India partition story: ಭಾರತ ವಿಭಜನೆಯ ದುಃಖವನ್ನು ಮರೆಯುವ ಹಾಗಿಲ್ಲ: ಭಾಗವತ್‌

By Suvarna NewsFirst Published Nov 26, 2021, 2:14 PM IST
Highlights

ನೋಯ್ಡಾ(ನ.26): ಜಗತ್ತಿಗೆ ಒಳ್ಳೆಯದನ್ನು ಮಾಡುವುದಕ್ಕೆ ಹಿಂದೂ ಸಮುದಾಯವೂ ಸಮರ್ಥವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

ಅವರು ನೋಯ್ಡಾ(Noida)ದಲ್ಲಿ ಕೃಷ್ಣಾನಂದ ಸಾಗರ್‌ (Krishnanand Sagar)ಅವರು ಬರೆದ  "ವಿಭಾಜನಕಾಲೀನ್‌ ಭಾರತ್‌ ಕೆ ಸಾಕ್ಷಿ" (ಭಾರತ ವಿಭಜನೆಯ ಸಾಕ್ಷಿಗಳು) ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನಾವು ಇತಿಹಾಸವನ್ನುಓದಬೇಕು ಹಾಗೂ ಸತ್ಯವನ್ನು ಒಪ್ಪಿಕೊಳ್ಳಬೇಕು. ಹಿಂದೂ ಸಮುದಾಯ ಜಗತ್ತಿಗೆ ಒಳ್ಳೆಯದನ್ನು ಮಾಡಲು ಸದಾ ಸಿದ್ಧವಾಗಿದೆ.ಭಾರತ ವಿಭಜನೆ ವೇಳೆ ಆದ ನೋವನ್ನು ಮರೆಯುವ ಹಾಗಿಲ್ಲ. ಭಾರತ ಮತ್ತೆ ಅಖಂಡವಾದಾಗಲಷ್ಟೇ ಈ ನೋವು ಹೋಗಲು ಸಾಧ್ಯ ಎಂದು ಅವರು ಹೇಳಿದರು.

ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದೇ ಭಾರತದ ಸಿದ್ಧಾಂತ. ತನ್ನದು ಸರಿ ಬೇರೆಯವರದು ತಪ್ಪು ಎನ್ನುವ ಸಿದ್ಧಾಂತ ಭಾರತದಲ್ಲ. ಆದರೆ ಇಸ್ಲಾಮಿಕ್‌ ಆಕ್ರಮಣಕಾರರ(Islamic invaders) ಸಿದ್ಧಾಂತವೂ, ತಮ್ಮದು ಸರಿ ಇತರರದ್ದು ತಪ್ಪು ಎನ್ನುವಂತಹ ಸಿದ್ಧಾಂತವಾಗಿತ್ತು. ಇದುವೇ ಹಿಂದೆ ದೊಡ್ಡ ಸಂಘರ್ಷಕ್ಕೆ ಕಾರಣವಾಗಿತ್ತು ಎಂದು ಮೋಹನ್‌ ಭಾಗವತ್‌(Mohan Bhagwat) ಹೇಳಿದರು.

India Pak Partition: 'ವಿಭಜನೆಯಿಂದ ಯಾರೂ ಖುಷಿಯಾಗಿಲ್ಲ, ರದ್ದಾದರಷ್ಟೇ ನೋವು ಕಡಿಮೆಯಾಗುತ್ತೆ'

ಈ ಮುಸ್ಲಿಂ ಆಕ್ರಮಣಕಾರರು 1857ರ ಕ್ರಾಂತಿಯ ನಂತರ ಹಿಂದೂ ಮುಸ್ಲಿಮರ ಮಧ್ಯೆ ದ್ವೇಷ  ಹಾಗೂ ವಿಘಟನೆಯನ್ನು ಪ್ರೋತ್ಸಾಹಿಸಿದರು. ಆದರೆ ಈಗ ಭಾರತ 1947ರಲ್ಲಿ ಅಲ್ಲ, 2021ರ ಕಾಲಘಟ್ಟದಲ್ಲಿದೆ. ಒಮ್ಮೆ ಭಾರತ ವಿಭಜನೆಯಾಗಿದೆ ,  ಮತ್ತೆ ಈ ರೀತಿಯಾಗಬಾರದು ಎಂದವರು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಪುಸ್ತಕದ ಲೇಖಕ ಕೃಷ್ಣಾನಂದ ಶರ್ಮಾ(Krishnanand Sagar),ಸ್ವಾತಂತ್ರ್ಯಕ್ಕೂ ಮೊದಲೂ ಹಾಗೂ ನಂತರ ಧರ್ಮಾಂಧರಿಂದ ಈ ದೇಶವನ್ನು ರಕ್ಷಣೆ ಮಾಡಿದಂತಹ ಮಹಾನ್‌ ವ್ಯಕ್ತಿಗಳಿಂದ ಈ ಪುಸ್ತಕವನ್ನು ಬರೆಯಲು ಪ್ರೇರಣೆ ಸಿಕ್ಕಿತು. ಅನೇಕ ಮಹಾನ್‌ ವ್ಯಕ್ತಿಗಳ ಜೊತೆ ಸಂದರ್ಶನ ನಡೆಸಿ ಈ ಪುಸ್ತಕದ ಅಧ್ಯಾಯಗಳನ್ನು ರೂಪಿಸಲಾಗಿದೆ ಎಂದು  ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನ್ಯಾಯಮೂರ್ತಿ ಶಂಭುನಾಥ್‌ ಶ್ರೀವಾಸ್ತವ್‌(Shambhu Nath Srivastava), ವಿಭಜನೆ ವೇಳೆ ನಡೆದ ಹಿಂದೂಗಳ ಹತ್ಯಾಕಾಂಡದ ಬಗ್ಗೆ ಮಾತನಾಡಿದರು. ಪ್ರಸ್ತುತ ಉತ್ತರಪ್ರದೇಶ( Uttar Pradesh) ಹಾಗೂ ಬಿಹಾರದ ಕೆಲ ಪ್ರದೇಶಗಳಲ್ಲಿ ಹಿಂದೂಗಳು ಈಗಾಗಲೇ ಅಲ್ಪಸಂಖ್ಯಾತರಾಗಿದ್ದಾರೆ ಎಂದು ಅವರು ಹೇಳಿದರು.  

Partition: ಸ್ನೇಹಿತರನ್ನು 7 ದಶಕದ ಬಳಿಕ ಒಂದುಗೂಡಿಸಿದ Kartarpur Corridor!

ನಾವು  ಇತಿಹಾಸದಲ್ಲಿ ಹಿಂದೂಗಳು ಪಟ್ಟ ಕಷ್ಟಗಳಿಂದ ಪಾಠ ಕಲಿಯಬೇಕಿದೆ. ನಮಗೆ ಇತಿಹಾಸವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದ ವಿದ್ಯಾ ಭಾರತಿ(Vidya Bharati) ಹೇಳಿದರು.  ಮತ್ತೊಬ್ಬ ಅತಿಥಿ, ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಕಾರ್ಯದರ್ಶಿ, ಕುಮಾರ ರತ್ನಂ(Kumar Ratnam)ಮಾತನಾಡಿ ಭಾರತೀಯ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ಸಹಾಯಕವಾಗಿದೆ ಎಂದರು.

click me!