ಜಹಾಂಗೀರ್ಪುರಿಯಲ್ಲಿ ಮತ್ತೆ ಕಲ್ಲು ತೂರಾಟ: ಓರ್ವನ ಬಂಧನ

Published : Apr 18, 2022, 04:37 PM IST
ಜಹಾಂಗೀರ್ಪುರಿಯಲ್ಲಿ ಮತ್ತೆ ಕಲ್ಲು ತೂರಾಟ: ಓರ್ವನ ಬಂಧನ

ಸಾರಾಂಶ

ಪ್ರಕ್ಷುಬ್ಧ ಜಹಾಂಗೀರ್‌ಪುರಿಯಲ್ಲಿ ಮತ್ತೆ ಕಲ್ಲು ತೂರಾಟ ಆರೋಪಿಯ ವಿಚಾರಣೆಗೆ ಹೋಗಿದ್ದಕ್ಕೆ ಆಕ್ರೋಶ ಗುಂಡು ಹಾರಿಸಿದ್ದ ಆರೋಪಿ ಮನೆಗೆ ಹೋಗಿದ್ದ ಪೊಲೀಸರು  

ದೆಹಲಿ: ಹಿಂಸಾಚಾರ ಸಂಭವಿಸಿದ ಎರಡು ದಿನಗಳ ನಂತರ ಮತ್ತೆ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಕಲ್ಲು ತೂರಾಟ ನಡೆದಿದ್ದು ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಹನುಮ ಜಯಂತಿಯಂದು ಶೋಭಾ ಯಾತ್ರೆಯ ಸಂದರ್ಭದಲ್ಲಿ ಕೋಮು ಘರ್ಷಣೆ ಸಂಭವಿಸಿದ ಎರಡು ದಿನಗಳ ನಂತರ ಸೋಮವಾರ ಮಧ್ಯಾಹ್ನ ಜಹಾಂಗೀರಪುರಿಯಲ್ಲಿ ಹೊಸ ಕಲ್ಲು ತೂರಾಟದ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರದ ನಡೆದ ಘರ್ಷಣೆಯ ಸ್ಥಳಕ್ಕೆ ಸಮೀಪವಿರುವ ಛಾವಣಿಯ ಮೇಲಿನಿಂದ ಕಲ್ಲುಗಳು ಮತ್ತು ಇಟ್ಟಿಗೆಗಳನ್ನು ಎಸೆಯಲಾಯಿತು ಮತ್ತು ಘಟನೆಯ ನಂತರ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಅಧಿಕಾರಿಗಳು ಆ ಪ್ರದೇಶವನ್ನು ಸುತ್ತುವರೆದರು. ಈ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ (ವಾಯುವ್ಯ) ಉಷಾ ರಂಗರಾಣಿ (Usha Rangrani) ತಿಳಿಸಿದ್ದಾರೆ.

ಏಪ್ರಿಲ್ 16 ರಂದು ಜಹಾಂಗೀರ್‌ಪುರಿ ಪ್ರದೇಶದಲ್ಲಿ ನಡೆದ ಗಲಭೆಯಲ್ಲಿ ವ್ಯಕ್ತಿಯೊಬ್ಬ (ನೀಲಿ ಕುರ್ತಾದಲ್ಲಿದ್ದ) ಗುಂಡು ಹಾರಿಸುತ್ತಿರುವುದನ್ನು ತೋರಿಸುವ ವೀಡಿಯೊ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಸುತ್ತು ಹೊಡೆಯುತ್ತಿತ್ತು. ಈ ವಿಡಿಯೋ ಗಮನಿಸಿ ವಾಯುವ್ಯ ಜಿಲ್ಲೆಯ ಪೊಲೀಸ್ ತಂಡವು ಸಿಡಿ ಪಾರ್ಕ್ (CD Park Road) ರಸ್ತೆಯಲ್ಲಿರುವ ಆರೋಪಿ ಮನೆಗೆ ಹೋಗಿ ಆತನಿಗೆ ತಲಾಶ್‌ ಮಾಡಿದ್ದಲ್ಲದೇ ಆತನ ಕುಟುಂಬ ಸದಸ್ಯರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಕುಟುಂಬಸ್ಥರು ಇಬ್ಬರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾನೂನು ಕ್ರಮ (Legal action) ಕೈಗೊಳ್ಳಲಾಗುತ್ತಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಮತ್ತು ಈಗ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ವಾಯುವ್ಯ ಡಿಸಿಪಿ ಉಷಾ ರಂಗರಾಣಿ ಹೇಳಿದ್ದಾರೆ.

