗುತ್ತಿದೆ. ಹೀಗಾಗಿ ಸಕ್ಕರೆ ಸಮಸ್ಯೆ ಎದುರಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಆರೋಪ, ಟೀಕೆಗಳು ಸಂಪೂರ್ಣ ತಪ್ಪು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ದೇಶದಲ್ಲಿ ಸಕ್ಕಾರೆ ಉತ್ಪಾದನೆ ಕಡಿಮೆಯಾಗಿದೆ. ಇದಕ್ಕೆ ಎಥೆನಾಲ್ ಕಾರಣವಲ್ಲ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿದೆ.
2022-23ರಲ್ಲಿ ಎಥೆನಾಲ್ ಉತ್ಪಾದನೆಗೆ ಬಳಸಿದ ಕಬ್ಬಿನ ಪ್ಪಮಾಣ ಶೇಕಡಾ 13ರಷ್ಟಿತ್ತು. ಆದರೆ 2025-26ರ ಸಾಲಿನಲ್ಲಿ ಎಥೆನಾಲ್‌ಗೆ ಬಳಸಿದ ಕಬ್ಬಿನ ಪ್ರಮಾಣ ಶೇಕಡಾ 9ಕ್ಕೆ ಇಳಿಕೆಯಾಗಿದೆ. ಎಥೆನಾಲ್ ಉತ್ಪಾದನೆಗೆ ಕಬ್ಬಿಗಿಂತ ಹೆಚ್ಚು ಧಾನ್ಯಗಳ ತ್ಯಾಜ್ಯ, ಜೋಳಗಳಿಂದ ಮಾಡಲಾಗುತ್ತಿದೆ. ಕಬ್ಬಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಆದರೆ ದೇಶದಲ್ಲಿ ಕಬ್ಬಿನ ಉತ್ಪಾದನೆ ಹಾಗೂ ಸಕ್ಕರೆ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಸಕ್ಕರೆ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸದ್ಯ ಸಕ್ಕರೆ ಉತ್ಪಾದನೆ 306 ಲಕ್ಷ ಮೆಟ್ರಿಕ್ ಟನ್ ಆಗುವ ನಿರೀಕ್ಷೆ ಇದೆ. ನಿರೀಕ್ಷೆಗಿಂತ ಇದು ಸರಿಸುಮಾರು 40 ಟನ್ ಕಡಿಮೆ. ಹಲವೆಡೆ ಅತೀಯಾದ ಮಳೆ, ಮತ್ತೆ ಹಲವೆಡೆ ಮಳೆ ಕೊರತೆಯಿಂದ ಕಬ್ಬು ಬೆಳೆ ಕುಂಠಿತವಾಗಿದೆ. ಪ್ರತಿಕೂಲ ಹಮಾನದಿಂದ ಕಬ್ಬು ಸೇರಿದಂತೆ ಹಲವು ಬೆಳೆಗಳ ಮೇಲೆ ಪರಿಣಾಮ ಬಿದ್ದಿದೆ. ಇದರಿಂದ ಉತ್ಪಾದನೆ ಕುಂಠಿತವಾಗಿದೆ ಎಂದು ಹೇಳಿದೆ. ಆದರೆ ಅಕ್ಟೋಬರ್‌ನಲ್ಲಿ ದೇಶಕ್ಕೆ ಬೇಕಾಗುವ ಸಕ್ಕರೆ ಉತ್ಪಾದನೆಯಾಗಲಿದೆ. ಹೀಗಾಗಿ ಬೆಲೆ ಇಳಿಕೆಯಾಗಲಿದೆ ಎಂದಿದೆ.
ಜಾಗತಿಕವಾಗಿ ಸಕ್ಕರೆ ಪೂರೈಕೆಯಲ್ಲಿ ಕೊರತ ಎದುರಾಗಿದೆ. ಇದು ಭಾರತದ ಮೇಲೂ ಆಗಿದೆ. 2026-27ರಲ್ಲಿ ಸಕ್ಕರೆ ಕೊರತೆ 33 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಲಿದೆ ಎಂದು ಕೇಂದ್ರ ಹೇಳಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಟನ್ ಸಕ್ಕರೆಗೆ 552 ಡಾಲರ್‌ಗೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಶೇಕಡಾ 16ರಷ್ಟು ಸಕ್ಕರೆ ಬೆಲೆ ಜಾಗತಿಕವಾಗಿ ಏರಿಕೆಯಾಗಿದೆ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