ದೀಪಾವಳಿ ಬೋನಸ್ ಕೊಡದ ಕಾರಣ ಟೋಲ್ ಗೇಟ್ ತೆರೆದಿಟ್ಟ ಸಿಬ್ಬಂದಿ, ಸರ್ಕಾರಕ್ಕೆ ಭಾರಿ ನಷ್ಟ

Published : Oct 21, 2025, 03:48 PM IST
Toll Plaza Fastag

ಸಾರಾಂಶ

ದೀಪಾವಳಿ ಬೋನಸ್ ಕೊಡದ ಕಾರಣ ಟೋಲ್ ಗೇಟ್ ತೆರೆದಿಟ್ಟ ಸಿಬ್ಬಂದಿ, ಒಂದೇ ದಿನ ಭಾರಿ ನಷ್ಟ, ಹಬ್ಬದ ದಿನ ಅತೀ ಹೆಚ್ಚು ವಾಹನ ಟೋಲ್ ಗೇಟ್ ಮೂಲಕ ಸಾಗುವ ಕಾರಣ ಇಡೀ ವರ್ಷದ ಆದಾಯವೇ ಒಂದೇ ದಿನ ನಷ್ಟವಾಗಿದೆ. 

ಆಗ್ರ (ಅ.21) ದೀಪಾವಳಿ ಸಂಭ್ರಮದ ಎಲ್ಲೆಡೆ ಜೋರಾಗಿದೆ. ಹಲವು ಕಂಪನಿಗಳು ಹೆಚ್ಚುವರಿ ರಜೆ ನೀಡಿದೆ. ಬಹುತೇಕ ಕಂಪನಿಗಳು ದೀಪಾವಳಿ ಬೋನಸ್, ಹೆಚ್ಚುವರಿ ಸ್ಯಾಲರಿ, ಗಿಫ್ಟ್, ವೋಚರ್ ಸೇರಿದಂತೆ ಹಲವು ರೀತಿಯಲ್ಲಿ ಉದ್ಯೋಗಿಗಳ ಸಂಭ್ರಮ ಹೆಚ್ಚಿಸಿದೆ. ಈ ಮೂಲಕ ಉದ್ಯೋಗಿಗಳು ಕುಟುಂಬದ ಜೊತೆ ದೀಪಾವಳಿ ಆಚರಿಸಲು ಅನುವು ಮಾಡಿಕೊಟ್ಟಿದೆ. ಆದರೆ ಟೋಲ್ ಸಿಬ್ಬಂದಿಗಳಿಗೆ ದೀಪಾವಳಿ ಬೋನಸ್ ಕೊಡದ ಕಾರಣ ಇದೀಗ ಒಂದೇ ದಿನ ಲಕ್ಷ ಲಕ್ಷ ರೂಪಾಯಿ ನಷ್ಟವಾಗಿದೆ.ಸಿಬ್ಬಂದಿಗಳಿಗೆ ಈ ನಡೆಯಿದ ಕೇಂದ್ರ ಸರ್ಕಾರಕ್ಕೂ ಭಾರಿ ನಷ್ಟವಾದ ಘಟನೆ ಆಗ್ರ-ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿ ಬರುವ ಫತೇಬಾದ್ ಟೋಲ್ ಪ್ಲಾಜಾದಲ್ಲಿ ನಡೆದಿದೆ.

ಟೋಲ್ ಗೇಟ್ ತೆರೆದಿಟ್ಟ ಸಿಬ್ಬಂಧಿ

ಟೋಲ್ ಗೇಟ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ತಮಗೆ ದೀಪಾವಲಿ ಬೋನಸ್ ನೀಡಿಲ್ಲ ಎಂದು ರೊಚ್ಚಿಗೆದ್ದಿದ್ದಾರೆ. ಎಲ್ಲಾ ಹಬ್ಬದ ವೀಕೆಂಡ್,ರಜಾ ದಿನಗಳಲ್ಲಿ ನಾವು ಕೆಲಸ ಮಾಡುತ್ತೇವೆ. ಕನಿಷ್ಠ ಬೋನಸ್ ನಾವು ನಿರೀಕ್ಷೆ ಮಾಡಿದ್ದೆವು. ಆದರೆ ನಮಗೆ ಕೊಟ್ಟಿಲ್ಲ ಎಂದು ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ. ಬೋನಸ್ ನೀಡಿಲ್ಲ ಎಂಬ ಕಾರಣಕ್ಕೆ ಫತೇಬಾದ್ ಟೋಲ್ ಗೇಟ್ ತೆರೆದಿಟ್ಟಿದ್ದಾರೆ. ದೀಪಾವಳಿ ರಜಾ ದಿನದಲ್ಲೇ ಸಿಬ್ಬಂದಿಗಳು ಈ ರೀತಿ ಮಾಡಿದ್ದಾರೆ. ಇದರಿಂದ ಎಲ್ಲಾ ವಾಹನಗಳು ಟೋಲ್ ನೀಡದೆ ವೇಗವಾಗಿ ಸಾಗಿದೆ. ಸ್ಕ್ಯಾನ್ ಮಾಡುವ ಮುನ್ನವೇ ವಾಹನಗಳು ಟೋಲ್ ಗೇಟ್ ಮೂಲಕ ಸಾಗಿದೆ.

