Haryana: ವಿಎಚ್‌ಪಿ ಶೋಭಾಯಾತ್ರೆ ಮೇಲೆ ದಾಳಿ ಪ್ರೀ ಪ್ಲ್ಯಾನ್‌; ಕಲ್ಲು, ಬಂದೂಕು, ಲಾಠಿ ಎಲ್ಲವೂ ರೆಡಿ ಇತ್ತು: ಗೃಹ ಸಚಿವ

By BK Ashwin  |  First Published Aug 5, 2023, 9:37 AM IST

ಗುಡ್ಡಗಳಿಂದ ಗುಂಡುಗಳನ್ನು ಹಾರಿಸಿರುವುದು ಮತ್ತು ಕಟ್ಟಡಗಳ ಮೇಲ್ಛಾವಣಿಯಲ್ಲಿ ಸಂಗ್ರಹಿಸಲಾದ ಕಲ್ಲುಗಳು ನುಹ್ ಹಿಂಸಾಚಾರವನ್ನು ಮೊದಲೇ ಪ್ಲ್ಯಾನ್‌ ಮಾಡಲಾಗಿತ್ತು ಎಂದು ಸೂಚಿಸುತ್ತದೆ ಎಂದು ಹರ್ಯಾಣ ಗೃಹ ಸಚಿವರು ಹೇಳಿದ್ದಾರೆ. 


ಚಂಡೀಗಢ (ಆಗಸ್ಟ್‌ 5, 2023): ಹರ್ಯಾಣದ ನುಹ್‌ನಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 202 ಜನರನ್ನು ಬಂಧಿಸಲಾಗಿದೆ ಮತ್ತು 80 ಜನರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹರ್ಯಾಣ  ಗೃಹ ಸಚಿವ ಅನಿಲ್ ವಿಜ್ ಶುಕ್ರವಾರ ಹೇಳಿದ್ದಾರೆ. ಇನ್ನು, ನುಹ್ ಹಿಂಸಾಚಾರವನ್ನು ಮೊದಲೇ ಪ್ಲ್ಯಾನ್‌ ಮಾಡಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.

ಗುಡ್ಡಗಳಿಂದ ಗುಂಡುಗಳನ್ನು ಹಾರಿಸಿರುವುದು ಮತ್ತು ಕಟ್ಟಡಗಳ ಮೇಲ್ಛಾವಣಿಯಲ್ಲಿ ಸಂಗ್ರಹಿಸಲಾದ ಕಲ್ಲುಗಳು ನುಹ್ ಹಿಂಸಾಚಾರವನ್ನು ಮೊದಲೇ ಪ್ಲ್ಯಾನ್‌ ಮಾಡಲಾಗಿತ್ತು ಎಂದು ಸೂಚಿಸುತ್ತದೆ ಎಂದೂ ಅವರು ಹೇಳಿದರು. ಒಟ್ಟಾರೆಯಾಗಿ, ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 102 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. 

Tap to resize

Latest Videos

ಇದನ್ನು ಓದಿ: ವಿಶ್ವ ಹಿಂದು ಪರಿಷತ್‌ ಶೋಭಾಯಾತ್ರೆಯ ವೇಳೆ ಕಲ್ಲುತೂರಾಟ, 40ಕ್ಕೂ ಅಧಿಕ ವಾಹನಗಳಿಗೆ ಬೆಂಕಿ!

"ಹಿಂಸಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡಲಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ" ಎಂದು ಗೃಹ ಸಚಿವ ಅನಿಲ್‌ ವಿಜ್ ಅಂಬಾಲಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದು, ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ. "ಇದೊಂದು ದೊಡ್ಡ ಗೇಮ್ ಪ್ಲಾನ್.. ಪ್ರತಿಯೊಬ್ಬರ ಕೈಯಲ್ಲೂ ಲಾಠಿ ಇತ್ತು. ಇವುಗಳನ್ನು ಉಚಿತವಾಗಿ ಹಂಚಲಾಗುತ್ತಿದ್ದರಾ? ಯಾರೋ ಇವುಗಳನ್ನು ವ್ಯವಸ್ಥೆ ಮಾಡಿರಬೇಕು. ಗುಂಡುಗಳನ್ನು ಹಾರಿಸಲಾಗುತ್ತಿದೆ. ಶಸ್ತ್ರಾಸ್ತ್ರಗಳು ಎಲ್ಲಿಂದ ಬಂದವು? ನಾವು ಆಳವಾಗಿ ತನಿಖೆ ಮಾಡುತ್ತೇವೆ’’ ಎಂದು ಅವರು ಹೇಳಿದರು.

