Bribe Allegation: ಪಂಜಾಬ್ ಸಿಎಂ ಪತ್ನಿ ಮೇಲೆ ₹5 ಕೋಟಿ ಲಂಚದ ಆರೋಪ, NHRC ತನಿಖೆಗೆ ಆದೇಶ

Published : Aug 22, 2026, 10:48 AM IST
NHRC Probes 5 Crore Bribe Allegation Against Punjab CMs Wife Gurpreet Kaur

ಸಾರಾಂಶ

ಹಲವು ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾದಿಂದ ಸುದ್ದಿಯಾಗುತ್ತಿರುವ ಪಂಜಾಬ್ ಇದೀಗ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ವಿರುದ್ಧ ಅತ್ಯಾ೧ಚಾರ ಪ್ರಕರಣವೊಂದನ್ನು ಮುಚ್ಚಿಹಾಕಲು 5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರವನ್ನು NHRC ಗಂಭೀರವಾಗಿ ಪರಿಗಣಿಸಿದೆ.

ಪಂಜಾಬ್ ಸಿಎಂ ಪತ್ನಿ ವಿರುದ್ಧದ ಆರೋಪಗಳ ಬಗ್ಗೆ NHRC ತನಿಖೆ

ಪಂಜಾಬ್ (ಆ.22): ಹಲವು ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾದಿಂದ ಸುದ್ದಿಯಾಗುತ್ತಿರುವ ಪಂಜಾಬ್ ಇದೀಗ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ವಿರುದ್ಧ ಅತ್ಯಾ೧ಚಾರ ಪ್ರಕರಣವೊಂದನ್ನು ಮುಚ್ಚಿಹಾಕಲು 5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC) ಗಂಭೀರವಾಗಿ ಪರಿಗಣಿಸಿದೆ.

ಪಂಜಾಬ್ ಮುಖ್ಯಮಂತ್ರಿ ಪತ್ನಿಯಿಂದಲೇ ಲಂಚಕ್ಕೆ ಬೇಡಿಕೆ!

ಪಂಜಾಬ್‌ನಲ್ಲಿ ನಡೆದಿದ್ದ ಬಲತ್ಕಾರ ಪ್ರಕರಣವೊಂದರಲ್ಲಿ ಕೇಸ್ ದಾಖಲಾಗಿತ್ತು. ಈ ಕೇಸ್ ಮುಚ್ಚಿಹಾಕಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಕೇಳಿಬಂದಿದೆ. ಈ ಆರೋಪ ಬೇರೆ ಯಾರೋ ಸಾಮಾನ್ಯರು ಮಾಡಿದ್ದಲ್ಲ, ಪಂಜಾಬ್‌ನ ಮಾಜಿ ನ್ಯಾಯಾಧೀಶ ರಂಜಿತ್ ಸಿಂಗ್ ಈ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಿಯಾಂಕ್ ಕಾನೂಂಗೊ ನೇತೃತ್ವದ NHRC ಪೀಠವು ಈ ಬಗ್ಗೆ ತನಿಖೆ ನಡೆಸಿ ಎರಡು ವಾರಗಳಲ್ಲಿ ಕ್ರಮ ಕೈಗೊಂಡ ವರದಿ (ATR) ಸಲ್ಲಿಸುವಂತೆ ಪಂಜಾಬ್‌ನ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚಿಸಿದೆ. ಈ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯದ ಮಹಿಳಾ ಸುರಕ್ಷತಾ ವಿಭಾಗಕ್ಕೂ ಆಯೋಗ ರವಾನಿಸಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ NHRC ತಿಳಿಸಿದೆ.

ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸದ ಬಗ್ಗೆಯೂ ತನಿಖೆ

ಇದಕ್ಕೂ ಮುನ್ನ ಆಗಸ್ಟ್ 19 ರಂದು, ಪ್ರಿಯಾಂಕ್ ಕಾನೂಂಗೊ ಅವರಿದ್ದ NHRC ಪೀಠವು ಪಂಜಾಬ್‌ನ ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸದ ಬಗ್ಗೆ ಬಂದ ದೂರಿನ ಬಗ್ಗೆಯೂ ವಿಚಾರಣೆ ಆರಂಭಿಸಿದೆ. ಈ ಕುರಿತು ಪಂಜಾಬ್ ಸರ್ಕಾರದಿಂದ ವಿವರವಾದ ವರದಿ ಕೇಳಿದೆ. ದೂರಿನ ಪ್ರಕಾರ ಗ್ರಾಮೀಣ ದೂರದ ಮತ್ತು ಗಡಿ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸಿಲ್ಲ. ಇದರಿಂದಾಗಿ ಈ ಶಾಲೆಗಳ ಮಕ್ಕಳು ರಾಷ್ಟ್ರೀಯ ಹಬ್ಬದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಗಡಿ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ, ರಾಜ್ಯದ ಇತರ ಭಾಗಗಳ ಮಕ್ಕಳಂತೆ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ನಾಗರಿಕ ಅವಕಾಶಗಳನ್ನು ನಿರಾಕರಿಸಲಾಗಿದೆಯೇ? ಈ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಬಗ್ಗೆ ರಾಜ್ಯವಾರು ಜಿಲ್ಲಾವಾರು ಮತ್ತು ಶಾಲಾವಾರು ವಿವರಗಳನ್ನು ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಲಾಗಿದೆ. ಎಷ್ಟು ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಯಿತು, ರಾಷ್ಟ್ರಗೀತೆ ಹಾಡಲಾಯಿತು ಮತ್ತು ವಿದ್ಯಾರ್ಥಿಗಳು ಆಚರಣೆಯಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿ ನೀಡಬೇಕು. ಅಲ್ಲದೆ ಈ ಚಟುವಟಿಕೆಗಳನ್ನು ನಡೆಸದ ಶಾಲೆಗಳನ್ನು ಗುರುತಿಸಿ, ಅದಕ್ಕೆ ಕಾರಣಗಳನ್ನು ವಿವರಿಸುವಂತೆ ಕೇಳಲಾಗಿದೆ.

ಗ್ರಾಮೀಣ, ದೂರದ ಗಡಿ ಪ್ರದೇಶಗಳಲ್ಲಿರುವ ಶಾಲೆಗಳನ್ನು ವಿಶೇಷವಾಗಿ ಪರಿಶೀಲಿಸುವಂತೆ ಮತ್ತು ಈ ಪ್ರದೇಶಗಳ ಮಕ್ಕಳಿಗೆ ಲಭ್ಯವಿರುವ ಅವಕಾಶಗಳಲ್ಲಿ ಯಾವುದೇ ತಾರತಮ್ಯ ಆಗಿದೆಯೇ ಎಂಬ ಬಗ್ಗೆ ವಿವರಗಳನ್ನು ನೀಡುವಂತೆ ಪೀಠವು ನಿರ್ದಿಷ್ಟವಾಗಿ ನಿರ್ದೇಶಿಸಿದೆ.

ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಸಂದರ್ಭಗಳು ಮಕ್ಕಳಿಗೆ ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನ, ರಾಷ್ಟ್ರೀಯ ಚಿಹ್ನೆಗಳು, ನಾಗರಿಕ ಕರ್ತವ್ಯಗಳು, ರಾಷ್ಟ್ರೀಯ ಏಕತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಕಲಿಯಲು ಒಂದು ಪ್ರಮುಖ ಅವಕಾಶವನ್ನು ಒದಗಿಸುತ್ತವೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಆದರೆ ಸ್ವಾತಂತ್ರ್ಯ ದಿನಾಚರಣೆಯನ್ನೇ ಆಚರಿಸಿಲ್ಲ ಎಂದರೆ ಏನರ್ಥ? ನಾಲ್ಕು ವಾರಗಳೊಳಗೆ ವಿವರವಾಗಿ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸುವಂತೆ ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯದಿಂದಲೂ ಆಯೋಗ ಮಾಹಿತಿ ಕೇಳಿದೆ ಮತ್ತು ಸೂಕ್ತ ಕ್ರಮಕ್ಕಾಗಿ ಕೇಂದ್ರ ಗೃಹ ಸಚಿವಾಲಯಕ್ಕೂ ತಿಳಿಸಿದೆ.

ಶಾಲೆಗಳ ಭೌಗೋಳಿಕ ಸ್ಥಳದ ಕಾರಣಕ್ಕಾಗಿಯೇ ಗಡಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ರಾಷ್ಟ್ರೀಯ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಸಮಾನ ಅವಕಾಶಗಳನ್ನು ನಿರಾಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಿಯಾಂಕ್ ಕಾನೂಂಗೊ ನೇತೃತ್ವದ NHRC ಪೀಠವು ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕ್‌ಗೆ ಪೋಲಾಗುತ್ತಿದ್ದ ಸಿಂಧೂ ನದಿ ನೀರನ್ನು ಲಡಾಕ್‌ಗೆ ಬಳಸಿಕೊಂಡ ಮೋದಿ ಸರ್ಕಾರ, ಕೃಷಿ ಕ್ರಾಂತಿಗೆ ಸಾಕ್ಷಿಯಾಯ್ತು ಭಾರತ
'ಆರ್ಥಿಕ ಸ್ಥಿತಿ ಆಧರಿಸಿ ಮೀಸಲಾತಿ ನೀಡಿ' ಜಾತಿ ಆಧರಿತ ರಿಸರ್ವೇಷನ್‌ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