
ನವದೆಹಲಿ(ಏ.29): ದೇಶಾದ್ಯಂತ ಸದ್ಯ ಎರಡನೇ ಕೊರೋನಾ ಅಲೆಯದ್ದೇ ಮಾತು. ಸಿಕ್ಕ ಸಿಕ್ಕವರನ್ನು ತನ್ನ ತೆಕ್ಕೆಗೆಳೆಯುತ್ತಿರುವ ಈ ಕೊರೋನಾ ಜನ ಸಾಆಮಾನ್ಯರ ಬದುಕನ್ನೇ ನರಕವನ್ನಾಗಿಸಿದೆ. ಹೀಗಿರುವಾಗ ದೇಶದಲ್ಲಿ ಲಸಿಕೆ ಅಭಿಯಾನ ಮುಂದುವರೆದಿದೆ. ಈಗಾಗಲೇ 45 ವರ್ಷಕ್ಕಿಂತ ಮೇಲಿನವರಿಗೆ ಲಸಿಕೆ ನೀಡಲಾಗಿದ್ದು, ಮೇ 1 ರಿಂದ ಹದಿನೆಂಟು ವರ್ಷಕ್ಕಿಂತ ಮೇಲಿನ ಹಾಗೂ 45 ವರ್ಷಕ್ಕಿಂತ ಕೆಳಗಗಿನವರಿಗೆ ಲಸಿಕೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ರಿಜಿಸ್ಟ್ರೇಶನ್ ಕೂಡಾ ಆರಂಭವಾಗಿದೆ. ಆದರೆ ಇವೆಲ್ಲದರ ನಡುವೆ ಕೇಂದ್ರದಿಂದ ರಾಜ್ಯಗಳಿಗೆ ವಿತರಣೆಯಾಗಿರುವ ಲಸಿಕೆ ಕುರಿತಾಗಿ ಅನೇಕ ಮಾತುಗಳು ಕೇಳಿ ಬಂದಿವೆ.
ಹೌದು ಕೇಂದ್ರ ತನ್ನಿಚ್ಛೆಯಂತೆ ಲಸಿಕೆ ವಿತರಣೆ ಮಾಡಿದೆ. ತನ್ನ ಸರ್ಕಾರವಿರುವ ರಾಜ್ಯಗಳಿಗೆ ಹೆಚ್ಚಿನ ಲಸಿಕೆ ವಿತರಣೆ ಮಾಡಿದೆ ಎಂಬಿತ್ಯಾದಿ ಮಾತುಗಳು ಭಾರೀ ಸದ್ದು ಮಾಡುತ್ತಿವೆ. ಈ ನಡುವೆ ಲಸಿಕೆಗೆ ಹೆಚ್ಚಿ ಬೇಡಿಕೆ ಕೇಳಿ ಬಂದಿದ್ದು, ಅನೇಕ ಕಡೆ ಲಸಿಕೆ ಅಭಾವ ಕಂಡು ಬಂದಿದೆ. ಹೀಗಿರುವಾಗ ಕೇಂದ್ರ ಎಷ್ಟು ಲಸಿಕೆ ಈವರೆಗೆ ರಾಜ್ಯಗಳಿಗೆ ವಿತರಿಸಿದೆ. ಯಾವ ರಾಜ್ಯಕ್ಕೆ ಅತೀ ಹೆಚ್ಚು, ಯಾವ ರಾಜ್ಯಕ್ಕೆ ಅತೀ ಕಡಿಮೆ ಲಸಿಕೆ ಡೋಸ್‌ಗಳನ್ನು ಕಳುಹಿಸಿದೆ? ಎಂಬಿತ್ಯಾದಿ ಸವಾಲುಗಳಿಗೆ ಇಲ್ಲಿದೆ ಉತ್ತರ.
ಲಸಿಕೆ ವಿತರಣೆಯಾಗಿರುವ ಬಗ್ಗೆ ಪಿಐಬಿ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಈ ಟ್ವೀಟ್‌ನಲ್ಲಿ ಕೇಂದ್ರ ಸರ್ಕಾರ ಈವರೆಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 16 ಸಾವಿರ ಲಸಿಕೆ ಡೋಸ್‌ಗಳನ್ನು ಉಚಿತವಾಗಿ ನೀಡಿದೆ. ಈಗಾಗಲೇ ವಿತರಿಸಲಾಗಿರುವ ಲಸಿಕೆಯಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಒಂದು ಕೋಟಿ ಡೋಸ್ ಉಳಿದಿದೆ. ಅಲ್ಲದೇ ಮುಂದಿನ ಮೂರು ದಿನಗಳೊಳಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ 57 ಲಕ್ಷ ಡೋಸ್‌ಗಳು ಸಿಗಲಿವೆ ಎಂದು ತಿಳಿಸಲಾಗಿದೆ.
ಇನ್ನು ಕೇಂದ್ರ ಲಸಿಕೆ ವಿತರಣೆ ವಿಚಾರವಾಗಿ ಭೇದ ಭಾವ ಮಾಡುತ್ತಿದೆ, ಕೆಲ ರಾಜ್ಯಗಳಿಗೆ ಕಡಿಮೆ ಲಸಿಕೆ ವಿತರಿಸುತ್ತಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಆದರೆ ಯಾವ ರಾಜ್ಯದಲ್ಲಿ ಹೆಚ್ಚು ಜನ ಸಂಖ್ಯೆ ಇದೆ, ಯಾವ ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚು ಇದೆ ಅಂತಹ ರಾಜ್ಯಗಳಿಗೆ ಹೆಚ್ಚು ಡೋಸ್ ವಿತರಿಸಿದೆ. ಮಹಾಮಾರಾಷ್ಟ್ರಕ್ಕೆ ಅತೀ ಹೆಚ್ಚು ಲಸಿಕೆ ವಿತರಣೆಯಾಗಿದ್ದು, ಉತ್ತರ ಪ್ರದೇಶ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಹಾಗೂ ರಾಜಸ್ಥಾನ ಮೂರನೇ ಸ್ಥಾನದಲ್ಲಿದೆ. ಇನ್ನು ನಮ್ಮ ಕರ್ನಾಟಕ ಲಸಿಕೆಯ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
"
ಕರ್ನಾಟಕಕ್ಕೆ ಸಿಕ್ಕ ಲಸಿಕೆ ಲೆಕ್ಕಾಚಾರ
ಕರ್ನಾಟಕಕ್ಕೆ 6,66,27,000 ಡೋಸ್ ವ್ಯಾಕ್ಸಿನ್ ಅಗತ್ಯ ಅಂದಾಜಿಸಲಾಗಿದೆ
ಇಲ್ಲಿಯವರೆಗೆ 98,47,900ಡೊಸ್ ಕರ್ನಾಟಕ ರಾಜ್ಯಕ್ಕೆ ರವಾನೆಯಾಗಿದೆ
ಕರ್ನಾಟಕದಲ್ಲಿ ಲಸಿಕೆ 0.14 ರಷ್ಟು ಹಾಳಾಗಿದೆ
ಇಲ್ಲಿಯವರೆಗೆ ಲಸಿಕೆಯಲ್ಲಿ ಹಾಳಾಗಿರೋದು ಸೇರಿ 92,90,551 ಡೋಸ್ ಬಳಕೆಯಾಗಿದೆ
ಕರ್ನಾಟಕ ರಾಜ್ಯದ ಬಳಿ 5,57,349 ಡೋಸ್ ಬಳಕೆಗೆ ಸಿದ್ದವಾಗಿದೆ
ಕರ್ನಾಟಕಕ್ಕೆ 6,66,27,000 ಡೋಸ್ ವ್ಯಾಕ್ಸಿನ್ ಅಗತ್ಯ ಅಂದಾಜಿಸಲಾಗಿದೆ
ಇಲ್ಲಿಯವರೆಗೆ 98,47,900ಡೊಸ್ ಕರ್ನಾಟಕ ರಾಜ್ಯಕ್ಕೆ ರವಾನೆಯಾಗಿದೆ
ಕರ್ನಾಟಕದಲ್ಲಿ ಲಸಿಕೆ 0.14 ರಷ್ಟು ಹಾಳಾಗಿದೆ
ಇಲ್ಲಿಯವರೆಗೆ ಲಸಿಕೆಯಲ್ಲಿ ಹಾಳಾಗಿರೋದು ಸೇರಿ 92,90,551 ಡೋಸ್ ಬಳಕೆಯಾಗಿದೆ
ಕರ್ನಾಟಕ ರಾಜ್ಯದ ಬಳಿ 5,57,349 ಡೋಸ್ ಬಳಕೆಗೆ ಸಿದ್ದವಾಗಿದೆ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