ಹಿಂಸಾಚಾರವನ್ನು ರೂಪಿಸಲಾಗಿದೆ ಮತ್ತು ಅದರ ಹಿಂದೆ ಮಾಸ್ಟರ್ ಮೈಂಡ್ ಇದ್ದಾರೆ ಎಂದು ಸಚಿವರು ಮಂಗಳವಾರವೂ ಹೇಳಿದ್ದರು. ಆದರೆ, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ, ನುಹ್ ಪೊಲೀಸ್ ಅಧೀಕ್ಷಕರು ಘರ್ಷಣೆಯ ಹಿಂದೆ ಮಾಸ್ಟರ್‌ಮೈಂಡ್ ಇರುವ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಿದರು. ನುಹ್ ಪೊಲೀಸ್ ಅಧೀಕ್ಷಕ ನರೇಂದ್ರ ಸಿಂಗ್ ಬಿಜಾರ್ನಿಯಾ ಮಾತನಾಡಿ, ಇದುವರೆಗಿನ ತನಿಖೆಯು ವಿಭಿನ್ನ ಅಂಶಗಳ ಒಳಗೊಳ್ಳುವಿಕೆಯನ್ನು ಸೂಚಿಸಿದೆ. ಅವರನ್ನು ಗುರುತಿಸಿ ಬಂಧಿಸಲಾಗುತ್ತಿದೆ ಎಂದೂ ತಿಳಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

ಇದೇ ವೇಳೆ, ಅಪರಾಧಿಗಳ ಆಸ್ತಿಗಳನ್ನು ಬುಲ್ಡೋಜರ್ ಮಾಡಲು ಆಡಳಿತವು ಮುಂದಾಗುತ್ತದೆಯೇ ಎಂದು ಸಚಿವರನ್ನು ಕೇಳಿದಾಗ, "ಅಗತ್ಯವಿರುವಲ್ಲಿ ಬುಲ್ಡೋಜರ್ ಅನ್ನು ಬಳಸಲಾಗುವುದು". ಬುಲ್ಡೋಜರ್ ಚಿಕಿತ್ಸೆಯ ಭಾಗವಾಗಿದೆ ಎಂದೂ ಹೇಳಿದರು. ನುಹ್ ಮತ್ತು ಇತರ ಭಾಗಗಳಲ್ಲಿ ಆರೋಪಿತ ಅಪರಾಧಿಗಳ ರಚನೆಗಳನ್ನು ಧ್ವಂಸಗೊಳಿಸಲು ಹರಿಯಾಣ ಅಧಿಕಾರಿಗಳು ಈ ಹಿಂದೆಯೂ ಬುಲ್ಡೋಜರ್‌ಗಳನ್ನು ಬಳಸಿದ್ದಾರೆ.

ಈ ಮಧ್ಯೆ, ನುಹ್‌ನಲ್ಲಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿರುವುದರ ಬಗ್ಗೆಯೂ ಗೃಹ ಸಚಿವರು ಮಾತನಾಡಿದ್ದು, "ನಾವು ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ." ಪೊಲೀಸ್ ಠಾಣೆಯ ಮೇಲೆ ಯಾರು ದಾಳಿ ಮಾಡಿದ್ದಾರೆ ಮತ್ತು ಅವರು ಯಾವ ದಾಖಲೆಗಳನ್ನು ನಾಶಮಾಡಲು ಬಯಸಿದ್ದರು ಎಂಬುದನ್ನು ಕಂಡುಕೊಳ್ಳಲು ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಕೇಸ್‌: ಕಾಂಗ್ರೆಸ್‌ ಶಾಸಕ ಗೋಪಾಲ್‌ ಕಾಂಡಾ ಖುಲಾಸೆಗೊಳಿಸಿದ ಕೋರ್ಟ್‌

ನುಹ್ ಹೊಸ ಜಮ್ತಾರಾ ಆಗುತ್ತಿದೆ ಎಂದೂ ಅವರು ಹೇಳಿದರು. ಜಾರ್ಖಂಡ್ ಜಿಲ್ಲೆಯು ಭಾರತದ ಸೈಬರ್ ಕ್ರೈಮ್ ಹಬ್ ಎಂದು ಜಮ್ತಾರಾ ಕುಖ್ಯಾತವಾಗಿದೆ. ಸೈಬರ್ ಕ್ರಿಮಿನಲ್‌ಗಳ ವಿರುದ್ಧ ಈ ವರ್ಷದ ಆರಂಭದಲ್ಲಿ ಬೃಹತ್ ಶಿಸ್ತುಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು ಭಾರತದಾದ್ಯಂತ ಜನರನ್ನು ವಂಚಿಸಿದ್ದಕ್ಕಾಗಿ ಹಲವಾರು ಜನರನ್ನು ಬಂಧಿಸಲಾಯಿತು.

ಇದನ್ನೂ ಓದಿ: ರೈತರನ್ನು ನಾವು ಅರ್ಥ ಮಾಡಿಕೊಂಡ್ರೆ ದೇಶದ ಸಮಸ್ಯೆಗೆ ಪರಿಹಾರ: ರಾಹುಲ್‌ ಗಾಂಧಿ

click me!