ಓದಿ ಏನು ಮಾಡೋದಿದೆ, ಪಾಸ್ ಅಗುವ ಆಸೆಯಿದೆ, ಪರೀಕ್ಷೆಯಲ್ಲಿ ವಿದ್ಯಾರ್ಥಿ ಬರೆದ ಕವನ ವೈರಲ್!

Published : Jul 04, 2024, 02:58 PM ISTUpdated : Jul 04, 2024, 03:14 PM IST
ಓದಿ ಏನು ಮಾಡೋದಿದೆ, ಪಾಸ್ ಅಗುವ ಆಸೆಯಿದೆ, ಪರೀಕ್ಷೆಯಲ್ಲಿ ವಿದ್ಯಾರ್ಥಿ ಬರೆದ ಕವನ ವೈರಲ್!

ಸಾರಾಂಶ

ಏನು ಮಾಡೋದಿದೆ ಓದಿ, ಒಂದು ದಿನ ಸಾಯಲೇಬೇಕು ನೋಡಿ, ಆದರೂ ಪಾಸ್ ಆಗುವ ಆಸೆಯಿದೆ..ಇದು ಗಣಿತ ಪರೀಕ್ಷೆಯಲ್ಲಿ ವಿದ್ಯಾರ್ಥಿ ಕೊನೆಯಲ್ಲಿ ಬರೆದ ಕವನ. ಈತನ ಮಾರ್ಕ್ಸ್, ಕವನ ಎಲ್ಲವೂ ಇದೀಗ ವೈರಲ್ ಆಗಿದೆ.  

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಬರೆದ ಉತ್ತರ ಹಲವು ಬಾರಿ ವೈರಲ್ ಆಗಿದೆ. ಉತ್ತರ ಪತ್ರಿಕೆಯ ಕೊನೆಯಲ್ಲಿ ಪಾಸ್ ಮಾಡುವಂತೆ ಮನವಿ, ಕೋರಿಕೆಗಳು,  ಪ್ರಶ್ನೆಗೆ ಅಸಂಬದ್ಧ ಉತ್ತರ, ಹೃದಯದ ಭಾಗಗಳನ್ನು ಬಿಡಿಸಿ ಚಿತ್ರಿಸಲು ಹೇಳಿದರೆ, ಗೆಳತಿಯರ ಹೆಸರು ಬರೆದ ಸೇರಿದಂತೆ ಹಲವು ಘಟನೆಗಳು ವೈರಲ್ ಆಗಿದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಗಣಿತ ಪರೀಕ್ಷೆಯ ಕೊನೆಯಲ್ಲಿ ತತ್ವಜ್ಞಾನಿಯಂತೆ ಕವನದ ಸಾಲು ಬರೆದಿದ್ದಾನೆ.  
ಏನು ಮಾಡೋದಿದೆ ಓದಿ, ಸಾಯಲೇಬೇಕು ಒಂದು ದಿನ ನೋಡಿ, ಆದರೂ ಪಾಸ್ ಆಗುವ ಆಸೆಯಿದೆ ಎಂಬ ಕವನ ಇದೀಗ ಭಾರಿ ವೈರಲ್ ಆಗಿದೆ.

ಶಿಕ್ಷಕ ರಾಕೇಶ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಹರ್ಷಾ ಬೆನಿವಾಲ್ ಗಣಿತ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ತೋರಿಸಿ ವಿಡಿಯೋ ಮಾಡಿದ್ದಾರೆ. ಹರ್ಷಾ ಬೆನಿವಾಲ್ ಗಣಿತ ಪರೀಕ್ಷೆಯಲ್ಲಿ ಪಡೆದುಕೊಂಡ ಅಂಕ, ಉತ್ತರ ಪತ್ರಿಕೆಯ ಕೊನೆಯಲ್ಲಿ ಬರೆದ ಕವನ ಸಾಲುಗಳನ್ನು ತೋರಿಸಿದ್ದಾರೆ. 

ಪರೀಕ್ಷೆಯಲ್ಲಿ ಹೃದಯದ ಚಿತ್ರ ಬಿಡಿಸಿ ಗೆಳೆತಿಯರ ಹೆಸರು ಬರೆದ ವಿದ್ಯಾರ್ಥಿ, ಕಕ್ಕಾಬಿಕ್ಕಿಯಾದ ಟೀಚರ್!