ನಮಗೆ ನಷ್ಟವಾಗಿದೆ, ಅವರಿಗೂ ಆಗಲಿ

ಟೋಲ್ ಸಿಬ್ಬಂಧಿ ಕೆಲಸ ಸುಲಭವಲ್ಲ. ಹೆಚ್ಚುವರಿ ಡ್ಯೂಟಿ ಮಾಡಬೇಕು. ನಮ್ಮ ವೇತನವೂ ಕಡಿಮೆ.ನಾವು ಹಬ್ಬದ ವೇಳೆ ಬೋನಸ್ ನಿರೀಕ್ಷೆ ಮಾಡಿದ್ದೆವು.ಆದರೆ ಕೊಟ್ಟಿಲ್ಲ. ಇದು ನಮ್ಮ ತಾಳ್ಮೆ ಪರೀಕ್ಷಿಸುವಂತೆ ಮಾಡಿತ್ತು ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ. ಒಂದು ದಿನ ಫತೇಬಾದ್ ಟೋಲ್ ಗೇಟ್ ತೆರೆದಿಡಲಾಗಿತ್ತು.

ಟೋಲ್ ಟೆಂಡರ್ ಪಡೆದವರ ಖಾತೆಗೆ ಭಾರಿ ನಷ್ಟ

ಟೋಲ್ ಟೆಂಡರ್ ಪಡೆದವರಿಗೆ ಸಿಬ್ಬಂದಿಗಳ ಈ ನಡೆಯಿಂದ ಭಾರಿ ನಷ್ಟವಾಗಿದೆ. ದೀಪಾವಳಿ ಹಬ್ಬದ ವೇಳೆ ಅತೀ ಹೆಚ್ಚು ಮಂದಿ ವಾಹನ ಮೂಲಕ ತೆರಳುತ್ತಾರೆ. ಆದರೆ ಟೋಲ್ ನೀಡದೆ ಸಾಗಿದ ಕಾರಣ ಒಂದೇ ದಿನ ಲಕ್ಷ ಲಕ್ಷ ರೂಪಾಯಿ ನಷ್ಟವಾಗಿದೆ. ಟೋಲ್ ಟೆಂಡರ್ ಪಡೆವರಿಗೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಈ ನಡೆಯಿಂದ ಬಾರಿ ನಷ್ಟವಾಗಿದೆ.

ಶಿರ್ಸಾಯಿ ಹಾಗೂ ದಾತರ್ ಕಂಪನಿ ವಿರುದ್ದ ಸಿಬ್ಬಂದಿಗಳ ಆಕ್ರೋಶ

ಶಿರ್ಸಾಯಿ ಹಾಗೂ ದಾತರ್ ಎಂಬ ಎರಡು ಕಂಪನಿಗಳು ಆಗ್ರಾ ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿರುವ ಬಹುತೇಕ ಟೋಲ್ ನಿರ್ವಹಣೆ ಮಾಡುತ್ತಿದೆ. ಕಂಪನಿ ದೀಪಾವಳಿ ಬೋನಸ್ ನೀಡುವುದಾಗಿ ಘೋಷಿಸಿತ್ತು. ಆದರೆ ದೀಪಾವಳಿ ಹಬ್ಬ ಬಂದರೂ ಬೋನಸ್ ಖಾತೆಗೆ ಹಾಕಿಲ್ಲ. ಹೀಗಾಗಿ ಪ್ರಿತಭಟನೆ ಮಾಡದೇ ಬೇರೆ ದಾರಿ ಇರಲಿಲ್ಲ ಎಂದು ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ.

10 ಗಂಟೆ ಟೋಲ್ ಗೇಟ್ ಓಪನ್

ಬರೋಬ್ಬರಿ 10 ಗಂಟೆಗಳ ಕಾಲ ಟೋಲ್ ಗೇಟ್ ತೆರೆದಿಡಲಾಗಿತ್ತು. ಹಬ್ಬ ಹಾಗೂ ವಾರಾಂತ್ಯದ ರಜಾ ದಿನದ ವೇಳೆಯೇ ಈ ರೀತಿ ಪ್ರತಿಭಟನೆ ಮಾಡಲಾಗಿದೆ. ಹೀಗಾಗಿ ಅಪಾರ ನಷ್ಟವಾಗಿದೆ. ಬರೋಬ್ಬರಿ 10 ಗಂಟೆಗಳ ಕಾಲ ಯಾವುದೇ ಮಾತುಕತೆಗೂ, ಮನಒಲಿಕೆಗೆ ಸಿಬ್ಬಂದಿಗಳು ಜಗ್ಗಿಲ್ಲ. ಬಳಿಕ ಬೋನಸ್ ನೀಡುವ ಭರವಸೆ ನೀಡಿದ ಬಳಿಕ ಟೋಲ್ ಗೇಟ್ ಮುಚ್ಚಿ, ಎಂದಿನಂತೆ ಕಾರ್ಯನಿರ್ವಹಣೆ ಮಾಡಲಾಗಿದೆ. ಶೀಘ್ರದಲ್ಲೇ ಬೋನಸ್ ಬರದಿದ್ದರೆ ಮತ್ತೆ ಪ್ರತಿಭಟನೆ ಮಾಡುವುದಾಗಿ ಸಿಬ್ಬಂದಿಗಳು ಎಚ್ಚರಿಸಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್