ಜನ ಬೇಕಾಬಿಟ್ಟಿ ಸೇರೋಕೆ ಬಿಟ್ಟ ರಾಜ್ಯದಲ್ಲೆಲ್ಲಾ ಕೊರೋನಾ ಏರಿಕೆ | ಕಂಟ್ರೋಲ್‌ಗೆ ಸಿಗದಷ್ಟು ತಾರಕಕ್ಕೇರಿದ ಕೊರೋನಾ
ದೆಹಲಿ(ಏ.29): ಏಪ್ರಿಲ್ 27 ರಂದು ಹರಿದ್ವಾರದ ಕುಂಭಮೇಳದಲ್ಲಿ ಕೊನೆಯ 'ಶಾಹಿ ಸ್ನ್ಯಾನ್' ನಡೆಯಿತು. COVID-19 ಪ್ರಕರಣಗಳಲ್ಲಿ ರಾಷ್ಟ್ರವ್ಯಾಪಿ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಆಚರಣೆಯನ್ನು ಸಾಂಕೇತಿಕವಾಗಿ ಸೀಮಿತಗೊಳಿಸಲಾಯಿತು.
ಆದರೆ ಎಚ್ಚೆತ್ತುಕೊಂಡು ಸಾಂಕೇತಿಕ ಸ್ನಾನಕ್ಕೆ ನಿರ್ಧಾರ ಮಾಡಿದ್ದು ಮಾತ್ರ ಸ್ವಲ್ಪ ತಡವಾಯ್ತು. ಉತ್ತರಾಖಂಡ್‌ನ ಹರಿದ್ವಾರದಲ್ಲಿ ತಡವಾಗಿ ಎಚ್ಚೆತ್ತುಕೊಂಡಿದ್ದರಿಂದ ವಿಪತ್ತು ತಡೆಯುವಲ್ಲಿ ವಿಳಂಬ ಮಾಡಿದಂತಾಗಿದೆ.
undefined
ಪಾಕ್‌ನಿಂದ ಭಾರತಕ್ಕೆ ಸಾಲು ಸಾಲು ಆಕ್ಸಿಜನ್ ಟ್ಯಾಂಕರ್ ?
ಮಾರ್ಚ್ 31 ಮತ್ತು ಏಪ್ರಿಲ್ 24 ರ ನಡುವೆ ಉತ್ತರಾಖಂಡದಲ್ಲಿ 1,800 ರಷ್ಟು ಆಕ್ಟಿವ್ ಪ್ರಕರಣಗಳನ್ನು ದಾಖಲಾಗಿದೆ. ಇದಕ್ಕೆ ಸರಿಯಾಗಿ ಹರಿದ್ವಾರ ಮಹಾಕುಂಭಮೇಳವೂ ಸೇರಿತು. ಮಹಾಕುಂಭಕ್ಕೆ ಮುಂಚಿತವಾಗಿ, ಒಟ್ಟು ಸಕ್ರಿಯ ಪ್ರಕರಣಗಳು ಮಾರ್ಚ್ 31ರ ಅವಧಿಯಲ್ಲಿ 1,863 ಆಗಿದ್ದವು, ಆದರೆ ಏಪ್ರಿಲ್ 24 ರ ವೇಳೆಗೆ ದೈನಂದಿನ ಪ್ರಕರಣ 33,330 ಕ್ಕೆ ಏರಿತು.
ಕೋಲ್ಕತಾ ಮತ್ತು ಅದರ ಉಪನಗರಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಿಗೆ COVID-19 ಪಾಸಿಟಿವ್ ದೃಢಪಡುತ್ತಿದೆ. ರಾಜ್ಯದ ಉಳಿದ ಭಾಗಗಳಲ್ಲಿ, ನಾಲ್ಕು ಆರ್‌ಟಿ-ಪಿಸಿಆರ್ ವರದಿಗಳಲ್ಲಿ ಒಂದು COVID-19 ಪಾಸಿಟಿವ್ ಆಗುತ್ತಿದೆ.