ಹರ್ಷ ಬೆನಿವಾಲ್ ತತ್ವಜಾನಿ ರೀತಿ ಕವನ ಬರೆದಿದ್ದಾರೆ. ಅದು ಕೂಡು ಪ್ರಾಸಬದ್ದವಾಗಿ ಕವನ ಬರೆದಿದ್ದಾನೆ. ಟೀಚರ್ ರಾಕೇಶ್ ಶರ್ಮಾ ಈ ಕುರಿತ ವಿಡಿಯೋದಲ್ಲಿ, ಹರ್ಷಾ ಬೆನಿವಾಲ್ ಪ್ರತಿ ಪ್ರಶ್ನೆಗೆ ಪಡೆದ ಅಂಕದ ಕುರಿತು ವಿವರಿಸಿದ್ದಾರೆ. ಉತ್ತರ ಪತ್ರಿಕೆಯ ಕೊನೆಯ ಪುಟದಲ್ಲಿ ಈ ಕವನ ಬರೆದಿದ್ದಾನೆ. ಹಿಂದಿಯಲ್ಲಿ ಬರೆದ ಈ ಕವನವನ್ನು ರಾಕೇಶ್ ಸರ್ಮಾ ಓದಿ ಹೇಳಿದ್ದಾರೆ. ಪಡ್ ಪಡ್ ಕೆ ಕ್ಯಾ ಕರ್ನಾ ಹೈ,  ಏಕ್ ದಿನ ತೋ ಮರ್ನಾ ಹೈ, ಫಿರ್ ಬಿ ಪಾಸ್ ಹೋನೆ ಕಿ ಇಚ್ಚಾ ಹೈ ಎಂದು ಕೊನೆಯಲ್ಲಿ ಬರೆದಿದ್ದಾನೆ. ಈ ಕವನ ಓದಿದ ಟೀಚರ್ ರಾಕೇಶ್ ಶರ್ಮಾ, ಚಲೋ ಬೇಟಾ ನೀನು ಪಾಸ್ ಎಂದು ಅಂಕ ಹಾಕಿದ್ದಾರೆ. 

 

 

ಇದು ವೈರಲ್ ವಿಡಿಯೋಗಾಗಿ ಮಾಡಿದ ಸ್ಟಂಟ್ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಕಾರಣ ಹರ್ಷ ಬೆನಿವಾಲ್ ಅನ್ನೋ ವ್ಯಕ್ತಿ ಕಮೆಂಟ್ ಮಾಡಿದ್ದಾನೆ. ಧನ್ಯವಾದಗಳು ಎಂದು ಕಮೆಂಟ್ ಮಾಡಲಾಗಿದೆ. ಹೀಗಾಗಿ ಈ ಪ್ರಸಂಗ ಕೂಡ ಕಟ್ಟು ಕತೆ ಅನ್ನೋದು ಬಹಿರಂಗವಾಗಿದೆ.

ಇಸ್ತ್ರಿ ಪೆಟ್ಟಿಗೆ-ಮಹಿಳೆ, ಬಿಸಿಯಾದ್ರೆ ಬೆಂಕಿ, ಪರೀಕ್ಷೆಯಲ್ಲಿ ವಿದ್ಯಾರ್ಥಿ ಉತ್ತರಕ್ಕೆ ಫುಲ್ ಮಾರ್ಕ್ಸ್!

ಇದೇ ರೀತಿ ಹಲವು ಉತ್ತರ ಪತ್ರಿಕೆಯಗಳು ವೈರಲ್ ಆಗಿದೆ. ಇತ್ತೀಚೆಗಷ್ಟೆ ವಿಜ್ಞಾನದ ಪರೀಕ್ಷೆಯಲ್ಲಿ ಹೃದಯದ ಚಿತ್ರ ಬಿಡಿಸಿ ಭಾಗಗಳು ಹಾಗೂ ಅದರ ಕಾರ್ಯಗಳನ್ನು ವಿವರಿಸಲು ಕೇಳಲಾಗಿತ್ತು. ಇದಕ್ಕೆ ಹೃದಯದ ಚಿತ್ರ ಬಿಡಿಸಿದ ವಿದ್ಯಾರ್ಥಿ, ಅಪದಮನಿ, ಅಭಿದಮನಿ ಸೇರಿದಂತೆ ಹೃದಯ ಕೋಣೆಗಳಲ್ಲಿ ಮಾಜಿ ಗೆಳೆತಿಯರ ಹೆಸರು ಬರೆಯಲಾಗಿತ್ತು. ಬಳಿಕ ಮಾಜಿ ಗೆಳೆಯರು ಪ್ರತಿ ಫೋನ್ ಮಾಡುತ್ತಾರೆ. ಮಾತನಾಡುತ್ತಾರೆ ಎಂದು ಅವರ ಕಾರ್ಯಗಳನ್ನು ಬರೆಯಲಾಗಿತ್ತು. ಈ ಉತ್ತರ ಪತ್ರಿಕೆ ಕೂಡ ವೈರಲ್ ಆಗಿತ್ತು. ಆದರೆ ಇದು ವೈರಲ್ ವಿಡಿಯೋ ಮಾಡಲು ಸೃಷ್ಟಿಸಿದ ನಕಲಿ ಉತ್ತರ ಪತ್ರಿಕೆ ಅನ್ನೋ ಟೀಕೆಯೂ ಕೇಳಿಬಂದಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!