ಮುಂಬೈ ಏರ್‌ಪೋರ್ಟ್‌ನಲ್ಲಿ ಶಾರುಖ್‌ ಖಾನ್‌ಗೆ ಕಸ್ಟಮ್ಸ್‌ ತಡೆ, 7 ಲಕ್ಷ ರೂಪಾಯಿ ದಂಡ!

Published : Nov 12, 2022, 03:38 PM IST
ಮುಂಬೈ ಏರ್‌ಪೋರ್ಟ್‌ನಲ್ಲಿ ಶಾರುಖ್‌ ಖಾನ್‌ಗೆ ಕಸ್ಟಮ್ಸ್‌ ತಡೆ, 7 ಲಕ್ಷ ರೂಪಾಯಿ ದಂಡ!

ಸಾರಾಂಶ

ಶಾರ್ಜಾದಿಂದ 18 ಲಕ್ಷ ರೂಪಾಯಿ ವಾಚ್‌ ತೆಗೆದುಕೊಂಡು ಬಂದಿದ್ದ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್‌ ತಡೆ ಹಾಕಿದ್ದಾರೆ. ಈ ವಾಚ್‌ಗಳಿಗಾಗಿ ಶಾರುಖ್‌ ಖಾನ್‌ಗೆ ಅಂದಾಜು 7 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.  

ಮುಂಬೈ (ನ.12): ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಅವರನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ ಏರ್‌ ಇಂಟಲಿಜೆನ್ಸ್‌ ಯುನಿಟ್‌ ತಡೆದು 7 ಲಕ್ಷ ರೂಪಾಯಿ ದಂಡ ಹಾಕಿದೆ. ಏರ್‌ಪೋರ್ಟ್‌ನಲ್ಲಿರುವ ವಾಯು ಗುಪ್ತಚರ ಘಟಕದ ಮೂಲಗಳು ಈ ಕುರಿತಾಗಿ ಮಾಹಿತಿಯನ್ನು ನೀಡಿದೆ. ಶುಕ್ರವಾರ ರಾತ್ರಿ ಶಾರ್ಜಾದಿಂದ ಹೊರಟಿದ್ದ ಶಾರುಖ್‌ ಖಾನ್‌ ಶನಿವಾರ ಬೆಳಗಿನ ಜಾವ ಮುಂಬೈಗೆ ತಲುಪಿದ್ದರು ಈ ವೇಳೆ ಅವರು ತಮ್ಮ ಬ್ಯಾಗ್‌ನ ಕವರ್‌ನಲ್ಲಿ 18 ಲಕ್ಷ ರೂಪಾಯಿ ಮೊತ್ತದ ದುಬಾರಿ ವಾಚ್‌ಗಳನ್ನು ಹೊಂದಿದ್ದರು. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ ಬಳಿಕ ಶಾರುಖ್‌ ಖಾನ್ 6.83 ಲಕ್ಷ ರೂಪಾಯಿ ದಂಡವನ್ನು ಕಟ್ಟಿ, ವಾಚ್‌ಅನ್ನು ತೆಗೆದುಕೊಂಡು ಹೋಗಿದ್ದಾರೆ. ಶುಕ್ರವಾರ ಮಧ್ಯರಾತ್ರಿ 12.30ರ ವೇಳೆಗೆ ಶಾರುಖ್‌ ಖಾನ್‌ ವೇಳೆಗೆ ಖಾಸಗಿ ಚಾರ್ಟೆಡ್‌ ವಿಮಾನದಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಂದಾಜು ಮಧ್ಯಾರಾತ್ರಿ 1 ಗಂಟೆಯ ವೇಳೆಗೆ, ಟರ್ಮಿನಲ್‌-3ಯ ರೆಡ್‌ ಚಾನೆಲ್‌ನಿಂದ ಹೊರಬರುವ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಅವರನ್ನು ತಡೆದಿದ್ದಾರೆ. ಅವರ ಬ್ಯಾಗ್‌ಅನ್ನು ಪರಿಶೀಲನೆ ಮಾಡಿದಾಗ ಬಬುನ್‌ & ಜುರ್ಬಾಕ್‌ ವಾಚ್‌, 6 ಬಾಕ್ಸ್‌ಗಳ ರೊಲೆಕ್ಸ್‌ ವಾಚ್‌, ಸ್ಪಿರಿಟ್‌ ಬ್ರ್ಯಾಂಡ್‌ ವಾಚ್‌, ಆಪಲ್‌ ಸರಣಿಯ ವಾಚ್‌ಗಳು ಪತ್ತೆಯಾಗಿದೆ. ಅದರೊಂದಿಗೆ ಕೆಲವೊಂದು ವಾಚ್‌ಗಳ ಖಾಲಿ ಬಾಕ್ಸ್‌ಗಳು ಪತ್ತೆಯಾಗಿವೆ.

