Breaking ದೆಹಲಿಯಲ್ಲಿ ಪ್ರಬಲ ಭೂಕಂಪ, 5 ಸೆಕೆಂಡ್ ಕಂಪಿಸಿದ ಭೂಮಿ!

By Suvarna NewsFirst Published Nov 12, 2022, 8:28 PM IST
Highlights

ದೆಹಲಿಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಇತ್ತೀಚೆಗೆ ನೇಪಾಳದಲ್ಲಿನ ಭೂಕಂಪನಕ್ಕೆ ದೆಹಲಿಯಲ್ಲಿ ಭೂಮಿ ನಡುಗಿತ್ತು. ಇದೀಗ ದೆಹಲಿಯಲ್ಲಿ 5 ಸೆಕೆಂಡ್ ಭೂಮಿ ಕಂಪಿಸಿದೆ.
 

ನವದೆಹಲಿ(ನ.12) ರಾಷ್ಟ್ರ ರಾಜಧಾನಿ ದೆಹಲಿ ಮಂದಿಗೆ ಮತ್ತೆ ಭೂಕಂಪನದ ಶಾಕ್ ಎದುರಾಗಿದೆ. ಇಂದು(ನ.12) ರಾತ್ರಿ 8 ಗಂಟೆಗೆ ಹೊತ್ತಿಗೆ ದೆಹಲಿಯಲ್ಲಿ ಭೂಕಂಪನ ಸಂಭವಿಸಿದೆ. ಸುಮಾರು 5 ಸೆಕೆಂಡ್‌ಗೂ ಹೆಚ್ಚು ಕಾಲ ಭೂಮಿ ಕಂಪಿಸಿದೆ. ಪ್ರಬಲ ಭೂಕಂಪನ ಅನುಭವ ಆಗಿದೆ. ಭೂಮಿ ಕಂಪಿಸುತ್ತಿದ್ದಂತೆ ಮನೆ, ಕಚೇರಿ, ಕಟ್ಟದಲ್ಲಿದ್ದವರು ಹೊರಗೆ ಒಡಿ ಬಂದಿದ್ದಾರೆ. ಹಲವರು ಹೊರಗೆ ಬರಲಾಗದೆ ಒದ್ದಾಡಿದ್ದಾರೆ. ದೆಹಲಿ, ಗುರುಗ್ರಾಂ, ನೋಯ್ಡಾದಲ್ಲೂ ಭೂಮಿ ಕಂಪನವಾಗಿದೆ. ನೇಪಾಳದಲ್ಲಿ ಮತ್ತೆ ಭೂಕಂಪನವಾಗಿದೆ. ಇದರ ತೀವ್ರತೆಗೆ ದೆಹಲಿಯಲ್ಲೂ ಭೂಮಿ ಕಂಪಿಸಿದೆ. ಇಂದು ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪನವಾಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಭೂಮಿ ಕಂಪಿಸಿ ಆತಂಕಕ್ಕೆ ಕಾರಣವಾಗಿದೆ.

ಸಂಜೆ 7.57ಕ್ಕೆ ನೇಪಾಳದಲ್ಲಿ 5.4ರ ತೀವ್ರತೆಯಲ್ಲಿ ಭೂಕಂಪನವಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರರಾಜಧಾನಿಯಲ್ಲಿ ಭೂಮಿ ಕಂಪಿಸಿದೆ.  ಅದೃಷ್ಟವಶಾತ್ ಇದುವರೆಗೆ ಯಾವದೇ ಸಾವು ನೋವು ಸಂಭವಿಸಿಲ್ಲ. ಆದರೆ ದೆಹಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಹಲವರು ದೆಹಲಿ ತೊರೆಯವು ಕುರಿತು ಚರ್ಚಿಸಿದ್ದಾರೆ. 

ಭೂಕಂಪನದ ಭಯಕ್ಕೆ ಮನೆ ಬಿಟ್ಟು ಓಡಿದ ಖ್ಯಾತ ನಟ; ಸ್ನೇಹಿತನ ಮನೆಯಲ್ಲಿ ಆಶ್ರಯ

ಮಂಗಳವಾರ ನೇಪಾಳದಲ್ಲಿ 6.3ರ ತೀವ್ರತೆ ಭೂಕಂಪ
ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದ ಕಾರಣದಿಂದ 6 ಮಂದಿ ಮೃತಪಟ್ಟಿರುವ ಘಟನೆ ನೇಪಾಳದ ಭಾಗದಲ್ಲಿ ಮಂಗಳವಾರ(ನ.08) ಮಧ್ಯರಾತ್ರಿ ಸಂಭವಿಸಿತ್ತು. ಈ ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.3ರಷ್ಟುದಾಖಲಾಗಿತ್ತು. ಇದರ ಪರಿಣಾಮ ಉತ್ತರ ಭಾರತ ಮತ್ತು ನೇಪಾಳದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.

ಕೆಳ ಹಿಮಾಲಯ ಭಾಗದಲ್ಲಿ ಕಳೆದ ಐದಾರು ದಿನಗಳಿಂದ ಭೂಕಂಪಗಳು ಸಂಭವಿಸುತ್ತಿದ್ದು, ಮಂಗಳವಾರ ರಾತ್ರಿ 1.57ರ ಸುಮಾರಿಗೆ 6.3 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಈ ಪ್ರದೇಶ ಭಾರತದ ಪಿತೋರ್‌ಗಢದಿಂದ 90 ಕಿ.ಮೀ. ದೂರದಲ್ಲಿದೆ. ಲ್ಲದೇ ಉತ್ತರಾಖಂಡ ಮತ್ತು ನೇಪಾಳ ಭಾಗದಲ್ಲೂ ಮುಂಜಾನೆ 3.15 ಮತ್ತು 6.27ರ ಸುಮಾರಿಗೆ ಕ್ರಮವಾಗಿ 3.6 ಮತ್ತು 4.3 ಮ್ಯಾಗ್ನಿಟ್ಯೂಡ್‌ನಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ ಹೇಳಿದೆ.

ಭೂಕಂಪನಕ್ಕೆ ತರ ತರ ನಡುಗಿದ ಉತ್ತರ: ನೇಪಾಳದಲ್ಲೂ ಕಂಪಿಸಿದ ಧರಣಿ

ನೇಪಾಳದಲ್ಲಿ ಸಂಭವಿಸಿರುವ ಪ್ರಭಲ ಭೂಕಂಪಕ್ಕೂ ಮೊದಲು 2 ಮಧ್ಯಮ ಭೂಕಂಪಗಳು ಸಂಭವಿಸಿವೆ. ಮಂಗಳವಾರ ರಾತ್ರಿ 9.07ರ ಸುಮಾರಿಗೆ 5.7 ಮ್ಯಾಗ್ನಿಟ್ಯೂಡ್‌ ಮತ್ತು 9.56ರ ಸುಮಾರಿಗೆ 4.1 ಮ್ಯಾಗ್ನಿಟ್ಯೂಡ್‌ ಪ್ರಮಾಣದ ಭೂಕಂಪ ಸಂಭವಿಸಿದೆ. ದೋಟಿಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ 6 ಜನರು ಸಾವನ್ನಪ್ಪಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ದೆಹಲಿ, ಗಾಜಿಯಾಬಾದ್‌ ಮತ್ತು ಗುರುಗ್ರಾಮ, ಲಖನೌಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.

click me!