Jahangirpuri Violence: ದೆಹಲಿಯಯಲ್ಲಿ ಶೋಭಾಯಾತ್ರೆ ವೇಳೆ ದುಷ್ಕೃತ್ಯ: ಹನುಮ ಜಯಂತಿ ಯಾತ್ರೆಗೆ ಕಲ್ಲೇಟು
ಮಧ್ಯಾಹ್ನದ ಘಟನೆಯ ನಂತರ ಪೊಲೀಸರು, ಆರ್‌ಎಎಫ್ ಮತ್ತು ಸಿಆರ್‌ಪಿ ರಸ್ತೆಗೆ ಪ್ರವೇಶ ನಿರ್ಬಂಧಿಸಿದರು. ಕುಶಾಲ್ ಚೌಕ್ ಸುತ್ತಮುತ್ತಲ ಗಲಭೆ ಪೀಡಿತ ಪ್ರದೇಶ ಆರ್‌ಎಎಫ್ ಮತ್ತು ಸಿಆರ್‌ಪಿ ಸೇರಿದಂತೆ ಎಲ್ಲೆಡೆ ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮನೆ ಇರುವ ಕಿರಿದಾದ ಮಾರ್ಗದಲ್ಲಿ ಕಲ್ಲುಗಳನ್ನು ಎಸೆಯಲಾಯಿತು. ಇದಾದ ಬಳಿಕ ಈ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಪ್ರವೇಶವನ್ನು ಮುಚ್ಚಿದರು ಮತ್ತು ನಿಧಾನವಾಗಿ ಎಲ್ಲಾ ಮಾಧ್ಯಮ ಸಿಬ್ಬಂದಿಯನ್ನು ಕುಶಾಲ್ ಚೌಕ್‌ (Kushal Chowk) ಹೊರಕ್ಕೆ ತಳ್ಳಿದರು ಮತ್ತು ಮುಖ್ಯ ರಸ್ತೆಯನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಿದರು. ಗಲಭೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಇದುವರೆಗೆ 23 ಜನರನ್ನು ಬಂಧಿಸಲಾಗಿದೆ ಮತ್ತು ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ.

ಜಹಾಂಗೀರಪುರಿ ಹಿಂಸಾಚಾರ: ಭಯಾನಕ ಚಿತ್ರಣ ಬಿಚ್ಚಿಟ್ಟ ಪೊಲೀಸ್ ಅಧಿಕಾರಿ
ಸೆಕ್ಷನ್ 147 (ಗಲಭೆ), 148 (ಗಲಭೆ, ಮಾರಣಾಂತಿಕ ಶಸ್ತ್ರಾಸ್ತ್ರ), 149 (ಕಾನೂನುಬಾಹಿರ ಸಭೆ), 307 (ಕೊಲೆಗೆ ಯತ್ನ), 120-ಬಿ (ಅಪರಾಧದ ಪಿತೂರಿ), 186 (ಅಡಚಣೆ) ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವ ಸಾರ್ವಜನಿಕ ಸೇವಕ), 353 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಆಕ್ರಮಣ ಅಥವಾ ಕ್ರಿಮಿನಲ್ ಬಲ), 332 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯದಿಂದ ತಡೆಯಲು ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು), 323 (ನೋವು ಉಂಟುಮಾಡುವುದು), 436 (ಅಪರಾಧದಿಂದ ಬೆಂಕಿ), 34 (ಸಾಮಾನ್ಯ ಉದ್ದೇಶ) ಮತ್ತು ಭಾರತೀಯ ದಂಡ ಸಂಹಿತೆಯ 427 (ಐವತ್ತು ರೂಪಾಯಿಗಳ ಮೊತ್ತಕ್ಕೆ ಹಾನಿ ಉಂಟುಮಾಡುವ ಕಿಡಿಗೇಡಿತನ) ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 27 ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು