Breaking ಮಾನ್ಸಾ ದೇವಿ ದೇಗುಲುದಲ್ಲಿ ಭೀಕರ ಕಾಲ್ತುಳಿತ, 6 ಭಕ್ತರು ಸಾವು

Published : Jul 27, 2025, 11:06 AM ISTUpdated : Jul 27, 2025, 11:10 AM IST
Mansa Devi temple stampede

ಸಾರಾಂಶ

ಮಾನ್ಸಾ ದೇವಿ ದೇಗುಲದಲ್ಲಿ ಏಕಾಏಕಿ ಸಾವಿರಾರು ಭಕ್ತರು ಸೇರಿದ ಕಾರಣ ಭೀಕರ ಕಾಲ್ತುಳಿತ ಸಂಭವಿಸಿದೆ. ಪವಿತ್ರ ಶ್ರಾವಣ ಮಾಸದ ವಿಶೇಷ ಪೂಜೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ವೇಳೆ ಕಾಲ್ತುಳಿತ ಸಂಭವಿಸಿ 6 ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.

ಹರಿದ್ವಾರ (ಜು.27) ಪವಿತ್ರ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗೆ ಮಾನ್ಸಾ ದೇವಿ ದೇವಸ್ಥಾನದಲ್ಲಿ ಸಾವಿವಾರು ಭಕ್ತರು ಸೇರಿದ್ದಾರೆ. ಭಾನುವಾರ ರಜಾದಿನವಾಗಿರುವ ಕಾರಣ ಭಕ್ತರು ಸಂಖ್ಯೆ ಹೆಚ್ಚಾಗಿದೆ. ದಿಡೀರ್ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆತಂಕ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಸಂಭವಿಸಿದ ಕಾಲ್ತುಳಿತಿದ 6 ಭಕ್ತರು ಮೃತಪಟ್ಟಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ. ಗರ್ವಾಲ್ ಡಿವಿಷನ್ ಕಮಿಷನರ್ ಪೊಲೀಸ್ ವಿನಯ್ ಶಂಕರ್ ಪಾಂಡೆ 6 ಭಕ್ತರ ಸಾವು ಖಚಿತಪಡಿಸಿದ್ದಾರೆ. ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಶೇಷ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು

ಹರಿದ್ವಾರದ ಮಾನ್ಸಾ ದೇವಿ ದೇಗುಲ ಅತ್ಯಂತ ಪ್ರಸಿದ್ಧ ದೇವಸ್ಥಾನವಾಗಿದೆ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ ಲಕ್ಷ ದಾಟುತ್ತದೆ. ಇದೀಗ ಶ್ರಾವಣ ಮಾಸದ ವಿಶೇಷ ದಿನವಾಗಿರುವ ಕಾರಣ ಪ್ರತಿ ನಿತ್ಯ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಭಾನುವಾರ ಆಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ವಿಶೇಷ ಪೂಜೆ ಹಾಗೂ ಮಾನಸ ದೇವಿ ದರ್ಶನ ಪಡೆಯಲು ಭಕ್ತರು ಮಂದಾಗಿದ್ದಾರೆ. ಈ ವೇಳೆ ಸೃಷ್ಟಿಯಾದ ಆತಂಕ ಪರಿಸ್ಥಿತಿಯಿಂದ ಕಾಲ್ತುಳಿತ ಸಂಭವಿಸಿದೆ.

ಗಾಯಗೊಂಡವರ ಸಂಖ್ಯೆ ಏರಿಕೆ

ಕಾಲ್ತುಳಿತ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದೆ. ಸದ್ಯ ರಕ್ಷಣಾ ಕಾರ್ಯಗಳು ಮುಂದುವರಿದಿದೆ. ಈಗಾಗಲೇ 6 ಭಕ್ತರು ಮೃತಪಟ್ಟಿರುವುದು ಖಚಿತಗೊಂಡಿದೆ. 50ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಗೊಂಡವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯುತ್ ಶಾಕ್‌ನಿಂದ ಕಾಲ್ತುಳಿತ

ಕಾಲ್ತುಳಿತದಲ್ಲಿ ಗಾಯಗೊಂಡ ಹಲವರು ವಿದ್ಯುತ್ ಶಾಕ್‌ನಿಂದ ಘಟನೆ ಸಂಭವಿಸಿದೆ ಎಂದಿದ್ದಾರೆ. ದೇಗುಲದ ಆವರಣದಲ್ಲಿನ ವಿದ್ಯುತ್ ವಯರ್‌ನಿಂದ ಕೆಲ ಭಕ್ತರ ಮೈಗೆ ಶಾಕ್ ತಗುಲಿದೆ. ಈ ಘಟನೆಯಿಂದ ಸ್ಥಳದಿಂದ ಹೊರಕ್ಕೆ ಹೋಗಲು ಭಕ್ತರು ಆತುರ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಪ್ರವಹಿಸುವ ಮೊದಲ ಸ್ಥಳದಿಂದ ಹೊರಕ್ಕೆ ಹೋಗಲು ಯತ್ನಿಸಿದ ಕಾರಣ ಕಾಲ್ತುಳಿತ ಸಂಭವಿಸಿದೆ ಎಂದು ಭಕ್ತರು ಹೇಳಿದ್ದಾರೆ.

ಘಟನೆಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ

ಮಾಸನ ದೇವಿ ದೇಗುಲದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪರಿಸ್ತಿತಿ ನಿಯಂತ್ರಣಕ್ಕೆ ಪಡೆಯಲು ಪೊಲೀಸರು ಹಾಗೂ ರಕ್ಷಣಾ ತಂಡಕ್ಕೆ ಸೂಚನೆ ನೀಡಿದ್ದಾರೆ. ಇಷ್ಟೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಎಸ್‌ಡಿಆರ್‌ಫ್ ತಂಡವನ್ನು ರವಾನೆ ಮಾಡಲಾಗಿದೆ ಎಂದು ಧಮಿ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಟ್ರೆಂಡ್ ಶುರು ಮಾಡಿದ್ದು ಮೆಹಬೂಬಾ: ನಿತೀಶ್‌ಕುಮಾರ್ ಬುರ್ಖಾ ಎಳೆದಿದ್ದಕ್ಕೆ ಮುಫ್ತಿಗೆ ಒಮರ್ ಟಾಂಗ್
ಉರ್ವಶಿ ರೌಟೇಲಾ, ಯುವರಾಜ್ ಸಿಂಗ್, ಸೋನು ಸೂದ್‌ಗೆ ಇಡಿ ಶಾಕ್, ₹7.9ಕೋಟಿ ಆಸ್ತಿ ಮುಟ್ಟುಗೋಲು