ದಂಡ ಕಟ್ಟಿದ ಬಾಡಿಗಾರ್ಡ್‌: ವಿಮಾನ ನಿಲ್ದಾಣದಲ್ಲಿ ಒಂದು ಗಂಟೆ ಕಾರ್ಯಾಚರಣೆಯ ನಂತರ ಶಾರುಖ್ ಮತ್ತು ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರನ್ನು ಕಸ್ಟಮ್ಸ್‌ ಬಿಡುಗಡೆ ಮಾಡಿದೆ. ಆದರೆ ಶಾರುಖ್ ಅವರ ಅಂಗರಕ್ಷಕ ರವಿ ಮತ್ತು ತಂಡದ ಇತರ ಸದಸ್ಯರನ್ನು ಪೊಲೀಸರು ತಡೆ ಹಿಡಿದಿದ್ದಾರೆ. ಮಾಹಿತಿ ಪ್ರಕಾರ ಶಾರುಖ್ ಅಂಗರಕ್ಷಕ ರವಿ 6 ಲಕ್ಷ 83 ಸಾವಿರ ರೂಪಾಯಿ ದಂಡ ಪಾವತಿ ಮಾಡಿದ್ದಾರೆ. ಕಸ್ಟಮ್ಸ್ ಪ್ರಕ್ರಿಯೆ ಪೂರ್ಣಗೊಳ್ಳಲು ಶನಿವಾರ ಬೆಳಗಿನ ಜಾವದವರೆಗೆ ಬೇಕಾಯಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಪ್ರಕ್ರಿಯೆ ಮುಗಿದ ಬಳಿಕ ಕಸ್ಟಮ್ಸ್ ಅಧಿಕಾರಿಗಳು ರವಿಯನ್ನು ಬಿಡುಗಡೆ ಮಾಡಿದರು. ದಂಡದ ಮೊತ್ತವನ್ನು ಶಾರುಖ್ ಅವರ ಕ್ರೆಡಿಟ್ ಕಾರ್ಡ್‌ನಿಂದಲೇ ಪಾವತಿಸಲಾಗಿದೆ ಎಂದು ಹಲವಾರು ವರದಿಗಳಲ್ಲಿ ಹೇಳಲಾಗಿದೆ.

Imran Khan ನಟನೆಯಲ್ಲಿ ಶಾರುಖ್‌, ಸಲ್ಮಾನ್‌ ಅವರನ್ನೂ ಮೀರಿಸುತ್ತಾರೆ: ಪಾಕ್‌ ನಾಯಕ

ಪುಸ್ತಕ ಬಿಡುಗಡೆಗಾಗಿ ದುಬೈಗೆ ಹೋಗಿದ್ದ ಶಾರುಖ್‌: ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್‌ ನವೆಂಬರ್‌ 11 ರಂದು ದುಬೈಗೆ ಪುಸ್ತಕ ಬಿಡುಗಡೆ ಸಮಾರಂಭಕ್ಕಾಗಿ ತೆರಳಿದ್ದರು. ಅಲ್ಲಿ ಶಾರ್ಜಾ ಇಂಟರ್‌ನ್ಯಾಶನಲ್ ಬುಕ್ ಫೇರ್ 2022 ರ 41 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ಗ್ಲೋಬಲ್ ಐಕಾನ್ ಆಫ್ ಸಿನಿಮಾ ಮತ್ತು ಕಲ್ಚರಲ್ ನಿರೂಪಣಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ಹಾಜರಾಗಲು, ಶಾರುಖ್ ತಮ್ಮ ತಂಡವನ್ನು ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರು. ಅದೇ ವಿಮಾನ ಮಲಕ ಅವರ ಶುಕ್ರವಾರ ತಡರಾತ್ರಿ ಮುಂಬೈಗೆ ಮರಳಿದ್ದರು.

 

 

ಅತಿ ಕೆಟ್ಟದಾಗಿ ನೆಲಕಚ್ಚಿದ ಶಾರುಖ್‌ ಸಿನಿಮಾಗಳು; ಇವುಗಳ ಕಲೆಕ್ಷನ್‌ ಎಷ್ಷು ಗೊತ್ತಾ?

ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಯುಎಇಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಿಂಗ್ ಖಾನ್ ಸಿನಿಮಾಗೆ ನೀಡಿದ ಕೊಡುಗೆ ಮತ್ತು ಜಾಗತಿಕ ಐಕಾನ್ ಆಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.  ನವೆಂಬರ್ 11 ರಂದು, ಶಾರುಖ್ ಯುಎಇಯಲ್ಲಿನ ಎಕ್ಸ್‌ಪೋ ಸೆಂಟರ್‌ಗೆ ಹಾಜರಾಗಿದ್ದರು, ಅಲ್ಲಿ ಶಾರ್ಜಾ ಇಂಟರ್‌ನ್ಯಾಶನಲ್ ಬುಕ್ ಫೇರ್ 2022 ರ 41 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ಗ್ಲೋಬಲ್ ಐಕಾನ್ ಆಫ್ ಸಿನಿಮಾ ಮತ್ತು ಕಲ್ಚರಲ್ ನಿರೂಪಣೆ ಪ್ರಶಸ್ತಿಯನ್ನು ನೀಡಿ ಅಲ್ಲಿನ ಸಂಸ್ಥೆ ಗೌರವಿಸಿತ್ತು. ಈ ಕಾರ್ಯಕ್ರಮಕ್ಕೆ ಅವರು  ಕಪ್ಪು ಬಣ್ಣದ ಬ್ಲೇಜರ್‌ ಧರಿಸಿ ಹೊರಟಿದ್ದರು. ಕಾರ್ಯಕ್ರಮದ ಚಿತ್ರಗಳು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