8 ತಿಂಗಳ ಹಿಂದೆ ಕಣ್ಮರೆ ಆಗಿದ್ದ ಯೋಧನ ಮೃತದೇಹ ಪತ್ತೆ!

By Suvarna NewsFirst Published Aug 17, 2020, 10:03 AM IST
Highlights

8 ತಿಂಗಳ ಹಿಂದೆ ಕಣ್ಮರೆ ಆಗಿದ್ದ ಯೋಧನ ಮೃತದೇಹ ಪತ್ತೆ| : ಹಿಮಚ್ಛಾದಿತ ಪ್ರದೇಶದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದಿದ್ದ ಯೋಧ| ವಾಲ್ದಾರ್‌ ರಾಜೇಂದ್ರ ಸಿಂಗ್‌ ನೇಗಿ ಅವರೇ ಆ ಯೋಧ

ಡೆಹ್ರಾಡೂನ್(ಆ.17): ಹಿಮಚ್ಛಾದಿತ ಪ್ರದೇಶದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು, ಕಳೆದ ಜನವರಿಯಿಂದ ನಾಪತ್ತೆಯಾಗಿದ್ದ ಭಾರತೀಯ ಸೇನೆಯ ಯೋಧರೊಬ್ಬರ ಮೃತದೇಹ ಶನಿವಾರ ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪತ್ತೆಯಾಗಿದೆ.

ಲಕ್ಷ್ಮೇಶ್ವರ: ಸುರಿವ ಮಳೇಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ..!

ಹವಾಲ್ದಾರ್‌ ರಾಜೇಂದ್ರ ಸಿಂಗ್‌ ನೇಗಿ ಅವರೇ ಆ ಯೋಧ. 36 ವರ್ಷದ ಯೋಧ ನೇಗಿ ಕಳೆದ ಜನವರಿಯಲ್ಲಿ ಕಾಶ್ಮೀರದ ಎಲ್‌ಒಸಿ ಬಳಿಯ ಗುಲ್ಮಾರ್ಗ್‌ ಪ್ರದೇಶದಲ್ಲಿ ಸೇನಾ ಕಾರಾರ‍ಯಚರಣೆಯಲ್ಲಿ ನಿರತರಾಗಿದ್ದ ವೇಳೆ ಹಿಮಚ್ಛಾದಿತ ಪ್ರದೇಶದಿಂದ ಆಕಸ್ಮಿಕವಾಗಿ ಜಾರಿ ಬಿದ್ದು ಕಾಣೆಯಾಗಿದ್ದರು.

ಲಡಾಖ್‌ ಗಡಿಯಿಂದ ಚೀನಾ ಸೇನೆ ಇನ್ನೂ ಹೋಗಿಲ್ಲ: ಭಾರತ

ಸೇನೆ ಇವರನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿ, ‘ಹುತಾತ್ಮ’ ಎಂದು ಘೋಷಿಸಿತ್ತು. ಆದರೆ ಇವರ ಕುಟುಂಬಸ್ಥರು ನೇಗಿ ಅವರ ಸಾವಿನ ಸುದ್ದಿಯನ್ನು ಅಲ್ಲಗಳೆದಿದ್ದರು. ಆದರೆ ಶನಿವಾರ ಸೇನಾ ಘಟಕ ಕಾರಾರ‍ಯಚರಣೆ ನಡೆಸಿ ನೇಗಿ ಅವರ ಮೃತ ದೇಹವನ್ನು ಪತ್ತೆ ಹಚ್ಚುವಲ್ಲಿ ಸಫಲವಾಗಿದೆ. ನೇಗಿ 2001ರಲ್ಲಿ ಭಾರತೀಯ ಸೇನೆಯನ್ನು ಸೇರಿದ್ದರು.

click me!